ಪತಿ ದೇವೇಗೌಡರೊಂದಿಗೆ ಚೆನ್ನಮ್ಮ ಅವರ ಭಾವಪೂರ್ಣ ಕ್ಷಣಗಳ ವಿಡಿಯೋ ವೈರಲ್
ಬೆಂಗಳೂರ, 19 ಜುಲೈ (ಹಿ.ಸ.) ಆಂಕರ್ : ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ (89) ಅವರು ಇಹಲೋಕ ತ್ಯಜಿಸುವ ಮೂರು ದಿನಗಳ ಮುನ್ನ ಪತಿಯೊಂದಿಗೆ ಕಳೆದ ಅವಿಸ್ಮರಣೀಯ ಕ್ಷಣಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಸ್ಪತ್ರೆಗೆ ದಾಖಲಾಗುವ ಮುನ್ನದ ಈ ವಿಡಿಯೋದಲ್ಲಿ, ದೇವೇ
chennamma-deve-gowda


ಬೆಂಗಳೂರ, 19 ಜುಲೈ (ಹಿ.ಸ.)

ಆಂಕರ್ :

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ (89) ಅವರು ಇಹಲೋಕ ತ್ಯಜಿಸುವ ಮೂರು ದಿನಗಳ ಮುನ್ನ ಪತಿಯೊಂದಿಗೆ ಕಳೆದ ಅವಿಸ್ಮರಣೀಯ ಕ್ಷಣಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಸ್ಪತ್ರೆಗೆ ದಾಖಲಾಗುವ ಮುನ್ನದ ಈ ವಿಡಿಯೋದಲ್ಲಿ, ದೇವೇಗೌಡರು ಪ್ರೀತಿಯಿಂದ ಪತ್ನಿಗೆ ಬಾಳೆಹಣ್ಣು ತಿನ್ನಿಸಿ, ಭುಜ ತಟ್ಟಿ ಧೈರ್ಯ ತುಂಬುತ್ತಿರುವುದು ಕಂಡುಬರುತ್ತದೆ. ಇದಕ್ಕೆ ಪ್ರತಿಯಾಗಿ ಚೆನ್ನಮ್ಮ ಅವರು ಪತಿಯ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾರೆ. ಈ ದೃಶ್ಯವು ದಂಪತಿಯ ಅವಿನಾಭಾವ ಸಂಬಂಧಕ್ಕೆ ಸಾಕ್ಷಿಯಾಗಿದೆ.

1954ರ ಮೇ 25ರಂದು ವಿವಾಹವಾಗಿದ್ದ ಈ ಆದರ್ಶ ದಂಪತಿ, 72 ವರ್ಷಗಳ ಸುದೀರ್ಘ ದಾಂಪತ್ಯ ಜೀವನ ನಡೆಸಿದ್ದಾರೆ. ಇವರಿಗೆ ಹೆಚ್.ಡಿ.ಬಾಲಕೃಷ್ಣ ಗೌಡ, ಹೆಚ್.ಡಿ.ರೇವಣ್ಣ, ಹೆಚ್.ಡಿ.ಕುಮಾರಸ್ವಾಮಿ, ಹೆಚ್.ಡಿ.ರಮೇಶ್ ಎಂಬ ನಾಲ್ವರು ಪುತ್ರರು ಮತ್ತು ಅನಸೂಯ, ಶೈಲಜಾ ಎಂಬ ಇಬ್ಬರು ಪುತ್ರಿಯರು ಇದ್ದಾರೆ. ದಶಕಗಳ ಕಾಲ ದೇವೇಗೌಡರ ರಾಜಕೀಯ ಪಯಣದಲ್ಲಿ ಸದಾ ಬೆನ್ನೆಲುಬಾಗಿ ನಿಂತಿದ್ದ ಚೆನ್ನಮ್ಮ ಅವರ ನಿಧನದಿಂದ ಕುಟುಂಬದ ಸದಸ್ಯರು ಮತ್ತು ಅಪಾರ ಅಭಿಮಾನಿಗಳು ಶೋಕಸಾಗರದಲ್ಲಿ ಮುಳುಗಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / NAVEEN PARADESHII


 rajesh pande