
ಕೊಪ್ಪಳ, 20 ಜುಲೈ (ಹಿ.ಸ.):
ಆ್ಯಂಕರ್ : ಕೊಪ್ಪಳ ವಿಭಾಗದ ಪಿಂಚಣಿದಾರರಿಗಾಗಿ ಪಿಂಚಣಿ ಅದಾಲತನ್ನು ಜುಲೈ 22 ರಂದು ಬೆಳಿಗ್ಗೆ 11 ಗಂಟೆಗೆ ಕೊಪ್ಪಳ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ ನಡೆಸಲಾಗುವುದು ಎಂದು ಕೊಪ್ಪಳ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.
ಸೇವೆಯಿಂದ ನಿವೃತ್ತರಾದ ನೌಕರರ ಪಿಂಚಣಿ ಮತ್ತು ಇತರೆ ನಿವೃತ್ತಿ ಸೌಲಭ್ಯಗಳ ಬಗ್ಗೆ ಯಾವುದೇ ಪಿಂಚಣಿದಾರರ ಅಹವಾಲುಗಳಿದ್ದಲ್ಲಿ, ಅದನ್ನು ಈ ಅದಾಲತಿನಲ್ಲಿ ಆಲಿಸಲಾಗುವುದು. ನಿವೃತ್ತಿ ಹೊಂದಿದ ಗ್ರಾಮೀಣ ಅಂಚೆ ಸೇವಕರು ಮತ್ತಿತರರಿಗೆ ಈ ಅದಾಲಾತಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.
ಪಿಂಚಣಿ ಅದಾಲಾತಿನಲ್ಲಿ ಹಾಜರಾಗುವವರಿಗೆ ಯಾವುದೇ ತರಹದ ಭತ್ಯೆ, ಪ್ರಯಾಣಭತ್ಯೆ ಹಾಗೂ ಇತರೆ ಯಾವುದೇ ಸೌಲಭ್ಯಗಳನ್ನು ನೀಡಲಾಗುವುದಿಲ್ಲ. ಆಸಕ್ತ ಪಿಂಚಣಿದಾರು ತಮ್ಮ ಅಹವಾಲುಗಳನ್ನು ಲಿಖಿತ ರೂಪದಲ್ಲಿ ಕೊಪ್ಪಳ ಅಂಚೆ ಅಧೀಕ್ಷಕರಿಗೆ ಜುಲೈ 20 ರೊಳಗಾಗಿ ಕಳುಹಿಸಬೇಕೆಂದು ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್