ರಾಯಚೂರು : ಪೂರ್ಣಿಮಾ ಆಯುರ್ವೇದ ವೈದ್ಯಕೀಯ ಆಸ್ಪತ್ರೆಗೆ ನಭಾ ಮಾನ್ಯತೆ
ರಾಯಚೂರು, 06 ಜುಲೈ (ಹಿ.ಸ.) ಆ್ಯಂಕರ್ : ನಗರದ ಪ್ರತಿಷ್ಠಿತ ಪೂರ್ಣಿಮಾ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಇತ್ತೀಚೆಗೆ ರಾಷ್ಟ್ರೀಯ ಗುಣಮಟ್ಟ ಮಂಡಳಿಯಿಂದ ಆಸ್ಪತ್ರೆಗಳು ಮತ್ತು ಆರೋಗ್ಯ ಸೇವೆ ಒದಗಿಸುವವರಿಗಾದ ರಾಷ್ಟ್ರೀಯ ಮಾನ್ಯತಾ ಮಂಡಳಿ ನಭಾ ಮಾನ್ಯತೆಯನ್ನು ಪ
Poornima Ayurveda Medical Hospital gets NABH accreditation


ರಾಯಚೂರು, 06 ಜುಲೈ (ಹಿ.ಸ.)

ಆ್ಯಂಕರ್ : ನಗರದ ಪ್ರತಿಷ್ಠಿತ ಪೂರ್ಣಿಮಾ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಇತ್ತೀಚೆಗೆ ರಾಷ್ಟ್ರೀಯ ಗುಣಮಟ್ಟ ಮಂಡಳಿಯಿಂದ ಆಸ್ಪತ್ರೆಗಳು ಮತ್ತು ಆರೋಗ್ಯ ಸೇವೆ ಒದಗಿಸುವವರಿಗಾದ ರಾಷ್ಟ್ರೀಯ ಮಾನ್ಯತಾ ಮಂಡಳಿ ನಭಾ ಮಾನ್ಯತೆಯನ್ನು ಪಡೆದುಕೊಂಡಿದೆ.

ಆಯುರ್ವೇದ ಚಿಕಿತ್ಸೆಯಲ್ಲಿ ಅತ್ಯುತ್ತಮ ಗುಣಮಟ್ಟ ಮತ್ತು ರೋಗಿಗಳಿಗೆ ನೀಡುವ ವೈದ್ಯಕೀಯ ಸೇವೆಯನ್ನು ಪರಿಗಣಿಸಿ ಈ ಮಾನ್ಯತೆ ಯನ್ನು ನೀಡಲಾಗಿದೆ.

ಈ ಸಾಧನೆಯನ್ನುಕುರಿತು ಚೇರ್ಮನ್ನರಾದ ಶ್ರೀ ಎಸ್. ಎಲ್. ಕೇಶವ ರೆಡ್ಡಿಯವರು ಈ ನಭಾ ಮಾನ್ಯತೆಯು ನಮ್ಮ ಆಸ್ಪತ್ರೆಯ ವೈದ್ಯಕೀಯ ಸೇವೆ, ಶುಚಿತ್ವ, ಸುರಕ್ಷತೆ ಮತ್ತು ರೋಗಿಗಳ ಆರೈಕೆಯಲ್ಲಿ ನಾವು ಕಾಪಾಡಿಕೊಂಡಿರುವ ಉನ್ನತ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಇದು ನಮ್ಮ ಸಂಸ್ಥೆಯ ಪಾಲಿಗೆ ಹೆಮ್ಮೆಯ ವಿಷಯವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಸೇವೆಯನ್ನು ಸಾರ್ವಜನಿಕರಿಗೆ ಒದಗಿಸಲು ಇದು ಸ್ಪೂರ್ತಿಯಾಗಿದೆ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿಸಂಸ್ಥೆಯ ಉಪಾಧ್ಯಕ್ಷರಾದ ಡಾ. ರೇಖಾ ಕೇಶವ ರೆಡ್ಡಿ, ಸದಸ್ಯರಾದ ಡಾ. ಪೂರ್ಣಿಮಾ, ಶ್ರೀ ಪ್ರಭಾತ ರೆಡ್ಡಿ, ವೀರಶೈವ ಸಮಾಜದ ಹಿರಿಯ ಮುಖಂಡರಾದ ಶ್ರೀ ಅಶೋಕ ಪಾಟೀಲ್, ಜಿಲ್ಲಾ ರೆಡ್ಕ್ರಾಸ್ ಸಂಸ್ಥೆಯ ಶಿಕ್ಷಣ ವಿಭಾಗದ ಜಿಲ್ಲಾ ಸಂಚಾಲಕರಾದ ಡಾ. ದಂಡಪ್ಪ ಬಿರಾದಾರ: ಶ್ರೀ ಮಲ್ಲಿಕಾರ್ಜುನ ಸ್ವಾಮಿ: ಜಿಲ್ಲಾ ಪತ್ರಿಕಾ ಛಾಯಾಚಿತ್ರ ವರದಿಗಾರರು, ಶ್ರೀ ವೀರೇಶ ಸ್ವಾಮಿ: ರಾಜಕೀಯ ಮುಖಂಡರು ಉಪಸ್ಥಿತರಿದ್ದರು,

ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಚಂದ್ರಶೇಖರರಡ್ಡಿ ಕರಮುಡಿ, ನಭಾ ಸಂಯೋಜಕರಾದ ಡಾ. ಸಂತೋಷ್ ಕುಮಾರ್, ಉಪ ವೈದ್ಯಕೀಯ ಅಧೀಕ್ಷಕರಾದ ಡಾ. ಬಸವರಾಜ, ಶೈಕ್ಷಣಿಕ ಸಂಯೋಜಕರಾದ ಡಾ. ಉಮಾ ಎಂ. ಯಾಳಗಿಯವರು ಹರ್ಷವ್ಯಕ್ತಪಡಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande