ಬಳ್ಳಾರಿಯಲ್ಲಿ ಮಹಾ ವರುಣ ಯಾಗ: ಉತ್ತಮ ಮಳೆ, ಸಂವೃದ್ಧಿಗಾಗಿ ಪೂಜೆ
ಬಳ್ಳಾರಿ, 06 ಜುಲೈ (ಹಿ.ಸ.) ಆ್ಯಂಕರ್ : ರಾಜ್ಯಾದ್ಯಂತ ಉತ್ತಮ ಮಳೆಯಾಗಿ ರೈತರ ಬದುಕು ಹಸನಾಗಲಿ ಎಂಬ ಆಶಯದಿಂದ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ಅವರು ನಗರ ಗ್ರಾಮದೇವತೆ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಮಹಾ ವರುಣಯಾಗ, ಹೋಮ-ಹವನ ಹಾಗೂ ವಿಶೇಷ ಪೂಜೆಗಳನ್ನು ಸೋಮವಾರ ನೆರವೇರಿಸಿದ್ದ
ಬಳ್ಳಾರಿಯಲ್ಲಿ ಮಹಾ ವರುಣ ಯಾಗ: ಉತ್ತಮ ಮಳೆ, ಸಂವೃದ್ಧಿಗಾಗಿ ಪೂಜೆ


ಬಳ್ಳಾರಿಯಲ್ಲಿ ಮಹಾ ವರುಣ ಯಾಗ: ಉತ್ತಮ ಮಳೆ, ಸಂವೃದ್ಧಿಗಾಗಿ ಪೂಜೆ


ಬಳ್ಳಾರಿ, 06 ಜುಲೈ (ಹಿ.ಸ.)

ಆ್ಯಂಕರ್ : ರಾಜ್ಯಾದ್ಯಂತ ಉತ್ತಮ ಮಳೆಯಾಗಿ ರೈತರ ಬದುಕು ಹಸನಾಗಲಿ ಎಂಬ ಆಶಯದಿಂದ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ಅವರು ನಗರ ಗ್ರಾಮದೇವತೆ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಮಹಾ ವರುಣಯಾಗ, ಹೋಮ-ಹವನ ಹಾಗೂ ವಿಶೇಷ ಪೂಜೆಗಳನ್ನು ಸೋಮವಾರ ನೆರವೇರಿಸಿದ್ದಾರೆ.

ಕನಕ ದುರ್ಗಮ್ಮ ದೇವಸ್ಥಾನದ ಆವರಣದಲ್ಲಿ ವಿಶೇಷ ಪೂಜೆ, ಸಂಕಲ್ಪ, ಹೋಮ - ಹವನಗಳನ್ನು ನಡೆಸಿದ ಬಿ. ನಾಗೇಂದ್ರ ಅವರ ಸಹೋದರ ಬಿ. ವೆಂಕಟೇಶ ಪ್ರಸಾದ್ ಅವರು, ನಾಡಿನಾದ್ಯಂತ ಉತ್ತಮ ಮಳೆಯಾಗಲಿ, ಕೃಷಿ ಸಮೃದ್ಧಿಯಾಗಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು.

ಜಿಲ್ಲಾ ನಗರ ಕಾಂಗ್ರೆಸ್ ಅಧ್ಯಕ್ಷರಾದ ಅಲ್ಲಂ ಪ್ರಶಾಂತ್, ಬುಡಾ ಅಧ್ಯಕ್ಷರಾಗಿರುವ ಜೆ.ಎಸ್. ಆಂಜನೇಯುಲು, ಮೇಯರ್ ಪಿ. ಗಾದೆಪ್ಪ, ಲಿಡ್ಕರ್ ಅಧ್ಯಕ್ಷರಾಗಿರುವ ಮುಂಡ್ರಗಿ ನಾಗರಾಜ್, ಮುಖಂಡರಾದ ವೆಂಕಟೇಶ್ ಹೆಗಡೆ, ಗ್ಯಾರೆಂಟಿ ಅಧ್ಯಕ್ಷ ಕೆ.ಇ. ಚಿದಾನಂದಪ್ಪ, ಮಾಜಿ ಮೇಯರ್ ಮುಲ್ಲಂಗಿ ನಂದೀಶ್ ಇನ್ನಿತರರು ಪಾಲ್ಗೊಂಡಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande