ಬಸಾಪುರ ಕೆರೆ ಬಿಟ್ಟು ಕೊಡದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ: ಮೂಕಪ್ಪ ಮೇಸ್ತ್ರಿ
ಕೊಪ್ಪಳ, 08 ಜುಲೈ (ಹಿ.ಸ.) ಆ್ಯಂಕರ್ : ನಗರಸಭೆ ಆವರಣದ ಬಲ್ಡೋಟ ವಿರೋಧಿ ಹಾಗೂ 22 ಹಳ್ಳಿಗಳ ಕಾರ್ಖಾನೆ ಮಾಲಿನ್ಯ ವಿರೋಧಿಸಿ ನಡೆದ 251ನೇ ದಿನದ ಧರಣಿಯಲ್ಲಿ ಬಸಾಪುರ ಗ್ರಾಮದ ಹೋರಾಟಗಾರ ಮೂಕಪ್ಪ ಮೇಸ್ತ್ರಿ ಇವರು ಮಾತನಾಡಿದರು. ಹೋರಾಟಗಾರ ವೇದಿಕೆಯಲ್ಲಿ ಮೇಸ್ತ್ರಿ ಮಾತನಾಡುತ್ತಾ ನಮ್ಮ ಗ್ರಾಮದ ಕೆರೆ ಮ
ಕೊಪ್ಪಳ


ಕೊಪ್ಪಳ, 08 ಜುಲೈ (ಹಿ.ಸ.)

ಆ್ಯಂಕರ್ : ನಗರಸಭೆ ಆವರಣದ ಬಲ್ಡೋಟ ವಿರೋಧಿ ಹಾಗೂ 22 ಹಳ್ಳಿಗಳ ಕಾರ್ಖಾನೆ ಮಾಲಿನ್ಯ ವಿರೋಧಿಸಿ ನಡೆದ 251ನೇ ದಿನದ ಧರಣಿಯಲ್ಲಿ ಬಸಾಪುರ ಗ್ರಾಮದ ಹೋರಾಟಗಾರ ಮೂಕಪ್ಪ ಮೇಸ್ತ್ರಿ ಇವರು ಮಾತನಾಡಿದರು. ಹೋರಾಟಗಾರ ವೇದಿಕೆಯಲ್ಲಿ ಮೇಸ್ತ್ರಿ ಮಾತನಾಡುತ್ತಾ ನಮ್ಮ ಗ್ರಾಮದ ಕೆರೆ ಮಾರುವ ಹಕ್ಕು ಯಾರಿಗೂ ಇಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಅವರು ಕೊಟ್ಟ ಈ ದೇಶದ ಸಂವಿಧಾನ ನಮಗೆ ಕೆರೆಯ ಮೇಲೆ ಸಂಪೂರ್ಣ ಹಕ್ಕು ಕೊಟ್ಟಿದೆ. ಈ ಕೆರೆಯನ್ನು ಸರ್ಕಾರ ಅಥವಾ ಖಾಸಗಿಯಾಗಿ ಯಾರೂ ಕಟ್ಟಿಕೊಟ್ಟಿಲ್ಲ. ನಮ್ಮ ಪೂರ್ವಿಕರು ಈ ಕೆರೆಯನ್ನು ಮುಂದಿನ ಪೀಳಿಗೆಗಾಗಿ ಬಳಕೆಯಾಗಲಿ ಎಂದು ಕಟ್ಟಿದ್ದಾರೆ.

ನಮ್ಮ ಗ್ರಾಮದ ಕಟು ವಿರೋಧದ ನಡುವೆಯೂ 2007 ರಲ್ಲಿ ಕೆರೆಯನ್ನು ಬಲ್ಡೋಟ ಕಂಪನಿಗೆ ಮಾರಿದ ಸರ್ಕಾರ ನಮ್ಮನ್ನು ಜೈಲಿಗೆ ಹಾಕಿತು. ಆವತ್ತಿನಿಂದ ಈವತ್ತಿನವರೆಗೆ ಕಂಪನಿ ಗೂಂಡಾಗಿರಿ ಮಾಡಿ, ಸರ್ಕಾರದ ಮೇಲೆ ಪ್ರಭಾವ ಮಾಡಿ 2024 ರಿಃದ ಹೈಕೋರ್ಟ್ ಆದೇಶವಿದ್ದರೂ ನೀರು ಬಳಸುವ ಹಕ್ಕು ಕಿತ್ತುಕೊಂಡು ಕೆರೆ ಸುತ್ತ ಬೃಹದಾಕಾರದ ಕಾಂಪೌಂಡ್ ಕಟ್ಟಿಕೊಂಡಿದೆ. ನಮ್ಮ ಕೆರೆಯ ಮೇಲೆಯೇ ಕಂಪನಿ ಮುಖ್ಯದ್ವಾರದ ಬಾಗಿಲು ಇಟ್ಟು ಕಂಪನಿ ತನ್ನ ಅಹಂಕಾರ ತೋರಿಸುತ್ತಿದೆ. ಸುತ್ತಲ ಹಳ್ಳಿಗಳ ಸಾವಿರಾರು ಜಾನುವಾರು ಈ ಬಾರಿಯ ಭೀಕರ ಬರದಿಂದ ಕುಡಿಯಲು ನೀರಿಲ್ಲದಿದ್ದರೂ ಜಿಲ್ಲಾಧಿಕಾರಿಗಳು ನನ್ನ ಮೇಲೆ ಬೇಕಾದರೆ ಕೇಸ್ ಹಾಕಿ ಜೈಲಿಗೆ ಕಳಿಸಿ ಎಂದು ಬೆದರಿಸುತ್ತಿದ್ದಾರೆ. ಇಲ್ಲಿನ ಜನಪ್ರತಿನಿದಿನಗಳು ನಮಗೇನೂ ಹಾನಿಯಾಗಿಲ್ಲ ಎನ್ನುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ನಾವೂ ಸಮಯಕ್ಕಾಗಿ ಕಾಯುತ್ತಿದ್ದೇವೆ. ಅವರು ನಮ್ಮನ್ನೆಲ್ಲ ಮರೆತು ರಾಜಕಾರಣ ಮಾಡಿದರೆ ಒಂದು ಗತಿ ತೋರಿಸಲು ಬಾಧಿತ ಹಳ್ಳಿಗಳ ಜನ ಸಿದ್ಧರಾಗಿದ್ದೇವೆ ಎಂದರು.

ಧರಣಿಯಲ್ಲಿ ನಿವೃತ್ತ ಪ್ರಾಚಾರ್ಯ ಬಿ.ಜಿ.ಕರಿಗಾರ, ನಿವೃತ್ತ ಕಾರ್ಮಿಕ ನಿರೀಕ್ಷಕ ಶಾಂತಯ್ಯ ಅಂಗಡಿ, ಪ್ರಕಾಶಕ ಡಿ.ಎಂ.ಬಡಿಗೇರ, ಕಾರ್ಮಿಕ ಮುಖಂಡ ಎಸ್. ಮಹಾದೇವಪ್ಪ ಮಾವಿನಮಡು, ನಿವೃತ್ತ ಉಪನ್ಯಾಸಕ ಶಂಭುಲಿಂಗಪ್ಪ ಹರಗೇರಿ, ರಾಜಶೇಖರ ಏಳುಭಾವಿ, ಡಾ. ಬಸವರಾಜ ಪೂಜಾರ, ಗವಿಸಿದ್ದಪ್ಪ ಮಾಲಿಪಾಟೀಲ್, ಶಿವಪ್ಪ ಜಲ್ಲಿ, ವೆಂಕಣ್ಣಾಚಾರ .ಬಿ. ಕಟ್ಟಿ, ಮಲ್ಲಪ್ಪ ಎಸ್. ಮಾದಿನೂರು ಪಾಲ್ಗೊಂಡರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande