
ಬೆಂಗಳೂರು, 28 ಜುಲೈ (ಹಿ.ಸ.):
ಆ್ಯಂಕರ್:
ಬೆಂಗಳೂರು ನಗರದಲ್ಲಿ ವರ್ಷಗಟ್ಟಲೆ ರಸ್ತೆ ಬದಿ ಹಾಗೂ ಫುಟ್ಪಾತ್ಗಳಲ್ಲಿ ನಿಲ್ಲಿಸಿರುವ ಅನಾಥ ವಾಹನಗಳ ತೆರವಿಗೆ ಬೆಂಗಳೂರು ಸಂಚಾರಿ ಪೊಲೀಸ್ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜಂಟಿಯಾಗಿ ಸ್ವಚ್ಛ ಬೀದಿ, ಸುರಕ್ಷಿತ ಬೆಂಗಳೂರು ಅಭಿಯಾನ ಆರಂಭಿಸಿವೆ. ತಿಂಗಳುಗಟ್ಟಲೆ ನಿಲ್ಲುವ ಈ ವಾಹನಗಳು ಸಂಚಾರಕ್ಕೆ ಅಡ್ಡಿಯಾಗುವುದಲ್ಲದೆ, ಅಕ್ರಮ ಚಟುವಟಿಕೆಗಳ ತಾಣವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
ವಿಶೇಷ ಕಾರ್ಯಾಚರಣೆ ನಡೆಸಿರುವ ಅಧಿಕಾರಿಗಳು ಇದುವರೆಗೆ ಒಟ್ಟು 1,286 ಬಿಡಾಡಿ ವಾಹನಗಳಿಗೆ ಎಚ್ಚರಿಕೆ ನೋಟಿಸ್ ಅಂಟಿಸಿದ್ದಾರೆ.
ನೋಟಿಸ್ ಅವಧಿ ಮುಗಿದರೂ ತೆರವುಗೊಳಿಸದ 172 ವಾಹನಗಳನ್ನು ಕ್ರೇನ್ ಮೂಲಕ ವಶಕ್ಕೆ ಪಡೆದು ಪೊಲೀಸ್ ಯಾರ್ಡ್ಗಳಿಗೆ ಸ್ಥಳಾಂತರಿಸಲಾಗಿದೆ. ಅತಿ ಹೆಚ್ಚು ಕೇಂದ್ರ ವಲಯದಲ್ಲಿ 537 ನೋಟಿಸ್ ಹಾಗೂ 48 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಸಾರ್ವಜನಿಕರು ತಮ್ಮ ವಲಯದಲ್ಲಿ ಇಂತಹ ವಾಹನಗಳು ಕಂಡುಬಂದಲ್ಲಿ 'BTP ASTraM' ಮೊಬೈಲ್ ಆ್ಯಪ್ ಮೂಲಕ ಫೋಟೋ ಅಪ್ಲೋಡ್ ಮಾಡಿ ದೂರು ನೀಡಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII