ಇದು ಕೊನೆಯ ತುತ್ತು ತಿನ್ನಮ್ಮ ಪತ್ನಿ ಚೆನ್ನಮ್ಮಗೆ ಮಾಜಿ ಪ್ರಧಾನಿ ದೇವೇಗೌಡರು ಊಟ ಮಾಡಿಸುವ ಭಾವುಕ ವೀಡಿಯೊ ವೈರಲ್
ಬೆಂಗಳೂರು, 20 ಜುಲೈ (ಹಿ.ಸ.): ಆ್ಯಂಕರ್: ರಾಜಕೀಯದ ಏಳು-ಬೀಳುಗಳು ಹಾಗೂ ಪ್ರಧಾನಿಯಂತಹ ಉನ್ನತ ಅಧಿಕಾರದಲ್ಲಿದ್ದರೂ ಹೆಚ್.ಡಿ. ದೇವೇಗೌಡರಿಗೆ ಸದಾ ಬೆನ್ನೆಲುಬಾಗಿ ನಿಂತಿದ್ದ ಧರ್ಮಪತ್ನಿ ಚೆನ್ನಮ್ಮ ಅಗಲಿದ್ದಾರೆ. ಈ ನಡುವೆ, ಆಸ್ಪತ್ರೆಯ ಹಾಸಿಗೆಯ ಮೇಲೆ ಅಶಕ್ತರಾಗಿ ಮಲಗಿರುವ ಪತ್ನಿಗೆ ಮಾಜಿ ಪ್ರಧಾನಿ ದ
HD Deve Gowda


ಬೆಂಗಳೂರು, 20 ಜುಲೈ (ಹಿ.ಸ.):

ಆ್ಯಂಕರ್:

ರಾಜಕೀಯದ ಏಳು-ಬೀಳುಗಳು ಹಾಗೂ ಪ್ರಧಾನಿಯಂತಹ ಉನ್ನತ ಅಧಿಕಾರದಲ್ಲಿದ್ದರೂ ಹೆಚ್.ಡಿ. ದೇವೇಗೌಡರಿಗೆ ಸದಾ ಬೆನ್ನೆಲುಬಾಗಿ ನಿಂತಿದ್ದ ಧರ್ಮಪತ್ನಿ ಚೆನ್ನಮ್ಮ ಅಗಲಿದ್ದಾರೆ. ಈ ನಡುವೆ, ಆಸ್ಪತ್ರೆಯ ಹಾಸಿಗೆಯ ಮೇಲೆ ಅಶಕ್ತರಾಗಿ ಮಲಗಿರುವ ಪತ್ನಿಗೆ ಮಾಜಿ ಪ್ರಧಾನಿ ದೇವೇಗೌಡರು ತಮ್ಮ ನಡುಗುವ ಕೈಗಳಿಂದ ಪ್ರೀತಿಯಿಂದ ಊಟ ಮಾಡಿಸುತ್ತಿರುವ ಅಪರೂಪದ ಹಾಗೂ ಕಣ್ಣೀರ ತರಿಸುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಚೆನ್ನಮ್ಮ ಅವರಿಗೆ 90 ದಾಟಿದ ಹಿರಿಯ ಚೇತನ ದೇವೇಗೌಡರು ಹತ್ತಿರದಲ್ಲೇ ಕುಳಿತು ತುತ್ತು ತಿನ್ನಿಸಲು ಯತ್ನಿಸುತ್ತಿರುವ ದೃಶ್ಯ ಕನ್ನಡಿಗರ ಮನಕಲಕಿದೆ. ತಮಗೆ ಬೇಡವೆಂದು ಕೈ ಸನ್ನೆ ಮಾಡಿದ ಪತ್ನಿಗೆ, ಅತ್ಯಂತ ಮಮತೆಯಿಂದ ಮತ್ತೊಮ್ಮೆ ತುತ್ತು ನೀಡಲು ಮುಂದಾದ ಆ ಹಿರಿಯ ಜೀವದ ಕಾಳಜಿ ಎಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡಿದೆ. ಹಳ್ಳಿಯ ಸಾಮಾನ್ಯ ಬದುಕಿನಿಂದ ಹಿಡಿದು ದೆಹಲಿಯ ಅಧಿಕಾರದ ಗದ್ದುಗೆಯವರೆಗೂ ಹೆಗಲಿಗೆ ಹೆಗಲು ಕೊಟ್ಟು ನಡೆದ ಸಂಗಾತಿಯನ್ನು ಕಳೆದುಕೊಳ್ಳುವ ನೋವು ಆ ವೀಡಿಯೊದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ರಾಜಕೀಯ ವೇದಿಕೆಗಳಲ್ಲಿ ಗಟ್ಟಿಯಾಗಿ ನಿಲ್ಲುತ್ತಿದ್ದ ದೊಡ್ಡಗೌಡರು, ಪ್ರೀತಿಯ ಪತ್ನಿಯ ಅಗಲಿಕೆಯ ಮುನ್ನ ಕರಗಿಹೋದ ಆ ಕ್ಷಣಗಳು ಏಳು ದಶಕಗಳ ಅಪ್ಪಟ ದಾಂಪತ್ಯದ ಸಾಕ್ಷಿಯಾಗಿದೆ.

ಹಿಂದೂಸ್ತಾನ್ ಸಮಾಚಾರ್ / NAVEEN PARADESHII


 rajesh pande