ಮೂರು ದಶಕಗಳ ಹಿಂದಿನ ಡಿ.ಕೆ. ಶಿವಕುಮಾರ್ ಮದುವೆ ಆಹ್ವಾನ ಪತ್ರಿಕೆ ವೈರಲ್
ಬೆಂಗಳೂರು, 28 ಜುಲೈ (ಹಿ.ಸ.): ಆ್ಯಂಕರ್: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ 1993ರ ವಿವಾಹ ಮಹೋತ್ಸವದ ಹಳೆಯ ಆಹ್ವಾನ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಮೂರು ದಶಕಗಳ ಹಿಂದಿನ ಈ ವೆಡ್ಡಿಂಗ್ ಕಾರ್ಡ್ ಅವರ ರಾಜಕೀಯ ಏಳಿಗೆಯ ಹಾದಿಯನ್ನು ನೆ
dk-shivakumar-


ಬೆಂಗಳೂರು, 28 ಜುಲೈ (ಹಿ.ಸ.):

ಆ್ಯಂಕರ್:

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ 1993ರ ವಿವಾಹ ಮಹೋತ್ಸವದ ಹಳೆಯ ಆಹ್ವಾನ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಮೂರು ದಶಕಗಳ ಹಿಂದಿನ ಈ ವೆಡ್ಡಿಂಗ್ ಕಾರ್ಡ್ ಅವರ ರಾಜಕೀಯ ಏಳಿಗೆಯ ಹಾದಿಯನ್ನು ನೆನಪಿಸಿದೆ.

1993ರ ಏಪ್ರಿಲ್ 18ರಂದು ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ಉಷಾ ಅವರ ವಿವಾಹ ಅದ್ದೂರಿಯಾಗಿ ನಡೆದಿತ್ತು. ಅಂದು ಸಾತನೂರು ಕ್ಷೇತ್ರದಿಂದ ಸತತ ಎರಡನೇ ಬಾರಿಗೆ ಶಾಸಕರಾಗಿದ್ದ ಡಿ.ಕೆ. ಶಿವಕುಮಾರ್, ಎಸ್. ಬಂಗಾರಪ್ಪ ಅವರ ಸಂಪುಟದಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲೇ ಸಚಿವರಾಗಿ (ಜೈಲು ಮತ್ತು ಸಣ್ಣ ಕೈಗಾರಿಕೆ ಇಲಾಖೆ) ಜವಾಬ್ದಾರಿ ನಿರ್ವಹಿಸಿದ್ದರು. ಮದುವೆಯಾಗುವ ವೇಳೆಗಾಗಲೇ ಅವರು ಹಳೆ ಮೈಸೂರು ಭಾಗದ ಪ್ರಭಾವಿ ಮುಖಂಡರಾಗಿ ಹೊರಹೊಮ್ಮಿದ್ದರು.

ತಂದೆ ದಿವಂಗತ ಕೆಂಪೇಗೌಡ ಹಾಗೂ ತಾಯಿ ಗೌರಮ್ಮ ಅವರ ಆಹ್ವಾನದೊಂದಿಗೆ ಮೂಡಿದ ಆ ಸರಳ ಶೈಲಿಯ ಪತ್ರಿಕೆ ಈಗ ನೆಟ್ಟಿಗರ ಗಮನ ಸೆಳೆದಿದೆ. ಅಂದು ಸಣ್ಣ ಕೈಗಾರಿಕಾ ಸಚಿವರಾಗಿದ್ದ ಯುವ ನಾಯಕ, ಇಂದು ರಾಜ್ಯದ ಮುಖ್ಯಮಂತ್ರಿಯಾಗಿ ಬೆಳೆದು ನಿಂತಿರುವುದನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ. ಮೂರು ದಶಕಗಳಲ್ಲಿ ಪಕ್ಷದ 'ಟ್ರಬಲ್ ಶೂಟರ್' ಹಾಗೂ ಕನಕಪುರ ಬಂಡೆಯಾಗಿ ಬೆಳೆದು ಬಂದ ಅವರ ರಾಜಕೀಯ ಜರ್ನಿಯನ್ನು ಈ ಹಳೆಯ ಮದುವೆ ಪತ್ರಿಕೆ ಮರುಕಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / NAVEEN PARADESHII


 rajesh pande