ಜು.28 ರಂದು ನಿವೃತ್ತ ಅಂಚೆ ನೌಕರರ ಪಿಂಚಣಿ ಅದಾಲತ್
ಬಳ್ಳಾರಿ, 20 ಜುಲೈ (ಹಿ.ಸ.) ಆ್ಯಂಕರ್ : ಅಂಚೆ ಇಲಾಖೆಯಿಂದ ನಿವೃತ್ತರಾಗಿ ಕೇಂದ್ರ ಸರ್ಕಾರದಿಂದ ಪಿಂಚಣಿ ಪಡೆಯುತ್ತಿರುವ ಇಲಾಖಾ ನೌಕರರು ಹಾಗೂ ಕುಟುಂಬ ಪಿಂಚಣಿ ಪಡೆಯುತ್ತಿರುವ ನಿವೃತ್ತ ಅಂಚೆ ನೌಕರರ ಕುಟುಂಬ ಸದಸ್ಯರಿಗಾಗಿ ಜುಲೈ 28 ರಂದು ಸಂಜೆ 4 ಗಂಟೆಗೆ ಬಳ್ಳಾರಿಯ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ
ಜು.28 ರಂದು ನಿವೃತ್ತ ಅಂಚೆ ನೌಕರರ ಪಿಂಚಣಿ ಅದಾಲತ್


ಬಳ್ಳಾರಿ, 20 ಜುಲೈ (ಹಿ.ಸ.)

ಆ್ಯಂಕರ್ : ಅಂಚೆ ಇಲಾಖೆಯಿಂದ ನಿವೃತ್ತರಾಗಿ ಕೇಂದ್ರ ಸರ್ಕಾರದಿಂದ ಪಿಂಚಣಿ ಪಡೆಯುತ್ತಿರುವ ಇಲಾಖಾ ನೌಕರರು ಹಾಗೂ ಕುಟುಂಬ ಪಿಂಚಣಿ ಪಡೆಯುತ್ತಿರುವ ನಿವೃತ್ತ ಅಂಚೆ ನೌಕರರ ಕುಟುಂಬ ಸದಸ್ಯರಿಗಾಗಿ ಜುಲೈ 28 ರಂದು ಸಂಜೆ 4 ಗಂಟೆಗೆ ಬಳ್ಳಾರಿಯ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ ಪಿಂಚಣಿ ಅದಾಲತ್ ನ್ನು ಆಯೋಜಿಸಲಾಗಿದೆ ಎಂದು ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

ಪಿಂಚಣಿದಾರರು ತಮ್ಮ ಪಿಂಚಣಿಗೆ ಸಂಬಂಧಿಸಿದ ಯಾವುದೇ ಕುಂದು ಕೊರತೆಗಳು ಅಥವಾ ಅಹವಾಲುಗಳಿದ್ದಲ್ಲಿ, ಸಭೆಗೆ ಭಾಗವಹಿಸಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಅಥವಾ ಅಂಚೆ ಮೂಲಕ ಬಳ್ಳಾರಿಯ ಅಂಚೆ ಅಧೀಕ್ಷಕರ ಕಚೇರಿಗೆ ಜುಲೈ 24 ರೊಳಗಾಗಿ ತಲುಪುವಂತೆ ಅಥವಾ doballari.ka@indiapost.gov.in ಇ-ಮೇಲ್ ಮೂಲಕ ಕಳುಹಿಸಬಹುದಾಗಿದೆ.

ಸೂಚನೆ: ಪಿಂಚಣಿ ಅದಾಲತ್ ನಲ್ಲಿ ಭಾಗವಹಿಸುವ ಪಿಂಚಣಿದಾರರಿಗೆ ಯಾವುದೇ ರೀತಿಯ ಪ್ರಯಾಣ ಭತ್ಯೆ ಅಥವಾ ಇತರೆ ಭತ್ಯೆಗಳನ್ನು ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande