ಪುರಿ ಜಗನ್ನಾಥರ ಭವ್ಯ ರಥಯಾತ್ರೆಗೆ ಚಾಲನೆ
ಭುವನೇಶ್ವರ, 16 ಜುಲೈ (ಹಿ.ಸ.): ಆ್ಯಂಕರ್: ವಿಶ್ವ ಪ್ರಸಿದ್ಧ ಶ್ರೀ ಜಗನ್ನಾಥ ರಥಯಾತ್ರೆ–2026ರ ಅಂಗವಾಗಿ ಗುರುವಾರ ಪುರಿಯ ಶ್ರೀ ಜಗನ್ನಾಥ ದೇವಸ್ಥಾನದಲ್ಲಿ ಸಂಪ್ರದಾಯಬದ್ಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ರಥಯಾತ್ರೆಗೆ ಚಾಲನೆ ನೀಡಲಾಯಿತು. ಭಗವಾನ್ ಜಗನ್ನಾಥ, ಭಗವಾನ್ ಬಲಭದ್ರ ಹಾಗೂ ದೇವಿ ಸುಭದ್ರೆಯವರ
ಪುರಿ ಜಗನ್ನಾಥ್ ರಥಯಾತ್ರೆಯಲ್ಲಿ ಭಾಗವಹಿಸಿದ ಭಕ್ತರು


ಭುವನೇಶ್ವರ, 16 ಜುಲೈ (ಹಿ.ಸ.):

ಆ್ಯಂಕರ್:

ವಿಶ್ವ ಪ್ರಸಿದ್ಧ ಶ್ರೀ ಜಗನ್ನಾಥ ರಥಯಾತ್ರೆ–2026ರ ಅಂಗವಾಗಿ ಗುರುವಾರ ಪುರಿಯ ಶ್ರೀ ಜಗನ್ನಾಥ ದೇವಸ್ಥಾನದಲ್ಲಿ ಸಂಪ್ರದಾಯಬದ್ಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ರಥಯಾತ್ರೆಗೆ ಚಾಲನೆ ನೀಡಲಾಯಿತು. ಭಗವಾನ್ ಜಗನ್ನಾಥ, ಭಗವಾನ್ ಬಲಭದ್ರ ಹಾಗೂ ದೇವಿ ಸುಭದ್ರೆಯವರು ಗುಂಡಿಚಾ ದೇವಸ್ಥಾನಕ್ಕೆ ತೆರಳುವ ಈ ಪವಿತ್ರ ಯಾತ್ರೆಯನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಪುರಿಗೆ ಆಗಮಿಸಿದ್ದಾರೆ.

ಬೆಳಿಗ್ಗೆ ಭೋಗ ಮಂಡಪದಲ್ಲಿ ಧೂಪ ಸಮರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳು ನೆರವೇರಿದವು. ಬಳಿಕ ದೇವರ ಮೆರವಣಿಗೆ ಹಾಗೂ ರಥಾರೋಹಣಕ್ಕೆ ಸಂಬಂಧಿಸಿದ ಪ್ರಮುಖ ವಿಧಿವಿಧಾನಗಳನ್ನು ನಡೆಸಲಾಯಿತು.

ರಥಯಾತ್ರೆಯ ಪ್ರಮುಖ ಆಕರ್ಷಣೆಯಾದ 'ಪಹಂಡಿ' ಆಚರಣೆಯಲ್ಲಿ ಭಗವಾನ್ ಜಗನ್ನಾಥ, ಭಗವಾನ್ ಬಲಭದ್ರ ಹಾಗೂ ದೇವಿ ಸುಭದ್ರೆಯವರನ್ನು ಗರ್ಭಗುಡಿಯಿಂದ ವೈಭವದ ಮೆರವಣಿಗೆಯ ಮೂಲಕ ಹೊರತಂದು, ಭಕ್ತರ ಜಯಘೋಷ ಹಾಗೂ ಸಾಂಪ್ರದಾಯಿಕ ವಾದ್ಯಗಳ ನಡುವೆ ತಮ್ಮ ತಮ್ಮ ರಥಗಳಲ್ಲಿ ಪ್ರತಿಷ್ಠಾಪಿಸಲಾಯಿತು. ಭಗವಾನ್ ಜಗನ್ನಾಥರು ನಂದಿಘೋಷ, ಭಗವಾನ್ ಬಲಭದ್ರರು ತಾಳಧ್ವಜ ಹಾಗೂ ದೇವಿ ಸುಭದ್ರೆಯವರು ದರ್ಪದಲನ ರಥದಲ್ಲಿ ವಿರಾಜಮಾನರಾದರು.

ಪಹಂಡಿ ಆಚರಣೆಯ ಬಳಿಕ ಗಜಪತಿ ಮಹಾರಾಜರು ಸಂಪ್ರದಾಯಬದ್ಧ 'ಛೇರಾ ಪಹಂರಾ' ವಿಧಿಯನ್ನು ನೆರವೇರಿಸಲಿದ್ದಾರೆ. ಈ ವೇಳೆ ಅವರು ಚಿನ್ನದ ಪೊರಕೆಯಿಂದ ರಥಗಳನ್ನು ಸ್ವಚ್ಛಗೊಳಿಸುವ ಮೂಲಕ ದೇವರ ಮುಂದೆ ವಿನಮ್ರತೆ ಮತ್ತು ಸಮರ್ಪಣೆಯ ಸಂಕೇತವನ್ನು ಪ್ರದರ್ಶಿಸುತ್ತಾರೆ.

ಎಲ್ಲಾ ಧಾರ್ಮಿಕ ವಿಧಿವಿಧಾನಗಳು ಪೂರ್ಣಗೊಂಡ ಬಳಿಕ ಮೂರು ಭವ್ಯ ರಥಗಳು ಶ್ರೀಮಂದಿರದಿಂದ ಗುಂಡಿಚಾ ದೇವಸ್ಥಾನದತ್ತ ಪ್ರಯಾಣ ಆರಂಭಿಸಲಿವೆ. ಶತಮಾನಗಳ ಇತಿಹಾಸ ಹೊಂದಿರುವ ಈ ಆಧ್ಯಾತ್ಮಿಕ ಮಹೋತ್ಸವವನ್ನು ವೀಕ್ಷಿಸಲು ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಪುರಿಗೆ ಆಗಮಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande