ತಾಯಿ ಅಗಲಿಕೆಯ ನೋವಿನಲ್ಲಿ ಭಾವುಕರಾದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ
ಬೆಂಗಳೂರ, 19 ಜುಲೈ (ಹಿ.ಸ.) ಆಂಕರ್ : ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ತಾಯಿ ಚೆನ್ನಮ್ಮ (89) ಅವರು ಶನಿವಾರ ವಿಧಿವಶರಾದರು. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದ ತಾಯಿಯನ್ನು ನೆನೆದು ಕುಮಾರಸ್ವಾಮಿ ಭಾವು
hennamma-bengaluru


ಬೆಂಗಳೂರ, 19 ಜುಲೈ (ಹಿ.ಸ.)

ಆಂಕರ್ :

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ತಾಯಿ ಚೆನ್ನಮ್ಮ (89) ಅವರು ಶನಿವಾರ ವಿಧಿವಶರಾದರು. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದ ತಾಯಿಯನ್ನು ನೆನೆದು ಕುಮಾರಸ್ವಾಮಿ ಭಾವುಕರಾದರು.

ನಮ್ಮ ಬದುಕಿಗೆ ದಾರಿ ದೀಪವಾಗಿದ್ದ ತಾಯಿ, ಸರಳತೆ ಮತ್ತು ದೈವಭಕ್ತಿಯ ಮೂರ್ತರೂಪವಾಗಿದ್ದರು. ತಂದೆಯವರ ರಾಜಕೀಯ ಏಳು-ಬೀಳಿನ ಹಾದಿಯಲ್ಲಿ ಅವರು ನೀಡಿದ ಬೆಂಬಲ ಮತ್ತು ಸಂಸ್ಕಾರವೇ ನಮ್ಮ ಕುಟುಂಬದ ಶಕ್ತಿ ಎಂದು ಕುಮಾರಸ್ವಾಮಿ ಸ್ಮರಿಸಿದರು. ತಾಯಿ ಮನೆಗೆ ಬರುವ ಅತಿಥಿಗಳನ್ನು ಮತ್ತು ಬಡ ವಿದ್ಯಾರ್ಥಿಗಳನ್ನು ಸಮಾನವಾಗಿ ಪ್ರೀತಿಸುತ್ತಿದ್ದ ಬಗೆಯನ್ನು ಅವರು ಕಣ್ಣೀರಿಡುತ್ತಾ ವಿವರಿಸಿದರು.

ಬೆಂಗಳೂರಿನ ನಿವಾಸದಲ್ಲಿ ಇಂದು ಬೆಳಿಗ್ಗೆ 11 ಗಂಟೆಯವರೆಗೆ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ, ಸ್ವಗ್ರಾಮವಾದ ಹೊಳೆನರಸೀಪುರದಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ, ಮಾವಿನಕೆರೆ ರಂಗನಾಥಸ್ವಾಮಿ ದೇವಸ್ಥಾನದ ಸಮೀಪ ಅಂತ್ಯಕ್ರಿಯೆ ನಡೆಯಲಿದೆ ಎಂದು ಸಚಿವರು ತಿಳಿಸಿದರು. ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / NAVEEN PARADESHII


 rajesh pande