ಬೆಂಗಳೂರಿನಲ್ಲಿ ಶ್ವಾನ ದತ್ತು ಕಾರ್ಯಕ್ರಮಕ್ಕೆ ಚಾಲನೆ
ಬೆಂಗಳೂರು, 19 ಜುಲೈ (ಹಿ.ಸ.): ಆ್ಯಂಕರ್: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಾಗೂ ಬೆಂಗಳೂರು ಪೂರ್ವ ನಗರ ಪಾಲಿಕೆ (ಬಿಇಸಿಸಿ) ವತಿಯಿಂದ ವೈಟ್‌ಫೀಲ್ಡ್‌ನ ನೆಕ್ಸಸ್ ಶಾಂತಿನಿಕೇತನ ಮಾಲ್‌ನಲ್ಲಿ ಆಯೋಜಿಸಿದ್ದ ''ಅಡಾಪ್ಟ್ ಮಿ–ಸೆಕೆಂಡ್ ಇನ್ನಿಂಗ್ಸ್'' ಶ್ವಾನ ದತ್ತು ಕಾರ್ಯಕ್ರಮಕ್ಕೆ ಬೆಂಗಳೂರು
ಶ್ವಾನ ದತ್ತು ಕಾರ್ಯಕ್ರಮ


ಬೆಂಗಳೂರು, 19 ಜುಲೈ (ಹಿ.ಸ.):

ಆ್ಯಂಕರ್:

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಾಗೂ ಬೆಂಗಳೂರು ಪೂರ್ವ ನಗರ ಪಾಲಿಕೆ (ಬಿಇಸಿಸಿ) ವತಿಯಿಂದ ವೈಟ್‌ಫೀಲ್ಡ್‌ನ ನೆಕ್ಸಸ್ ಶಾಂತಿನಿಕೇತನ ಮಾಲ್‌ನಲ್ಲಿ ಆಯೋಜಿಸಿದ್ದ 'ಅಡಾಪ್ಟ್ ಮಿ–ಸೆಕೆಂಡ್ ಇನ್ನಿಂಗ್ಸ್' ಶ್ವಾನ ದತ್ತು ಕಾರ್ಯಕ್ರಮಕ್ಕೆ ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಚಾಲನೆ ನೀಡಿದರು.

ಅಪಘಾತದಲ್ಲಿ ಗಾಯಗೊಂಡ, ಮಾಲೀಕರಿಂದ ತೊರೆದುಹೋಗಿದ್ದ ಅಥವಾ ರಕ್ಷಿಸಿ ವೈದ್ಯಕೀಯ ಚಿಕಿತ್ಸೆ ನೀಡಿ ಪುನರ್ವಸತಿ ಕಲ್ಪಿಸಲಾಗಿದ್ದ 40ಕ್ಕೂ ಹೆಚ್ಚು ಶ್ವಾನಗಳನ್ನು ನಾಗರಿಕರು ದತ್ತು ಪಡೆಯಲು ಈ ಕಾರ್ಯಕ್ರಮದಲ್ಲಿ ಅವಕಾಶ ಕಲ್ಪಿಸಲಾಯಿತು.

ಇದರೊಂದಿಗೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು (ಆರ್‌ಡಬ್ಲ್ಯುಎ) ಹಾಗೂ ಅಪಾರ್ಟ್‌ಮೆಂಟ್ ಮಾಲೀಕರ ಸಂಘಗಳ (ಎಒಎ) ಸದಸ್ಯರಿಗೆ ರೇಬೀಸ್ ತಡೆಗಟ್ಟುವಿಕೆ ಹಾಗೂ ಮನುಷ್ಯ–ಶ್ವಾನಗಳ ಸಹಬಾಳ್ವೆ ಕುರಿತು ಜಾಗೃತಿ ಕಾರ್ಯಕ್ರಮವೂ ನಡೆಯಿತು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande