ನಾಳೆ ಬಳ್ಳಾರಿ ಆದರ್ಶ ವಿದ್ಯಾಲಯ ಸೀಟುಗಳ ಭರ್ತಿಗೆ ಕೌನ್ಸಿಲಿಂಗ್
ಬಳ್ಳಾರಿ, 20 ಜುಲೈ (ಹಿ.ಸ.) ಆ್ಯಂಕರ್ : ಹಿರಿಯಾಳ್ ಕುಡಂ ಈದ್ಗಾ ರಸ್ತೆಯ ಕುರುಗೋಡು ತಾಲೂಕು ಪಶ್ಚಿಮ ವಲಯ ವ್ಯಾಪ್ತಿಯ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ 2026-27ನೇ ಸಾಲಿನ 6ನೇ ತರಗತಿಯ ಉಳಿಕೆ ಸೀಟುಗಳ ಭರ್ತಿಗಾಗಿ ಜುಲೈ 21 ರಂದು ಕೌನ್ಸಿಲಿಂಗ್ ಪ್ರಕ್ರಿಯೆ ನಡೆಯಲಿದೆ ಎಂದು ಆದರ್ಶ ವಿದ್ಯಾಲಯದ ಮುಖ
ನಾಳೆ ಬಳ್ಳಾರಿ ಆದರ್ಶ ವಿದ್ಯಾಲಯ ಸೀಟುಗಳ ಭರ್ತಿಗೆ ಕೌನ್ಸಿಲಿಂಗ್


ಬಳ್ಳಾರಿ, 20 ಜುಲೈ (ಹಿ.ಸ.)

ಆ್ಯಂಕರ್ : ಹಿರಿಯಾಳ್ ಕುಡಂ ಈದ್ಗಾ ರಸ್ತೆಯ ಕುರುಗೋಡು ತಾಲೂಕು ಪಶ್ಚಿಮ ವಲಯ ವ್ಯಾಪ್ತಿಯ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ 2026-27ನೇ ಸಾಲಿನ 6ನೇ ತರಗತಿಯ ಉಳಿಕೆ ಸೀಟುಗಳ ಭರ್ತಿಗಾಗಿ ಜುಲೈ 21 ರಂದು ಕೌನ್ಸಿಲಿಂಗ್ ಪ್ರಕ್ರಿಯೆ ನಡೆಯಲಿದೆ ಎಂದು ಆದರ್ಶ ವಿದ್ಯಾಲಯದ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.

ಶಾಲೆಯಲ್ಲಿ ಖಾಲಿ ಇರುವ ಒಟ್ಟು 5 ಸೀಟುಗಳಿಗೆ ಅರ್ಹ ಮೆರಿಟ್ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ಕೌನ್ಸಿಲಿಂಗ್ ಪ್ರಕ್ರಿಯೆ ನಡೆಯಲಿದೆ

ಪ್ರವೇಶದ ಸಮಯದಲ್ಲಿ ವಿದ್ಯಾರ್ಥಿಯ ಎಲ್ಲಾ ಅಗತ್ಯ ಮೂಲ ದಾಖಲೆಗಳನ್ನು ಒದಗಿಸಬೇಕು. ಅರ್ಜಿ ಜೊತೆಗೆ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಪ್ರವೇಶ ಪತ್ರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಒಂದು ವೇಳೆ ವಿದ್ಯಾರ್ಥಿಯು ಬೇರೆ ತಾಲೂಕಿನಿಂದ ಬಂದವರಾಗಿದ್ದಲ್ಲಿ, ತಹಶೀಲ್ದಾರರಿಂದ ಪಡೆದ ವಾಸಸ್ಥಳ ದೃಢೀಕರಣ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಲಗತ್ತಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ಮತ್ತು ಪೋಷಕರು ಶಾಲೆಯ ಕಚೇರಿಯನ್ನು ಅಥವಾ ಮೊ.9740738762 ಅನ್ನು ಸಂಪರ್ಕಿಸಬಹುದಾಗಿದೆ..

-

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande