ಗುರು ಪೂರ್ಣಿಮೆ: ಶಿಕ್ಷಕರ ಸೇವೆ ಸ್ಮರಿಸಿದ ಸಿದ್ದರಾಮಯ್ಯ
ಬೆಂಗಳೂರು, 29 ಜುಲೈ (ಹಿ.ಸ.): ಆ್ಯಂಕರ್:ಗುರು ಪೂರ್ಣಿಮೆಯ ಅಂಗವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡು, ತಮ್ಮ ಬದುಕು ರೂಪಿಸುವಲ್ಲಿ ಶಿಕ್ಷಕರ ಪಾತ್ರವನ್ನು ಸ್ಮರಿಸಿದ್ದಾರೆ. ಎಕ್ಸ್‌ನಲ್ಲಿ ಪ್ರಕಟಿಸಿರುವ ಸಂದೇಶದಲ್ಲಿ, ಬಾಲ್ಯದಲ್ಲಿ ಶಾಲೆಯ ಮೆಟ್ಟಿಲೇ ಹತ್ತದ
ಸಿದ್ದರಾಮಯ್ಯ ಎಕ್ಸ್ ಪೋಸ್ಟ್ ಪೋಟೋ


ಬೆಂಗಳೂರು, 29 ಜುಲೈ (ಹಿ.ಸ.):

ಆ್ಯಂಕರ್:ಗುರು ಪೂರ್ಣಿಮೆಯ ಅಂಗವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡು, ತಮ್ಮ ಬದುಕು ರೂಪಿಸುವಲ್ಲಿ ಶಿಕ್ಷಕರ ಪಾತ್ರವನ್ನು ಸ್ಮರಿಸಿದ್ದಾರೆ.

ಎಕ್ಸ್‌ನಲ್ಲಿ ಪ್ರಕಟಿಸಿರುವ ಸಂದೇಶದಲ್ಲಿ, ಬಾಲ್ಯದಲ್ಲಿ ಶಾಲೆಯ ಮೆಟ್ಟಿಲೇ ಹತ್ತದ ತಮ್ಮನ್ನು ಶಿಕ್ಷಕರಾದ ರಾಜಪ್ಪ ಮೇಸ್ಟ್ರು ಕೈಹಿಡಿದು ತರಗತಿಯಲ್ಲಿ ಕೂರಿಸಿ, ಜ್ಞಾನದ ಜೊತೆಗೆ ಬದುಕಿನ ಪಾಠ ಕಲಿಸಿರಲಿಲ್ಲವಾದರೆ ಇಂದಿನ ಸ್ಥಾನಕ್ಕೆ ತಲುಪಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ. ರಾಜಪ್ಪ ಮೇಸ್ಟ್ರು ತೋರಿದ ಕಾಳಜಿಯೇ ತಮ್ಮ ಬದುಕನ್ನು ಬದಲಿಸಿತು ಎಂದು ಅವರು ತಿಳಿಸಿದ್ದಾರೆ.

ಶಿಕ್ಷಣ, ಹೋರಾಟ, ರಾಜಕೀಯ ನಿಲುವು, ಸಾಮಾಜಿಕ ಕಾಳಜಿ ಹಾಗೂ ಸೈದ್ಧಾಂತಿಕ ಬದ್ಧತೆಯ ಅರಿವನ್ನು ಕೆಲವರು ತಿಳಿಹೇಳಿದರೆ, ಇನ್ನೂ ಅನೇಕರನ್ನು ನೋಡಿ ಕಲಿತಿದ್ದೇನೆ. ಅವರೆಲ್ಲರೂ ನನಗೆ ಗುರು ಸಮಾನರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಗುರು ಪೂರ್ಣಿಮೆಯ ಪವಿತ್ರ ದಿನದಂದು ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಮೌಲ್ಯಗಳನ್ನು ಬೋಧಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಪ್ರತಿಯೊಬ್ಬ ಗುರುವನ್ನು ಸ್ಮರಿಸಿ, ಅವರಿಗೆ ನಮನ ಸಲ್ಲಿಸೋಣ ಎಂದು ಅವರು ಕರೆ ನೀಡಿದ್ದಾರೆ

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande