ದೇಶದ ಮೊದಲ ಹೈಡ್ರೋಜನ್ ರೈಲಿನ ಲೋಕೋ ಪೈಲಟ್ ರಾಜೇಶ್ ಕುಮಾರ್
ಚಂಡೀಗಢ, 17 ಜುಲೈ (ಹಿ.ಸ.): ಆ್ಯಂಕರ್: ಹರಿಯಾಣದ ಜಿಂದ್‌ನಿಂದ ಸಂಚರಿಸಲಿರುವ ದೇಶದ ಮೊದಲ ಹೈಡ್ರೋಜನ್ ರೈಲಿನ ಚಾಲನೆಗೆ ಲೋಕೋ ಪೈಲಟ್ ರಾಜೇಶ್ ಕುಮಾರ್ ಹಾಗೂ ಸಹಾಯಕ ಲೋಕೋ ಪೈಲಟ್ ಗಗನದೀಪ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ. ಹಲವು ತಿಂಗಳ ವಿಶೇಷ ತರಬೇತಿ ಬಳಿಕ ಇಬ್ಬರೂ ಶುಕ್ರವಾರ ಮೊದಲ ಬಾರಿಗೆ ರೈಲಿನ
ಲೋಕೋ ಪೈಲಟ್ ರಾಜೇಶ್ ಕುಮಾರ್


ಚಂಡೀಗಢ, 17 ಜುಲೈ (ಹಿ.ಸ.):

ಆ್ಯಂಕರ್:

ಹರಿಯಾಣದ ಜಿಂದ್‌ನಿಂದ ಸಂಚರಿಸಲಿರುವ ದೇಶದ ಮೊದಲ ಹೈಡ್ರೋಜನ್ ರೈಲಿನ ಚಾಲನೆಗೆ ಲೋಕೋ ಪೈಲಟ್ ರಾಜೇಶ್ ಕುಮಾರ್ ಹಾಗೂ ಸಹಾಯಕ ಲೋಕೋ ಪೈಲಟ್ ಗಗನದೀಪ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ. ಹಲವು ತಿಂಗಳ ವಿಶೇಷ ತರಬೇತಿ ಬಳಿಕ ಇಬ್ಬರೂ ಶುಕ್ರವಾರ ಮೊದಲ ಬಾರಿಗೆ ರೈಲಿನ ನಿಯಂತ್ರಣ ವಹಿಸಿಕೊಂಡರು.

ರಾಜೇಶ್ ಕುಮಾರ್ ಅವರು ಈ ರೈಲು ಸಂಪೂರ್ಣ ಹೊಸ ತಂತ್ರಜ್ಞಾನದ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಸಾಂಪ್ರದಾಯಿಕ ರೈಲುಗಳಿಗಿಂತ ಹೆಚ್ಚು ಶಕ್ತಿಶಾಲಿ, ಕಡಿಮೆ ಶಬ್ದ ಉಂಟುಮಾಡುವ ಹಾಗೂ ಪರಿಸರ ಸ್ನೇಹಿಯಾಗಿದೆ ಎಂದು ತಿಳಿಸಿದ್ದಾರೆ. ಹೈಡ್ರೋಜನ್ ಫ್ಯುಯೆಲ್ ಸೆಲ್‌ನಲ್ಲಿ ಹೈಡ್ರೋಜನ್ ಮತ್ತು ಆಮ್ಲಜನಕದ ರಾಸಾಯನಿಕ ಕ್ರಿಯೆಯಿಂದ ವಿದ್ಯುತ್ ಉತ್ಪತ್ತಿಯಾಗಿ ರೈಲು ಸಂಚರಿಸುತ್ತದೆ. ಈ ಪ್ರಕ್ರಿಯೆಯಲ್ಲಿ ನೀರು ಮತ್ತು ಜಲವಾಷ್ಪ ಮಾತ್ರ ಹೊರಬರುವುದರಿಂದ ಯಾವುದೇ ಮಾಲಿನ್ಯ ಉಂಟಾಗುವುದಿಲ್ಲ.

ಸಹಾಯಕ ಲೋಕೋ ಪೈಲಟ್ ಗಗನದೀಪ್ ಸಿಂಗ್ ಅವರಿಗೆ ಈ ರೈಲು ನಿರ್ವಹಣೆಗೆ ವಿಶೇಷ ತರಬೇತಿ ನೀಡಲಾಗಿದ್ದು, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸೇರಿದಂತೆ ಗಣ್ಯರಿಗೆ ರೈಲಿನ ತಾಂತ್ರಿಕ ವೈಶಿಷ್ಟ್ಯಗಳ ಕುರಿತು ಮಾಹಿತಿ ನೀಡಿದರು.

ಸುಮಾರು 3,200 ಹಾರ್ಸ್‌ಪವರ್ ಸಾಮರ್ಥ್ಯದ ಈ ರೈಲಿನಲ್ಲಿ ಎಂಟು ಪ್ರಯಾಣಿಕರ ಬೋಗಿಗಳು ಹಾಗೂ ಎರಡು ಪವರ್ ಕಾರುಗಳಿವೆ. ಅಗ್ನಿ ಅವಘಡ ತಡೆಯಲು ಸ್ವಯಂಚಾಲಿತ ಅಗ್ನಿ ನಂದಿಸುವ ವ್ಯವಸ್ಥೆ ಹಾಗೂ ಉಷ್ಣತೆ, ಬೆಂಕಿ ಮತ್ತು ಹೈಡ್ರೋಜನ್ ಅನಿಲ ಸೋರಿಕೆಯನ್ನು ಪತ್ತೆಹಚ್ಚುವ 26 ಸಂವೇದಕಗಳನ್ನು ಅಳವಡಿಸಲಾಗಿದ್ದು, ಸುರಕ್ಷತಾ ದೃಷ್ಟಿಯಿಂದ ಇದು ಅತ್ಯಾಧುನಿಕ ರೈಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande