ಜು.23 ರಂದು ಉಪ ವಿಭಾಗ ಮಟ್ಟದ ಜಾಗೃತಿ ಸಭೆ
ಬಳ್ಳಾರಿ, 20 ಜುಲೈ (ಹಿ.ಸ.): ಆ್ಯಂಕರ್ : ಮಲ ಹೊರುವ ಕಾರ್ಮಿಕ ಪದ್ಧತಿ ನಿಷೇಧ ಮತ್ತು ಅವರ ಉದ್ಯೋಗ ಪುನರ್ವಸತಿ ಕಾಯ್ದೆ 2013’ ಅನುಷ್ಠಾನ ಹಾಗೂ ಜಾಗೃತಿ ಕುರಿತಂತೆ ಚರ್ಚಿಸಲು ಜುಲೈ 23 ರಂದು ಬೆಳಿಗ್ಗೆ 10.30 ಗಂಟೆಗೆ ಸಹಾಯಕ ಆಯುಕ್ತರ ಕಚೇರಿಯಲ್ಲಿ ಬಳ್ಳಾರಿಯ ಉಪ ವಿಭಾಗ ಮಟ್ಟದ ತ್ರೈಮಾಸಿಕ ಜಾಗೃತಿ ಸ
ಜು.23 ರಂದು ಉಪ ವಿಭಾಗ ಮಟ್ಟದ ಜಾಗೃತಿ ಸಭೆ


ಬಳ್ಳಾರಿ, 20 ಜುಲೈ (ಹಿ.ಸ.):

ಆ್ಯಂಕರ್ : ಮಲ ಹೊರುವ ಕಾರ್ಮಿಕ ಪದ್ಧತಿ ನಿಷೇಧ ಮತ್ತು ಅವರ ಉದ್ಯೋಗ ಪುನರ್ವಸತಿ ಕಾಯ್ದೆ 2013’ ಅನುಷ್ಠಾನ ಹಾಗೂ ಜಾಗೃತಿ ಕುರಿತಂತೆ ಚರ್ಚಿಸಲು ಜುಲೈ 23 ರಂದು ಬೆಳಿಗ್ಗೆ 10.30 ಗಂಟೆಗೆ ಸಹಾಯಕ ಆಯುಕ್ತರ ಕಚೇರಿಯಲ್ಲಿ ಬಳ್ಳಾರಿಯ ಉಪ ವಿಭಾಗ ಮಟ್ಟದ ತ್ರೈಮಾಸಿಕ ಜಾಗೃತಿ ಸಮಿತಿಯ ಸಭೆ ಆಯೋಜಿಸಲಾಗಿದೆ ಎಂದು ಸಹಾಯಕ ಆಯುಕ್ತರು ತಿಳಿಸಿದ್ದಾರೆ.

ಉಪವಿಭಾಗ ಮಟ್ಟದ ಜಾಗೃತಿ ಸಮಿತಿಯ ಅಧ್ಯಕ್ಷರೂ ಆಗಿರುವ ಸಹಾಯಕ ಆಯುಕ್ತ ರಾಜೇಶ್ ಹೆಚ್.ಡಿ ಅವರು ಸಭೆಯ ಅಧ್ಯಕ್ಷತೆ ವಹಿಸುವರು. ಈ ಸಮಿತಿಯ ಸದಸ್ಯರು ಸೂಕ್ತ ದಾಖಲೆಗಳೊಂದಿಗೆ ಸಭೆಗೆ ಹಾಜರಾಗಬೇಕು ಎಂದು ಹೇಳಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande