ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗದಂತೆ ತಕ್ಷಣ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ
ತುಮಕೂರು, 28 ಜುಲೈ (ಹಿ.ಸ.): ಆ್ಯಂಕರ್: ತುಮಕೂರಿನಲ್ಲಿ ನಡೆದ ಭೂಸ್ವಾಧೀನ ಪ್ರಗತಿ ಪರಿಶೀಲನಾ ಸಭೆಯಲ್ಲಿ ತುಮಕೂರು ಬೈಪಾಸ್ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ-206 ಯೋಜನೆಗಳ ಭೂಸ್ವಾಧೀನ ಪ್ರಕ್ರಿಯೆಯ ಪ್ರಗತಿಯನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿ, ಬಾಕಿ ಇರುವ ತೊಡಕುಗಳನ್ನು ಶೀಘ್ರ ನಿವಾರಿಸಲು ಸಂಬ
Meeting


ತುಮಕೂರು, 28 ಜುಲೈ (ಹಿ.ಸ.):

ಆ್ಯಂಕರ್:

ತುಮಕೂರಿನಲ್ಲಿ ನಡೆದ ಭೂಸ್ವಾಧೀನ ಪ್ರಗತಿ ಪರಿಶೀಲನಾ ಸಭೆಯಲ್ಲಿ ತುಮಕೂರು ಬೈಪಾಸ್ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ-206 ಯೋಜನೆಗಳ ಭೂಸ್ವಾಧೀನ ಪ್ರಕ್ರಿಯೆಯ ಪ್ರಗತಿಯನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿ, ಬಾಕಿ ಇರುವ ತೊಡಕುಗಳನ್ನು ಶೀಘ್ರ ನಿವಾರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತುಮಕೂರು ಬೈಪಾಸ್ ರಸ್ತೆ ಯೋಜನೆಯಡಿ ದೊಡ್ಡಸಾರಂಗಿ ಮತ್ತು ಸಾರಂಗಿಪಾಳ್ಯ ಗ್ರಾಮಗಳಲ್ಲಿ ಭೂಸ್ವಾಧೀನ ಕಾರ್ಯ ಸುಗಮವಾಗಿ ನಡೆಯಲು ಅಗತ್ಯ ಪೊಲೀಸ್ ಭದ್ರತೆ ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು. ರಾಷ್ಟ್ರೀಯ ಹೆದ್ದಾರಿ-206 ಯೋಜನೆಯಡಿ ಅಯ್ಯನಬಾವಿ, ರಾಮಶೆಟ್ಟಿಹಳ್ಳಿ, ಜಯಂತಿ, ಕರಡಿಕೋಡಿ ಹಾಗೂ ದೊಡ್ಡಗುಣಿ ಗ್ರಾಮಗಳಲ್ಲಿ ಉಂಟಾಗಿರುವ ತೊಡಕುಗಳನ್ನು ಸಂಬಂಧಿತ ಇಲಾಖೆಗಳ ಸಮನ್ವಯದೊಂದಿಗೆ ತ್ವರಿತವಾಗಿ ಇತ್ಯರ್ಥಪಡಿಸುವಂತೆ ಸೂಚಿಸಲಾಯಿತು.

ಕೆಪಿಟಿಸಿಎಲ್‌ಗೆ ಅಗತ್ಯವಿರುವ ಜಮೀನಿನ ಕುರಿತು ಈಗಾಗಲೇ ಒದಗಿಸಿರುವ ಭೂಮಿಗೆ ಸಂಬಂಧಿಸಿದ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು. ಸಭೆಯಲ್ಲಿ ವಿವಿಧ ನೀರಾವರಿ ಯೋಜನೆಗಳ ಮುಖ್ಯಸ್ಥರು, ರಾಷ್ಟ್ರೀಯ ಹೆದ್ದಾರಿ ಇಲಾಖೆ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande