ಫಿಫಾ ವಿಶ್ವಕಪ್ ಫೈನಲ್:ಬೆಳಗಿನ ಜಾವದವರೆಗೆ ವೀಕ್ಷಣಗೆ ಅವಕಾಶ; ಯುವಕರಿಗೆ ಶಾಂತಿ ಪಾಲಿಸಲು ಸಿಎಂ ಡಿಕೆಶಿ ಮನವಿ
ಬೆಂಗಳೂರ, 19 ಜುಲೈ (ಹಿ.ಸ.) ಆಂಕರ್ : ಫಿಫಾ ವಿಶ್ವಕಪ್ ಅಂತಿಮ ಪಂದ್ಯವನ್ನು ವೀಕ್ಷಿಸಲು ಯುವಕರು ಮತ್ತು ಫುಟ್ಬಾಲ್ ಅಭಿಮಾನಿಗಳು ವ್ಯಕ್ತಪಡಿಸಿದ ಅಪಾರ ಉತ್ಸಾಹವನ್ನು ಗಮನಿಸಿ, ರಾಜ್ಯ ಸರ್ಕಾರವು ಇಂದು ರಾತ್ರಿ ಹೋಟೆಲ್ ಮತ್ತು ರೆಸ್ಟೋರೆಂಟ್ಗಳು ಬೆಳಗಿನ ಜಾವ 3:30 ರವರೆಗೆ ಕಾರ್ಯನಿರ್ವಹಿಸಲು ವಿಶೇಷ ಅನ
cm-dk-shivakumar


ಬೆಂಗಳೂರ, 19 ಜುಲೈ (ಹಿ.ಸ.)

ಆಂಕರ್ : ಫಿಫಾ ವಿಶ್ವಕಪ್ ಅಂತಿಮ ಪಂದ್ಯವನ್ನು ವೀಕ್ಷಿಸಲು ಯುವಕರು ಮತ್ತು ಫುಟ್ಬಾಲ್ ಅಭಿಮಾನಿಗಳು ವ್ಯಕ್ತಪಡಿಸಿದ ಅಪಾರ ಉತ್ಸಾಹವನ್ನು ಗಮನಿಸಿ, ರಾಜ್ಯ ಸರ್ಕಾರವು ಇಂದು ರಾತ್ರಿ ಹೋಟೆಲ್ ಮತ್ತು ರೆಸ್ಟೋರೆಂಟ್ಗಳು ಬೆಳಗಿನ ಜಾವ 3:30 ರವರೆಗೆ ಕಾರ್ಯನಿರ್ವಹಿಸಲು ವಿಶೇಷ ಅನುಮತಿ ನೀಡಿದೆ.

ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಯುವಕರ ಮನವಿಯಂತೆ ಪಂದ್ಯ ವೀಕ್ಷಣೆಗೆ ಸಮಯಾವಕಾಶ ವಿಸ್ತರಿಸಲಾಗಿದೆ. ಆದರೆ, ಅಭಿಮಾನಿಗಳು ಸಂಭ್ರಮಾಚರಣೆಯ ಭರದಲ್ಲಿ ತಾಳ್ಮೆ ಕಳೆದುಕೊಳ್ಳಬಾರದು. ಪೊಲೀಸರು ಎಲ್ಲೆಡೆ ಕಣ್ಗಾವಲು ಇರಿಸಿದ್ದು, ಯಾರೇ ಗೆದ್ದರೂ ಶಾಂತಿಯುತವಾಗಿ ಪಂದ್ಯವನ್ನು ಆನಂದಿಸಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ರಾಜ್ಯದಲ್ಲಿನ ಬರ ಪರಿಸ್ಥಿತಿಯ ಬಗ್ಗೆಯೂ ಗಂಭೀರವಾಗಿ ಪ್ರತಿಕ್ರಿಯಿಸಿದ ಸಿಎಂ, ಸಚಿವರು, ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳಿಗೆ ರಜೆ ಎಂಬುದಿಲ್ಲ. ರಾಜ್ಯದಲ್ಲಿ ಬರಗಾಲ ನಿರ್ವಹಣೆಗೆ ಸಂಬಂಧಿಸಿದಂತೆ ಡಿಸಿ ಮತ್ತು ಸಿಇಓಗಳೊಂದಿಗೆ ವೀಡಿಯೊ ಸಂವಾದ ನಡೆಸಲಾಗುತ್ತಿದೆ. ಅಧಿಕಾರಿಗಳು 24 ಗಂಟೆಯೂ ಜಾಗರೂಕರಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಕುಡಿಯುವ ನೀರಿನ ಅಭಾವವನ್ನು ನೀಗಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದ ಅವರು, ರಾಜ್ಯದ ಪ್ರತಿ ತಾಲ್ಲೂಕಿಗೆ ಕುಡಿಯುವ ನೀರಿನ ಪೂರೈಕೆಗಾಗಿ ತಲಾ ಒಂದು ಕೋಟಿ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / NAVEEN PARADESHII


 rajesh pande