
ರಾಯಚೂರು , 06 ಜುಲೈ (ಹಿ.ಸ.):
ಆ್ಯಂಕರ್ : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್ಐಆರ್) ಭಾಗವಾಗಿ ಜುಲೈ 05ರ ಭಾನುವಾರ ಸಂಜೆ ವೇಳೆಗೆ ಜಿಲ್ಲಾದ್ಯಂತ ಇವರೆಗೆ 12,19,859 ಲಕ್ಷ ಮತದಾರರ ಗಣತಿ ನಮೂನೆಯನ್ನು ವಿತರಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 17,14,559 ಮತದಾರರ ಪೈಕಿ ಈವರೆಗೆ ಶೇ.71.15ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ರಾಯಚೂರು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿಗಳಾದ ಪೂವಿತಾ ಎಸ್. ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ವಿತರಿಸಲಾದ ಗಣತಿ ನಮೂನೆಗಳ ಪೈಕಿ 2.38 ಲಕ್ಷ ಮತದಾರರ ನಮೂನೆಗಳನ್ನು ಡಿಜಿಟಲೀಕರಿಸಲು ಸಾಧ್ಯವಾಗಿದೆ. 1051 ಮತದಾರರು ಈವರೆಗೆ ಆನ್ಲೈನ್ ಮೂಲಕ ಗಣತಿ ನಮೂನೆಗಳನ್ನು ಭರ್ತಿ ಮಾಡಿದ್ದಾರೆ.
ಸ್ಥಳದಲ್ಲಿ ಇಲ್ಲದ, ಬೇರೆ ವಿಳಾಸಕ್ಕೆ ಸ್ಥಳಾಂತರವಾದ, ಮೃತಪಟ್ಟ ಮತ್ತು ಎರಡು ಕಡೆ ನೋಂದಣಿಯಾದ ಒಟ್ಟು 3009 ಮತದಾರರ ವಿವರ ಲಭ್ಯವಾಗಿದೆ .
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್