ಸಮಾಜದ ಅಭಿವೃದ್ಧಿಗಾಗಿ ಶ್ರಮಿಸೋಣ : ಎಂ.ಡಿ. ಮರಿರಾಜಗೌಡ
ಬಳ್ಳಾರಿ, 20 ಜುಲೈ (ಹಿ.ಸ.) ಆ್ಯಂಕರ್ : ಬಣಜಿಗ ಸಮಾಜವು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶಿಕ್ಷಣದಿಂದ ಸ್ವಾವಲಂಭನೆಯ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಬಳ್ಳಾರಿ ಜಿಲ್ಲಾ ಬಣಜಿಗ ಸಮಾಜದ ಜಿಲ್ಲಾಧ್ಯಕ್ಷರಾದ ಎಂ.ಡಿ. ಮರಿರಾಜ ಗೌಡ ಅವರು ತಿಳಿಸಿದ್ದಾರೆ. ಬಳ್ಳಾರಿ ಗ್ರಾಮಾಂತರ, ಬಳ್ಳಾರಿ ನಗರ ಹ
ಸಮಾಜದ ಅಭಿವೃದ್ಧಿಗಾಗಿ ಶ್ರಮಿಸೋಣ : ಎಂ.ಡಿ. ಮರಿರಾಜಗೌಡ


ಸಮಾಜದ ಅಭಿವೃದ್ಧಿಗಾಗಿ ಶ್ರಮಿಸೋಣ : ಎಂ.ಡಿ. ಮರಿರಾಜಗೌಡ


ಸಮಾಜದ ಅಭಿವೃದ್ಧಿಗಾಗಿ ಶ್ರಮಿಸೋಣ : ಎಂ.ಡಿ. ಮರಿರಾಜಗೌಡ


ಸಮಾಜದ ಅಭಿವೃದ್ಧಿಗಾಗಿ ಶ್ರಮಿಸೋಣ : ಎಂ.ಡಿ. ಮರಿರಾಜಗೌಡ


ಬಳ್ಳಾರಿ, 20 ಜುಲೈ (ಹಿ.ಸ.)

ಆ್ಯಂಕರ್ : ಬಣಜಿಗ ಸಮಾಜವು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶಿಕ್ಷಣದಿಂದ ಸ್ವಾವಲಂಭನೆಯ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಬಳ್ಳಾರಿ ಜಿಲ್ಲಾ ಬಣಜಿಗ ಸಮಾಜದ ಜಿಲ್ಲಾಧ್ಯಕ್ಷರಾದ ಎಂ.ಡಿ. ಮರಿರಾಜ ಗೌಡ ಅವರು ತಿಳಿಸಿದ್ದಾರೆ.

ಬಳ್ಳಾರಿ ಗ್ರಾಮಾಂತರ, ಬಳ್ಳಾರಿ ನಗರ ಹಾಗೂ ಯುವ ಘಟಕದ ರಚನೆಗಾಗಿ ನಡೆದ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಬಣಜಿಗರು ಒಂದೇ ವೃತ್ತಿಯನ್ನು ನಂಬಿಕೊಳ್ಳದೇ ಸಮಾಜದಲ್ಲಿರುವ ವಿವಿಧ ಅವಕಾಶಗಳ ಕಡೆ ಗಮನ ನೀಡಬೇಕು. ಪ್ರತಿಯೊಬ್ಬರೂ ಸಮಾಜದ ಅಭಿವೃದ್ಧಿಯಲ್ಲಿ ಪಾಲ್ಗೊಂಡು, ಸಮಾಜದ ಸಂಘಟನೆ, ಪ್ರತಿಭೆಗಳ ಪ್ರೋತ್ಸಾಹ ಮತ್ತು ಉದ್ಯಮಿಗಳ ಪ್ರೇರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.

ಬಣಜಿಗ ಸಮಾಜದ ಹಿರಿಯರಾದ ಪಲ್ಲೇದ ಗುರುಬಸಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬ್ರಹ್ಮನಿಷ್ಠ ಬಾದನಹಟ್ಟಿಯ ಕರಿಬಸವ ತಾತನವರು ಸಾನಿಧ್ಯವಹಿಸಿದ್ದರು.

ಜಿಲ್ಲಾ ಕಾಂಗ್ರೆಸ್ನ ಅಧ್ಯಕ್ಷರಾದ ಅಲ್ಲಂ ಪ್ರಶಾಂತ್ ಅವರು ಮುಖ್ಯ ಅತಿಥಿಗಳಾಗಿ, ಲಿಂಗಾಯಿತ ಸಮಾಜದ ಪ್ರತಿಯೊಬ್ಬರೂ ಒಗ್ಗೂಡಿ ರಾಜಕೀಯವಾಗಿ - ಆರ್ಥಿಕವಾಗಿ ಸ್ವಾವಲಂಭಿಗಳಾಗಬೇಕು ಎಂದರು.

ಕರವೇ ರಾಜ್ಯ ಉಪಾಧ್ಯಕ್ಷರಾದ ಚಾನಾಳ್ ಶೇಖರ್ ಅವರು, ಬಳ್ಳಾರಿ ಜಿಲ್ಲೆಯಲ್ಲಿ ಬಣಜಿಗ ಸಮುದಾಯವು ಬಹು ಸಂಖ್ಯಾತರಿದ್ದು ಎಲ್ಲರೂ ಒಗ್ಗೂಡಿ ಸಮಾಜವನ್ನು ಅಭಿವೃದ್ಧಿಪಡಿಸಬೇಕು ಎಂದರು.

ಬಣಜಿಗ ಕ್ಷೇಮಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷರಾದ ಶಿವಾನಂದಪ್ಪ ದಂಡಿನ ಅವರು, ಬಣಜಿಗ ಸಮಾಜದಲ್ಲಿ ಇರುವ ಹಿಂದುಳಿದ ಮತ್ತು ಬಡವರ ಅಭಿವೃದ್ಧಿಗೆ ಎಲ್ಲರೂ ಶ್ರಮಿಸೋಣ ಎಂದರು.

ಬಳ್ಳಾರಿ ಜಿಲ್ಲಾ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನಾಗಭೂಷಣ್, ಉಪಾಧ್ಯಕ್ಷರಾಗಿ ಶಿವ ಚಂದ್ರಶೇಖರ್, ಖಜಾಂಚಿಯಾಗಿ ಸಣ್ಣ ರಂಗಪ್ಪ ಅವರು ಆಯ್ಕೆಯಾದರು.

ಬಳ್ಳಾರಿ ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಕುರಹಟ್ಟಿ ಜಿ. ರಾಜಶೇಖರ್ ಹಾಗೂ ಉಪಾಧ್ಯಕ್ಷರಾಗಿ ಕರಣಂ ಮಹಾಂತೇಶ ಗೌಡ ಅವರು ಆಯ್ಕೆಯಾಗಿದ್ದಾರೆ.

ಬಳ್ಳಾರಿ ನಗರ ಯುವ ಘಟಕದ ಅಧ್ಯಕ್ಷರಾಗಿ ಶಿವರಾಜ್ ಅಂದ್ರಾಳ ಹಾಗೂ ಬಳ್ಳಾರಿ ಗ್ರಾಮೀಣ ಘಟಕದ ಅಧ್ಯಕ್ಷರಾಗಿ ಶಿಡಿಗಿನಮೊಳ ಬಸವರಾಜ್, ಪ್ರಧಾನ ಕಾರ್ಯದರ್ಶಿಯಾಗಿ ಮರಿಲಿಂಗನಗೌಡ ಬಸರಕೊಡು ಅವರು ಆಯ್ಕೆಯಾಗಿದ್ದಾರೆ.

ಬಳ್ಳಾರಿ ಜಿಲ್ಲಾ ಗೌರವಾಧ್ಯಕ್ಷರಾದ ರೂಪನಗುಡಿ ಬಸವರಾಜ್ ಹಾಗೂ ಹಾವಿನಾಳ ಶರಣಪ್ಪ ಓ.ಉ. ಬಸವರಾಜಪ್ಪ, ಬಿ.ವಿ. ಬಸವರಾಜ್,

ಕಲ್ಗುಡಿ ಮಂಜುನಾಥ, ಅಂಗಡಿ ಶಂಕರ್, ಪಂಚಾಕ್ಷರಪ್ಪ, ಕಣರ್ಂ ವಿಶ್ವನಾಥ ಗೌಡ್ರು, ತಾಲೂಕು ಅಧ್ಯಕ್ಷರುಗಳಾದ ಹೋತೂರ್ ಹೇಮಾದ್ರಿ, ಗುಡೇಕೋಟೆ ನಾಗರಾಜ್, ಗಡಾದ ಪ್ರಸಾದ್, ಷಡಕ್ಷರಪ್ಪ ಜಗದೀಶ್ ಹಾಗೂ ಸಮಾಜದ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande