ಮಹಿಳೆಯರಿಗೆ ಅಪಮಾನ ಮಾಡುವುದು ಕಾಂಗ್ರೆಸ್ ಸಂಸ್ಕೃತಿ:ಪ್ರಹ್ಲಾದ ಜೋಶಿ
ಬೆಂಗಳೂರು, 19 ಜುಲೈ (ಹಿ.ಸ.): ಆ್ಯಂಕರ್: ಕಾಂಗ್ರೆಸ್ಸಿಗರಿಗೆ ಮಹಿಳೆಯರ ಬಗ್ಗೆ ಕಿಂಚಿತ್ತೂ ಗೌರವೇ ಇಲ್ಲವಾಗಿದೆ. ಹೆಣ್ಣು ಮಕ್ಕಳ ಚಾರಿತ್ರ್ಯ ಹರಣ ಮಾಡುವುದೇ ಕಾಂಗ್ರೆಸ್‌ನ ಸಂಸ್ಕೃತಿಯೇ? ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ. ʼಕಾಂಗ್ರೆಸ್‌ ಶಾಸಕ ಎಚ್‌.ಸಿ.ಬಾಲಕೃಷ್ಣ ಸುದ್ದಿಗೋ
Joshi file photo


ಬೆಂಗಳೂರು, 19 ಜುಲೈ (ಹಿ.ಸ.):

ಆ್ಯಂಕರ್:

ಕಾಂಗ್ರೆಸ್ಸಿಗರಿಗೆ ಮಹಿಳೆಯರ ಬಗ್ಗೆ ಕಿಂಚಿತ್ತೂ ಗೌರವೇ ಇಲ್ಲವಾಗಿದೆ. ಹೆಣ್ಣು ಮಕ್ಕಳ ಚಾರಿತ್ರ್ಯ ಹರಣ ಮಾಡುವುದೇ ಕಾಂಗ್ರೆಸ್‌ನ ಸಂಸ್ಕೃತಿಯೇ? ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ.

ʼಕಾಂಗ್ರೆಸ್‌ ಶಾಸಕ ಎಚ್‌.ಸಿ.ಬಾಲಕೃಷ್ಣ ಸುದ್ದಿಗೋಷ್ಠಿಯಲ್ಲಿ ಬಿಡದಿ ಟೌನ್‌ಶಿಪ್‌ ಹೋರಾಟದ ವಿಚಾರವಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬಗ್ಗೆ ತೀರಾ ಲಘು ಭಾಷೆಯಲ್ಲಿ ಮಾತನಾಡಿದ್ದು, ಇದು ಅವರ ಅಸಭ್ಯತನದ ಪರಮಾವಧಿ‌ ಮತ್ತು ಮಹಿಳೆಯರಿಗೆ ಅಗೌರವ ತೋರುವ ಕಾಂಗ್ರೆಸ್‌ನ ನಿಜ ಸಂಸ್ಕೃತಿಯನ್ನು ಪ್ರತಿಬಿಂಬಿಸಿದೆʼ ಎಂದು ಜೋಶಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಿಳಾ ಚಾರಿತ್ರ್ಯ ಹರಣ ಕಾಂಗ್ರೆಸ್ ಸಂಸ್ಕೃತಿಯೇ:?ಕಾಂಗ್ರೆಸ್‌ ಪಕ್ಷದಲ್ಲಿ ಸಿಎಂ ಡಿಕೆ ಶಿವಕುಮಾರ್‌ ಅವರ ಕಿರುಬೆರಳು ಹಿಡಿದು ನಡೆಯುತ್ತಿರುವ ಶಾಸಕ ಬಾಲಕೃಷ್ಣ ಒಬ್ಬ ಜವಾಬ್ದಾರಿಯುತ ಮಹಿಳಾ ಜನಪ್ರತಿನಿಧಿ ಬಗ್ಗೆ ಸಾರ್ವಜನಿಕವಾಗಿ ಇಷ್ಟು ಹಗುರವಾಗಿ, ಕೀಳುಮಟ್ಟದ ಪದ ಪ್ರಯೋಗದೊಂದಿಗೆ ಮಾತನಾಡುವುದು ಅವರ ಅಸಲಿತನ ಏನೆಂಬುದನ್ನು ಪ್ರದರ್ಶಿಸುತ್ತದೆ ಎಂದು ತಿರುಗೆಟು ನೀಡಿದ್ದಾರೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ.

ಶಾಸಕ ಬಾಲಕೃಷ್ಣ ಅವರ ನುಡಿಮುತ್ತುಗಳು ʼಮಹಿಳೆಯರಿಗೆ ಅಗೌರʼವ ತೋರುವ ಕಾಂಗ್ರೆಸ್ ಪಕ್ಷದ ಅಪ್ಪಟ ಸಂಸ್ಕೃತಿಯನ್ನು ಮತ್ತೆ ಅನಾವರಣಗೊಳಿಸಿದೆ. ಆಡಳಿತ-ರಾಜಕಾರಣವನ್ನು ವೈಯಕ್ತಿಕ ನಿಂದನೆ ಮಟ್ಟಕ್ಕೆ ತೆಗೆದುಕೊಂಡು ಹೋಗಿ ರಾಜ್ಯದಲ್ಲಿ ಅರಾಜಕತೆ ಇರುವುದನ್ನು ಸಾಬೀತುಪಡಿಸಿದ್ದಾರೆ ಎಂದು ಜೋಶಿ ಖಂಡಿಸಿದ್ದಾರೆ.

ಸಾರ್ವತ್ರಿಕ ಜೀವನದಲ್ಲಿರುವ ಒಬ್ಬ ಗೌರವಾನ್ವಿತ ಮಹಿಳಾ ಪ್ರತಿನಿಧಿ ಬಗ್ಗೆ ಕಾಂಗ್ರೆಸ್‌ನವರು ಹೀಗೆ ಕೀಳಾಗಿ ಮಾತನಾಡುವ ಮಟ್ಟಕ್ಕಿಳಿದುರುವುದು ನಿಜಕ್ಕೂ ಮಹಿಳಾ ಸಮುದಾಯದ ಶೋಷಣೆ ಮತ್ತು ಶೋಚನೀಯವೇ ಸರಿ. ಹೆಣ್ಣುಮಕ್ಕಳ ಚಾರಿತ್ರ್ಯಹರಣ ಮಾಡುವ ಕಾಂಗ್ರೆಸ್‌ನ ಹಳೇ ಚಾಳಿ ಇನ್ನೂ ಮುಂದುವರೆದೇ ಇದೆ ಎಂದು ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಬಾಲಕೃಷ್ಣ ಕೂಡಲೇ ಮಹಿಳಾ ಸಮುದಾಯದ ಕ್ಷಮೆಯಾಚಿಸಲಿ:

ಮಹಿಳಾ ಜನಪ್ರತಿನಿಧಿಯೊಬ್ಬರನ್ನು ಹೀಗೆ ಏಕವಚನದಲ್ಲಿ ನಿಂದಿಸುತ್ತ ಸಂವೇದನಾ ರಹಿತ, ಪುರುಷ ಪ್ರಧಾನರಾಗಿ ದರ್ಪದ ಮಾತನಾಡಿರುವ ಶಾಸಕ ಹೆಚ್.ಸಿ.ಬಾಲಕೃಷ್ಣ ಈ ಕೂಡಲೇ ಮಹಿಳಾ ಸಮುದಾಯದ ಕ್ಷಮೆಯಾಚಿಸಬೇಕು ಎಂದು ಜೋಶಿ ಆಗ್ರಹಿಸಿದ್ದಾರೆ.

ʼಮಹಿಳಾ ಸಬಲೀಕರಣʼ ಎಂದೆಲ್ಲಾ ದೊಡ್ಡದಾಗಿ ಭಾಷಣ ಬಿಗಿಯುವ ಕಾಂಗ್ರೆಸ್ ಮುಖಂಡರೇ, ನಿಮ್ಮದೇ ಪಕ್ಷದ ಶಾಸಕರ ಈ ʼಮಹಿಳಾ ವಿರೋಧಿʼ ನಡೆ ವಿರುದ್ಧ ಕ್ರಮ ಜರುಗಿಸುವ ಧೈರ್ಯವಿದೆಯೇ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ, ತಮ್ಮ ಪರಮಾಪ್ತ ಶಾಸಕರೆಂದು ರಾಜಕೀಯದ ನೆಪದಲ್ಲಿ ಈ ಗಂಭೀರ ಮಹಿಳಾಪಮಾನ ಪ್ರಕರಣವನ್ನು ತೇಲಿಸಿಬಿಡುತ್ತೀರಾ? ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರಿಗೆ ಚಾಟಿ ಬೀಸಿದ್ದಾರೆ.

ಸಾರ್ವಜನಿಕ ಜೀವನದಲ್ಲಿರುವ ಹೆಣ್ಣು ಮಕ್ಕಳಿಗೆ ಕನಿಷ್ಠ ಗೌರವ ತೋರದೆ, ವಿಕೃತ ನಡವಳಿಕೆ ಪ್ರದರ್ಶಿಸುವುದು ಕಾಂಗ್ರೆಸ್ ಪಕ್ಷದ ಅಸಭ್ಯತನದ ಪರಮಾವಧಿ‌ ಎಂದು ತರಾಟೆಗೆ ತೆಗೆದುಕೊಂಡಿರುವ ಪ್ರಲ್ಹಾದ ಜೋಶಿ, ಕಾಂಗ್ರೆಸ್ ಹೈಕಮಾಂಡ್‌ ತಕ್ಷಣವೇ ಶಾಸಕ ಹೆಚ್.ಸಿ.ಬಾಲಕೃಷ್ಣ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ರಾಹುಲ್‌ ಗಾಂಧಿ ಅವರೇ ಇದೇನಾ ಕಾಂಗ್ರೆಸ್‌ ಸಂಸ್ಕೃತಿ?:

ಒಬ್ಬ ಮಹಿಳೆ ಕುರಿತು ಇಷ್ಟು ಹಗುರವಾಗಿ, ತೀರಾ ಕೀಳುಮಟ್ಟದ ಶಬ್ದಗಳನ್ನು ಬಳಸಿ ಮಾತನಾಡುವುದು ಕಾಂಗ್ರೆಸ್ ಪಕ್ಷದ ಸಂಪ್ರದಾಯವೇ? ಇದೇನಾ ನಿಮ್ಮ ನಾಯಕರ ಸಂಸ್ಕೃತಿ? ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande