ವಿಕ್ರಮ್-1 ಉಡಾವಣೆಗೆ ಪ್ರಧಾನಿ ಮೋದಿ ಶುಭಾಶಯ
ನವದೆಹಲಿ, 18 ಜುಲೈ (ಹಿ.ಸ.): ಆ್ಯಂಕರ್:ಭಾರತದ ಮೊದಲ ಖಾಸಗಿ ಉಡಾವಣಾ ವಾಹಕ ವಿಕ್ರಮ್-1ನ ಉಡಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಶುಭಾಶಯ ಕೋರಿದ್ದಾರೆ. ಇಂದು ಬೆಳಿಗ್ಗೆ 11.30ಕ್ಕೆ ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆ ಭಾರತದಲ್ಲಿ ಖಾಸಗಿಯಾಗಿ ಅಭಿವೃದ್ಧಿಪಡಿಸಲಾ
ಪ್ರಧಾನಿ ಎಕ್ಸನಲ್ಲಿ ಹಂಚಿಕೊಂಡಿರುವ ಪೋಟೊ


ನವದೆಹಲಿ, 18 ಜುಲೈ (ಹಿ.ಸ.):

ಆ್ಯಂಕರ್:ಭಾರತದ ಮೊದಲ ಖಾಸಗಿ ಉಡಾವಣಾ ವಾಹಕ ವಿಕ್ರಮ್-1ನ ಉಡಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಶುಭಾಶಯ ಕೋರಿದ್ದಾರೆ.

ಇಂದು ಬೆಳಿಗ್ಗೆ 11.30ಕ್ಕೆ ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆ ಭಾರತದಲ್ಲಿ ಖಾಸಗಿಯಾಗಿ ಅಭಿವೃದ್ಧಿಪಡಿಸಲಾದ ಮೊದಲ ಉಡಾವಣಾ ವಾಹಕ ವಿಕ್ರಮ್-1ರ ಮೊದಲ ಕಕ್ಷಾ ಉಡಾವಣೆಯನ್ನು ಕೈಗೊಳ್ಳಲಿದೆ. ಇದು ಭಾರತದ ಬಾಹ್ಯಾಕಾಶ ಪಯಣದ ಹೊಸ ಐತಿಹಾಸಿಕ ಅಧ್ಯಾಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿಕ್ರಮ್-1 ನಾಲ್ಕು ಹಂತಗಳನ್ನು ಹೊಂದಿರುವ ರಾಕೆಟ್ ಆಗಿದ್ದು, ವೇಗವಾಗಿ ಹಾಗೂ ಬೇಡಿಕೆಗೆ ಅನುಗುಣವಾಗಿ ಉಪಗ್ರಹಗಳನ್ನು ಉಡಾವಣೆ ಮಾಡುವ ಸಾಮರ್ಥ್ಯ ಹೊಂದಿದೆ. ಈ ಯೋಜನೆ ದೇಶದ ಯುವ ಪ್ರತಿಭೆ, ದೃಢ ಸಂಕಲ್ಪ ಮತ್ತು ಉದ್ಯಮಶೀಲ ಮನೋಭಾವದ ಪ್ರತೀಕವಾಗಿದೆ. ಜೊತೆಗೆ, ಬಾಹ್ಯಾಕಾಶ ಕ್ಷೇತ್ರದಲ್ಲಿ ಸರ್ಕಾರ ಕೈಗೊಂಡಿರುವ ಸುಧಾರಣೆಗಳು ಹೊಸ ಆವಿಷ್ಕಾರ ಮತ್ತು ಉದ್ಯಮಗಳಿಗೆ ಹೇಗೆ ಅವಕಾಶಗಳನ್ನು ಸೃಷ್ಟಿಸುತ್ತಿವೆ ಎಂಬುದಕ್ಕೂ ಇದು ಉತ್ತಮ ಉದಾಹರಣೆಯಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಸ್ಕೈರೂಟ್ ಏರೋಸ್ಪೇಸ್ ತಂಡಕ್ಕೆ ಯಶಸ್ವಿ ಉಡಾವಣೆಗೆ ಶುಭ ಹಾರೈಸಿರುವ ಪ್ರಧಾನಿ, ವಿಕ್ರಮ್-1 ಹೊಸ ಇತಿಹಾಸ ನಿರ್ಮಿಸಲಿ ಮತ್ತು ಮುಂದಿನ ಪೀಳಿಗೆಯ ಆವಿಷ್ಕಾರಕರಿಗೆ ಸ್ಫೂರ್ತಿಯಾಗಲಿ ಎಂದು ಆಶಿಸಿದ್ದಾರೆ.

ಈ ಐತಿಹಾಸಿಕ ಕ್ಷಣವನ್ನು ಎಲ್ಲ ಭಾರತೀಯರು, ವಿಶೇಷವಾಗಿ ಯುವಜನತೆ ಗಮನಿಸಿ, #IndiaWithVikram1 ಹ್ಯಾಶ್‌ಟ್ಯಾಗ್ ಮೂಲಕ ಸ್ಕೈರೂಟ್ ತಂಡಕ್ಕೆ ಶುಭಾಶಯ ಕೋರಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande