ಲಾಠಿ ಪ್ರಹಾರದ ಮೂಲಕ ಯುವಕರ ಧ್ವನಿ ದಮನಿಸಲು ಕೇಂದ್ರ ಯತ್ನ: ಸಿದ್ದರಾಮಯ್ಯ
ಬೆಂಗಳೂರು, 20 ಜುಲೈ (ಹಿ.ಸ.): ಆ್ಯಂಕರ್: ನೀಟ್ ಪರೀಕ್ಷಾ ಹಗರಣ ಖಂಡಿಸಿ ಸಂಸತ್ತಿನತ್ತ ಶಾಂತಿಯುತವಾಗಿ ಮಾರ್ಚ್ ಮಾಡುತ್ತಿದ್ದ 20,000ಕ್ಕೂ ಹೆಚ್ಚು ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಮತ್ತು ಅಶ್ರುವಾಯು ಬಳಸಿದ್ದನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ. ಪ್ರಶ್ನೆಪತ್
Siddaramaiah


ಬೆಂಗಳೂರು, 20 ಜುಲೈ (ಹಿ.ಸ.):

ಆ್ಯಂಕರ್:

ನೀಟ್ ಪರೀಕ್ಷಾ ಹಗರಣ ಖಂಡಿಸಿ ಸಂಸತ್ತಿನತ್ತ ಶಾಂತಿಯುತವಾಗಿ ಮಾರ್ಚ್ ಮಾಡುತ್ತಿದ್ದ 20,000ಕ್ಕೂ ಹೆಚ್ಚು ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಮತ್ತು ಅಶ್ರುವಾಯು ಬಳಸಿದ್ದನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಯು ದೇಶದ ವಿಶ್ವಾಸಾರ್ಹತೆಯನ್ನೇ ಕುಗ್ಗಿಸಿದೆ ಎಂದಿರುವ ಅವರು, ಯುವಕರ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಸರ್ಕಾರ ದಮನಕಾರಿ ನೀತಿ ಅನುಸರಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಸೋನಮ್ ವಾಗ್ಚುಂಗ್ ಉಪವಾಸ ಸತ್ಯಾಗ್ರಹ ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆಗಳು ಸರ್ಕಾರದ ನಿರ್ಲಕ್ಷ್ಯದ ಲಕ್ಷಣಗಳಾಗಿವೆ ಎಂದು ತಿಳಿಸಿದ ಅವರು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೈತಿಕ ಹೊಣೆ ಹೊತ್ತು ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಯುವಕರ ಕ್ಷಮೆಯಾಚಿಸಬೇಕು ಹಾಗೂ ಪಾರದರ್ಶಕ ತನಿಖೆಯ ಮೂಲಕ ಅರ್ಹ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಅವರು ಎಕ್ಸನಲ್ಲಿ ಆಗ್ರಹಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / NAVEEN PARADESHII


 rajesh pande