
ಧಾರವಾಡ, 19 ಜುಲೈ (ಹಿ.ಸ.):
ಆ್ಯಂಕರ್:
ಧಾರವಾಡ ಜಿಲ್ಲೆಯ ನವಲಗುಂದ ಪೊಲೀಸ್ ಠಾಣೆಗೆ ಸಂಬಂಧಿಸಿದಂತೆ 14 ಅಪರಾಧ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ವಿಲೇವಾರಿಗೊಂಡಂತಹ 13 ದ್ವೀಚಕ್ರ ವಾಹನಗಳು, 1 ಆಟೋ ರಿಕ್ಷಾ ಮತ್ತು 1 ನಾಲ್ಕು ಚಕ್ರದ ಟಾಟಾ ಇಂಡಿಕಾ ವಾಹನಗಳನ್ನು ನ್ಯಾಯಾಲಯದಿಂದ ಹರಾಜು ಪ್ರಕ್ರಿಯೆಗೆ ಆದೇಶವಾಗಿರುತ್ತದೆ.
ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ ಆದೇಶದಂತೆ ವಾಹನಗಳ ದರ ನಿಗದಿ ಪಡಿಸಿದ್ದು ಮತ್ತು ವಾರಸುದಾರರಿಗೆ ಕಾಲಾವಕಾಶ ನೀಡಿ ವಿಲೇವಾರಿ ಮಾಡಲು ಸೂಚಿಸಿರುತ್ತಾರೆ. ಅದರಂತೆ ಜುಲೈ 14, 2026 ರಂದು ನವಲಗುಂದ ಪೊಲೀಸ್ ಠಾಣೆಯ ಆವರಣದಲ್ಲಿ ಹಮ್ಮಿಕೊಂಡಿದ ಹರಾಜು ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಪಾಲ್ಗೋಳ್ಳದೆ ಇರುವದರಿಂದ ಮತ್ತೊಮ್ಮೆ ಸದರಿ ಹರಾಜು ಪ್ರಕ್ರೀಯೆನ್ನು ಜುಲೈ 23, 2026 ರಂದು ನವಲಗುಂದ ಪೊಲೀಸ್ ಠಾಣೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಆಸಕ್ತರು ನವಲಗುಂದ ಪೊಲೀಸ್ ಠಾಣೆ, ಪಿಎಸ್‍ಐ ನವಲಗುಂದ ರವರ ಮೊಬೈಲ್ ಸಂಖ್ಯೆ: 9480804348, ನವಲಗುಂದ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ:08380-229233 ಗೆ ಸಂಪರ್ಕಿಸಬಹುದು ಎಂದು ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.