
ಕೊಪ್ಪಳ, 20 ಜುಲೈ (ಹಿ.ಸ.)
ಆ್ಯಂಕರ್ : ಇಲ್ಲಿನ ಕಾರ್ಖಾನೆಗಳು ಜನರ ಜೀವ, ಆರೋಗ್ಯಕ್ಕಿಂತ ತಮ್ಮ ಲಾಭವನ್ನೇ ಮುಖ್ಯವಾಗಿ ಇಟ್ಟುಕೊಂಡು ಇಡೀ ಪರಿಸರವನ್ನು ನಾಶಪಡಿಸಿವೆ. ಭೂಮಿ, ಕೃಷಿ ಬಗ್ಗೆ ಸರಕಾರ ತಾತ್ಸಾರ ಮಾಡಿದರೆ ರೈತರು ತಕ್ಕ ಪಾಠ ಹೇಳಬೇಕಾಗುತ್ತದೆ. ಕೊಪ್ಪಳ ಹೋರಾಟ ರಾಷ್ಟ್ರದ ಗಮನವನ್ನೂ ಸೆಳೆಯುತ್ತಿದೆ. ಈ ಹೋರಾಟ ಗೆಲ್ಲುವತನಕ ವಿರಮಿಸದು. ಬಸಾಪುರ ಕೆರೆ ಹೋರಾಟ ಮುಂದುವರೆಯುತ್ತದೆ ಎಂದು ರಾಜ್ಯಾಧ್ಯಕ್ಷ ಬಡಗಲಪುರ ನಾಗೆಂದ್ರ ಮಾತನಾಡಿದರು.
ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ ಮಂಗಳವಾರ ಬೆಳಗ್ಗೆ 9-30ಕ್ಕೆ ಧರಣಿ ಸ್ಥಳದಿಂದ ಪಾದಯಾತ್ರೆ ಮಾಡಿ ಬಲ್ಡೋಟ ಗೇಟ್ ಎದುರು ನಡೆಯುವ ಬಸಾಪುರ ಕೆರೆ ಹೋರಾಟಕ್ಕೆ ಬೆಂಬಲಿಸಲು ನಗರಧ ನಾಗರಿಕರು, ಬಾಧಿತ ಹಳ್ಳಿ ಜನರು ಆಗಮಿಸಲು ವಿನಂತಿ ಮಾಡಿದರು.
ಧರಣಿಯಲ್ಲಿ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ವಸಂತಕುಮಾರ ಎನ್.ಡಿ, ಬಸವರಾಜ ರಾಯಚೂರು, ಎಂ.ಎಲ್.ಕೆ ನಾಯ್ಡು, ಮೂಕಪ್ಪ ಮೇಸ್ತ್ರಿ ಬಸಾಪುರ, ಯಮನೂರಪ್ಪ ಹಾಲಳ್ಳಿ ಬಸಾಪುರ, ರವಿ ಕಾಂತನವರ, ಡಿ.ಎಂ. ಬಡಿಗೇರ, ಬಿ. ಜಿ. ಕರಿಗಾರ, ರಾಜಶೇಖರ ಏಳುಬಾವಿ, ಶಿವಪ್ಪ ಜಲ್ಲಿ ಮುಂತಾದವರು ಇದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್