ಜೈಲಿನಲ್ಲಿ ದರ್ಶನ್ ಭೇಟಿಯಾದ ಧನ್ವೀರ್;ವದಂತಿಗಳಿಗೆ ತೆರೆ
ಬೆಂಗಳೂರು, 28 ಜುಲೈ (ಹಿ.ಸ.): ಆ್ಯಂಕರ್: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ನಟ ಧನ್ವೀರ್ ಹಲವು ತಿಂಗಳ ಬಳಿಕ ಭೇಟಿಯಾಗಿದ್ದು, ಇಬ್ಬರ ನಡುವೆ ಅಂತರ ಉಂಟಾಗಿದೆ ಎಂಬ ವದಂರಿಗೆ ಈ ಭೇಟಿ ತೆರೆ ಎಳೆದಿದೆ. ಇತ್ತೀಚೆಗೆ ಧನ್ವೀರ್ ವಿರುದ್ಧ ₹10 ಕೋಟಿ ಹಣಕಾಸು ವಹಿವಾಟು ಮತ್ತು ವಂಚನೆಗ
darshan-dhanveer


ಬೆಂಗಳೂರು, 28 ಜುಲೈ (ಹಿ.ಸ.):

ಆ್ಯಂಕರ್:

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ನಟ ಧನ್ವೀರ್ ಹಲವು ತಿಂಗಳ ಬಳಿಕ ಭೇಟಿಯಾಗಿದ್ದು, ಇಬ್ಬರ ನಡುವೆ ಅಂತರ ಉಂಟಾಗಿದೆ ಎಂಬ ವದಂರಿಗೆ ಈ ಭೇಟಿ ತೆರೆ ಎಳೆದಿದೆ.

ಇತ್ತೀಚೆಗೆ ಧನ್ವೀರ್ ವಿರುದ್ಧ ₹10 ಕೋಟಿ ಹಣಕಾಸು ವಹಿವಾಟು ಮತ್ತು ವಂಚನೆಗೆ ಸಂಬಂಧಿಸಿದ ಆರೋಪಗಳು ಕೇಳಿಬಂದಿದ್ದವು. ಜೊತೆಗೆ ಕುಟುಂಬದಿಂದ ದೂರವಿದ್ದಾರೆ ಎಂಬ ಸುದ್ದಿಗಳೂ ಹರಿದಾಡಿದ್ದವು. ಈ ಬೆಳವಣಿಗೆಗಳ ನಡುವೆಯೇ ಧನ್ವೀರ್ ಜೈಲಿಗೆ ತೆರಳಿ ದರ್ಶನ್ ಅವರನ್ನು ಭೇಟಿಯಾಗಿರುವುದು ಚಿತ್ರರಂಗದ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಹಿಂದೂಸ್ತಾನ್ ಸಮಾಚಾರ್ / NAVEEN PARADESHII


 rajesh pande