ಜಮ್ಮು:ಭದ್ರವಾಹದಲ್ಲಿ ಗುಂಡಿನ ದಾಳಿ: ವ್ಯಕ್ತಿ ಸಾವು, ಎಸ್ಒಜಿ ಮೂವರು ಸಿಬ್ಬಂದಿಗೆ ಗಾಯ
ಭದ್ರವಾಹ, 17 ಜುಲೈ (ಹಿ.ಸ.): ಆ್ಯಂಕರ್: ಜಮ್ಮು-ಕಾಶ್ಮೀರದ ಡೋಡಾ ಜಿಲ್ಲೆಯ ಭದ್ರವಾಹ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ವಿಶೇಷ ಕಾರ್ಯಾಚರಣೆ ದಳದ (ಎಸ್‌ಒಜಿ) ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಎತ್ತರದ ಪ್ರದೇಶದಲ್ಲಿ ಅನುಮಾನಾಸ್ಪ
ಜಮ್ಮು:ಭದ್ರವಾಹದಲ್ಲಿ ಗುಂಡಿನ ದಾಳಿ: ವ್ಯಕ್ತಿ ಸಾವು, ಎಸ್ಒಜಿ ಮೂವರು ಸಿಬ್ಬಂದಿಗೆ ಗಾಯ


ಭದ್ರವಾಹ, 17 ಜುಲೈ (ಹಿ.ಸ.):

ಆ್ಯಂಕರ್:

ಜಮ್ಮು-ಕಾಶ್ಮೀರದ ಡೋಡಾ ಜಿಲ್ಲೆಯ ಭದ್ರವಾಹ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ವಿಶೇಷ ಕಾರ್ಯಾಚರಣೆ ದಳದ (ಎಸ್‌ಒಜಿ) ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಎತ್ತರದ ಪ್ರದೇಶದಲ್ಲಿ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ದೊರೆತ ಮಾಹಿತಿಯ ಆಧಾರದ ಮೇಲೆ ಎಸ್‌ಒಜಿ ತಂಡವು ಭದ್ರವಾಹ ಪಟ್ಟಣದಿಂದ ಸುಮಾರು 35 ಕಿ.ಮೀ. ದೂರದ ಜೈ-ಗಾಂಡೋಹ್ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸುತ್ತಿತ್ತು. ಈ ವೇಳೆ ಯುವಕನೊಬ್ಬನನ್ನು ತಡೆದಾಗ ಆತ ಸಿಬ್ಬಂದಿಗಳ ಮೇಲೆ ದಾಳಿ ನಡೆಸಿ ಸೇವಾ ರೈಫಲ್ ಕಸಿದುಕೊಳ್ಳಲು ಯತ್ನಿಸಿದ್ದಾನೆ ಎನ್ನಲಾಗಿದೆ.

ಕೈಕಾಲು ಜಗಳದ ವೇಳೆ ಎಸ್‌ಒಜಿ ಸಿಬ್ಬಂದಿಯೊಬ್ಬರು ಗುಂಡು ಹಾರಿಸಿದ್ದು, ಯುವಕನಿಗೆ ಗುಂಡು ತಗುಲಿದೆ. ಘಟನೆಯಲ್ಲಿ ಮೂವರು ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿವೆ. ಗಾಯಾಳುಗಳನ್ನು ಭದ್ರವಾಹ ಉಪ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಡೋಡಾ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ರವಾನಿಸಲಾಯಿತು.

ಚೀಕಾ ಗ್ರಾಮದ ನಿವಾಸಿ ಆರಿಫ್ ಹುಸೇನ್ (30) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರ್ಮಿಕ ಬೋಧಕರೊಬ್ಬರನ್ನು ವಶಕ್ಕೆ ಪಡೆಯಲಾಗಿದ್ದು, ಅವರ ಪಾತ್ರದ ಕುರಿತು ತನಿಖೆ ಮುಂದುವರಿದಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಭದ್ರವಾಹ ನಗರದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ ಹಾಗೂ ಸ್ಥಳೀಯ ಪೊಲೀಸರ ಹೆಚ್ಚುವರಿ ನಿಯೋಜನೆ ಮಾಡಲಾಗಿದೆ. ಜೈ ಪ್ರದೇಶದಲ್ಲಿ ಸೇನೆ ಶೋಧ ಕಾರ್ಯಾಚರಣೆ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande