ಜನತೆಗೆ ನೀಡಿದ ಭರವಸೆ ಈಡೇರಿಸುವುದೇ ನಿಜವಾದ ಅಭಿವೃದ್ಧಿ: ಕೃಷ್ಣ ಬೈರೇಗೌಡ
ಬೆಂಗಳೂರು, 19 ಜುಲೈ (ಹಿ.ಸ.): ಆ್ಯಂಕರ್: ಜನತೆಗೆ ನೀಡಿದ ಭರವಸೆಗಳನ್ನು ಸಾಕಾರಗೊಳಿಸುವುದೇ ನಿಜವಾದ ಅಭಿವೃದ್ಧಿ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ನಗರದ ನರಸೀಪುರ ಮತ್ತು ಕುವೆಂಪುನಗರ ಮೊದಲನೇ ಹಂತದಲ್ಲಿ ಕೈಗೆತ್ತಿಕೊಳ್ಳಲಾದ ಕಾಂಕ್ರೀಟ್ ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಚಾಲ
ರಸ್ತೆ ಕಾಮಗಾರಿಗೆ ಚಾಲನೆ


ಬೆಂಗಳೂರು, 19 ಜುಲೈ (ಹಿ.ಸ.):

ಆ್ಯಂಕರ್:

ಜನತೆಗೆ ನೀಡಿದ ಭರವಸೆಗಳನ್ನು ಸಾಕಾರಗೊಳಿಸುವುದೇ ನಿಜವಾದ ಅಭಿವೃದ್ಧಿ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ನಗರದ ನರಸೀಪುರ ಮತ್ತು ಕುವೆಂಪುನಗರ ಮೊದಲನೇ ಹಂತದಲ್ಲಿ ಕೈಗೆತ್ತಿಕೊಳ್ಳಲಾದ ಕಾಂಕ್ರೀಟ್ ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದ ಅವರು, ಈ ರಸ್ತೆಗಳು ಸ್ಥಳೀಯ ಸಂಪರ್ಕವನ್ನು ಮತ್ತಷ್ಟು ಸುಧಾರಿಸುವುದರ ಜೊತೆಗೆ ಮೂಲಸೌಕರ್ಯವನ್ನು ಬಲಪಡಿಸಲಿವೆ ಎಂದು ತಿಳಿಸಿದರು.

ಇದರೊಂದಿಗೆ ಸಾರ್ವಜನಿಕರ ಸಂಚಾರ ಇನ್ನಷ್ಟು ಸುರಕ್ಷಿತ ಹಾಗೂ ಸುಗಮವಾಗಲಿದ್ದು, ಅಭಿವೃದ್ಧಿ ಕಾಮಗಾರಿಗಳ ಮೂಲಕ ಜನರ ನಿರೀಕ್ಷೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande