
ಕೋಲಾರ, ಜು.೨೮ (ಹಿ.ಸ.) :
ಆ್ಯಂಕರ್ : ಇತಿಹಾಸ ಪ್ರಸಿದ್ಧ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಶ್ರೀಕ್ಷೇತ್ರ ಕೈವಾರದ ಸದ್ಗುರು ಶ್ರೀ ಯೋಗಿ ನಾರೇಯಣ ಮಠ ದಲ್ಲಿ ನಡೆಯುತ್ತಿರುವ ಮೂರುದಿನಗಳ ಸಂಗೀತೋತ್ಸದ ಎರಡನೇ ದಿನ ಸಂಗೀತೋತ್ಸವದಲ್ಲಿ ಭಾಗವಹಿಸಲು ದೂರದ ಊರುಗಳಿಂದ ತಂಡೋಪತಂಡವಾಗಿ ಭಕ್ತರು ಆಗಮಿಸಿದ್ದರು. ವಿಜೃಂಭಣೆಯಿಂದ, ಶ್ರದ್ದೆ ಭಕ್ತಿಗಳಿಂದ ಆಚರಿಸುತ್ತಿರುವ ಗುರುಪೂಜಾ ಸಂಗೀತೋತ್ಸವದಲ್ಲಿ ಸಂಗೀತದ ರಸದೌತಣವನ್ನು ಸಂಗೀತಾಭಿಮಾನಿಗಳು ಸವಿದರು. ದೇವಾಲಯದಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು.
ಬೆಳಗಿನಿಂದಲೇ ನಾದಸ್ವರ ವಾದನ, ತವಿಲ್ ವಾದ್ಯಗಳಿಂದ ಎರಡನೇ ದಿನದ ಕಾರ್ಯಕ್ರಮಗಳು ಪ್ರಾರಂಭವಾದವು. ಎಂ.ವೇಣುಮಾಧವ್, ವಿ.ಭಾಗ್ಯಲಕ್ಷಿ, ಡಾ.ಎಂ.ವಿ.ಶ್ರೀನಿವಾಸಮೂರ್ತಿ, ಹೆಚ್.ಎನ್.ಶ್ರೀನಿವಾಸ್ ತಂಡ, ನಿಖಿತಾ ಮೋಕ್ಷಗುಂಡಂ ತಂಡ, ಎನ್.ಎಸ್.ವೇಣುಗೋಪಾಲ್ ತಂಡ, ಈ.ರಾಮಕೃಷ್ಣಾಚಾರ್, ಬಿ.ರಾಮಚಂದ್ರ, ಜಿ.ವೇಣುಗೋಪಾಲ್, ಕೆ.ಎಸ್.ಶ್ವೇತಾ, ಸಿ.ಸೋಮಶೇಖರ್, ಡಾ.ಅಶ್ವಿನಿ ಮೋಹನ್, ಬಿ.ಅಮರಶ್ರೀ ನಾಗಾರ್ಜುನ್, ಆಶಾಮಂಜುನಾಥ್, ವಿಷ್ಣು ವೆಂಕಟೇಶ್, ಮುರಳಿ, ಮೀರಾ ವಿಜಯ್ ಕುಮಾರ್ ತಂಡ, ಜಯಲಕ್ಷಿ ಭಟ್, ಕಮಲಾದೀಪ್ತಿ, ಎ.ವಿ.ವಿಶ್ವನಾಥ್, ಕೆ.ಎಸ್.ನಾಗಭೂಷಣಯ್ಯ, ಕೃಷ್ಣ ಹೊಸೂರು, ರೇವತಿ ಕಾಮತ್ ಮುಂತಾದವರಿಂದ ಸಂಗೀತ ಕಾರ್ಯಕ್ರಮಗಳು ನಡೆದವು.
ಸಂಜೆ ವಿಶೇಷ ಕಾರ್ಯಕ್ರಮದಲ್ಲಿ ಸುಮಂತ್ ಹಾಗೂ ಮಾಳವಿರವರಿಂದ ಪಿಟೀಲು ಸೋಲೋ, ಶಂಕರ್ ನಂಬೂದರಿ ರವರಿಂದ ಗಾಯನ, ಅಮಿತ್ ಎ.ನಾಡಿಗ್ ರವರಿಂದ ಕೊಳಲುವಾದನ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಗೊಲ್ಲಹಳ್ಳಿ ಶಿವಪ್ರಸಾದ್ ತಂಡದವರಿಂದ ಗಾಯನ, ಹೈದ್ರಾಬಾದ್ನ ಎಸ್.ಎಂ.ಸುಭಾನಿರವರಿ0ದ ಮ್ಯಾಂಡೋಲಿನ್ ವಾದನ, ನೂಪುರ ಫೈನ್ ಆರ್ಟ್ಸ್ ರೂಪಾರಾಜೇಶ್ ತಂಡದವರಿAದ ಕೂಚಿಪುಡಿ ನೃತ್ಯವನ್ನು ಕಾರ್ಯಕ್ರಮವು ನಡೆಯಿತು.
ಗುರುಪೂಜಾ ಸಂಗೀತೋತ್ಸವ ಕಾರ್ಯಕ್ರಮಕ್ಕೆ ಚಿಂತಾಮಣಿ ಕ್ಷೇತ್ರದ ಶಾಸಕರ ಡಾ.ಎಂ.ಸಿ.ಸುಧಾಕರ್ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮಗಳು ವೀಕ್ಷಿಸಿದರು. ಸಾವಿರಾರು ಸಂಗೀತಾಭಿಮಾನಿಗಳು ಭಾಗವಹಿಸಿದ್ದರು. ಹಲವಾರು ಜಾನಪದ ಕಲಾವಿದರು, ಕೋಲಾಟ, ಭಜನೆ, ಹರಿಕಥೆ, ಬರ್ರಕಥೆ, ತಮಟೆವಾದನ ಮುಂತಾದ ಸಾಂಸ್ಕöÈತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಸಂಗೀತೋತ್ಸವದಲ್ಲಿ ಭಾಗವಹಿಸುವ ಭಕ್ತರಿಗೆ ಉಚಿತವಾಗಿ ದಾಸೋಹದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ.
ಗುರುಪೂರ್ಣಿಮೆಯಾದ ಬುಧವಾರ ಬೆಳಿಗ್ಗೆ ಬೇತಮಂಗಲ ಗಂಗಾಧರ ಸ್ಮಾರಕ ಸಂಗೀತ ಶಾಲೆಯ ವಿ.ರಮೇಶ್ ನೇತೃತ್ವದಲ್ಲಿ ನಾದಸ್ವರ, ನಂತರ ತಾತಯ್ಯನವರು ರಚಿಸಿರುವ ಪಂಚರತ್ನ ಕೀರ್ತನೆಗಳ ಗೋಷ್ಠಿಗಾಯನ ನಡೆಯಲಿದೆ. ಸದ್ಗುರು ತಾತಯ್ಯನವರ ಗುರುಪೂಜೆ ಸೇವೆ ಸಮರ್ಪಣೆ. ವಿಶೇಷ ಅಭಿಷೇಕ, ರಾಜೋಪಚಾರ, ಶೋಡಶೋಪಚಾರ, ಅಷ್ಟಾವಧಾನ ಸೇವೆಗಳು ನಡೆಯುತ್ತದೆ. ಧರ್ಮಾಧಿಕಾರಿಗಳಾದ ಡಾ.ಎಂ.ಆರ್.ಜಯರಾಮ್ ರವರಿಂದ ಗುರುಚಿಂತನಾ ಸಂದೇಶ ಕಾರ್ಯಕ್ರಮವಿರುತ್ತದೆ.
ನಾಡಿನ ಹಿರಿಯ ಸಾಹಿತಿ, ಕೈವಾರ ಕ್ಷೇತ್ರದಿಂದ ಪ್ರಕಟವಾಗುವ ಮಲ್ಲಾರ ಮಾಸ ಪತ್ರಿಕೆಯ ನಿರ್ವಾಹಕ ಸಂಪಾದಕರಾದ ಡಾ.ಬಾಬು ಕೃಷ್ಣಮೂರ್ತಿ ರವರಿಗೆ ಸದ್ಗುರು ಶ್ರೀಯೋಗಿನಾರೇಯಣ ಮಠದ ವತಿಯಿಂದ ನಾರೇಯಣ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
ಮಧ್ಯಾಹ್ನ ಸುಧಾಮಣಿ ವೆಂಕಟರಾಘವನ್ ಶ್ರೀಹರ್ಷ, ಮಂಜುಳಾ ಜಗದೀಶ್, ಪದ್ಮಾವತಿ ತಂಡ, ಕೆ.ಕೆ.ವೀಣಾ ತಂಡ, ಭಾಸ್ಕರ್, ಭೈರತಿ ಆಂಜನಪ್ಪ, ಲಕ್ಷಿಕೆಂಪರಾಜು ತಂಡ, ಶ್ರೀವಲ್ಲಿ ಶ್ರೀಧರ್ ಶುಭಮಂಗಳ ರಘುನಂದನ್ ತಂಡ, ಸೀತಾಲಕ್ಷಿ ಜ್ಞಾನಗಂಗಾ ತಂಡ, ಬಿ.ಕೆ.ಚಂದ್ರಪ್ಪ ತಂಡ, ತೇಜಸ್ವಿನಿ ಮನೋಜ್ ಕುಮಾರ್ ತಂಡ, ವಾನರಾಶಿ ಬಾಲಕೃಷ್ಣ ಭಾಗವತರ್ ರವರಿಂದ ಸಂಗೀತ ಕಾರ್ಯಕ್ರಮಗಳಿರುತ್ತದೆ.
ಸಂಜೆ ವಿಶೇಷ ಕಾರ್ಯಕ್ರಮಗಳಲ್ಲಿ ಪದ್ಮಶ್ರೀ ಪುರಸ್ಕöÈತ ತಿರುವಾರೂರು ಭಕ್ತವತ್ಸಲಂ, ಎ.ಸಿ.ರಾಜಶೇಖರ್ ತಂಡದವರಿ0ದ ನಾದಸ್ವರ ತವಿಲ್ ವಾದನ, ಕೋಲಾರದ ಡಿ.ಆರ್.ರಾಜಪ್ಪ ತಂಡದವರಿ0ದ ಗಾಯನ, ಚೆನ್ನೆನ ಕೆ.ವಿ.ಪ್ರಸಾದ್, ವಿಶಾಖಪಟ್ನಂ ಪಂತುಲ ರಮಾ ಗಾಯನ, ಕೇರಳದ ಕೆ.ಎಸ್.ವಿಷ್ಣುದೇವ್ ಗಾಯನ, ಮೈಸೂರು ನಾಗರಾಜ್ ಮತ್ತು ಡಾ.ಮೈಸೂರು ಮಂಜುನಾಥರವರಿ0ದ ಪಿಟೀಲು ಸೋಲೋ, ನಯನಾ ರಮೇಶ್ ಭರತನಾಟ್ಯ, ಕೇರಳದ ಕಣ್ಣನ್ ಮತ್ತು ಆನಂದ್ ನಾದಸ್ವರ, ಶ್ರೀಲಂಕಾದ ಬದಲೆಶಂಕರ್ ಹಾಗೂ ವಿಳಂಬಾಕ ಗಣಪತಿ ರವರಿಂದ ತವಿಲ್ ವಾದನದ ಕಾರ್ಯಕ್ರಮ ನಡೆಯಲಿದೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್