
ಕೊಪ್ಪಳ , 20 ಜುಲೈ (ಹಿ.ಸ.):
ಆ್ಯಂಕರ್ : ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು ಹಾಗೂ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ಇವರ ಸಹಯೋಗದಲ್ಲಿ “ಕೃಷಿ ಪರಿಸರದಲ್ಲಿ ಪಕ್ಷಿಗಳು” ಎಂಬ ಉಪನ್ಯಾಸದ ಕಾರ್ಯಕ್ರಮವನ್ನು ಜುಲೈ 22 ರಂದು ಮದ್ಯಾಹ್ನ 3 ರಿಂದ 4 ಗಂಟೆಯವರೆಗೆ ಕೊಪ್ಪಳ ತಾಲ್ಲೂಕ ಪಂಚಾಯತ ಆವರಣದಲ್ಲಿರುವ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಸಂಪನ್ಮೂಲ ವ್ಯಕ್ತಿಯಾಗಿ ಪರಿಸರ ಪ್ರೇಮಿ ಸಲ್ಲಾವುದ್ದೀನ್ ಅವರು ಮಾನವಿಯಿಂದ ಆಗಮಿಸಲಿದ್ದಾರೆ. ಕೃಷಿಯಲ್ಲಿ ಪಕ್ಷಿಗಳ ಪಾತ್ರ, ಅವುಗಳ ಜೀವನ ಚಕ್ರ ಮತ್ತು ಅವುಗಳನ್ನು ಗುರುತು ಹಿಡಿಯುವುದು ಮುಂತಾದವುಗಳ ಬಗ್ಗೆ ಮಾಹಿತಿ ಅರಿಯಲು ಇಚ್ಛೀಸುವ ಆಸಕ್ತರು ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದ್ದು, ನೊಂದಣಿ ಕಡ್ಡಾಯ ಭೀಮಾಂಭಿಕ ಮೊ.ಸಂ: 8073746859 ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಬದರಿ ಪ್ರಸಾದ ಪಿ.ಆರ್ ತಿಳಿಸಿದ್ದಾರೆ.
----
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್