ಬಳ್ಳಾರಿ: ಮುಂಗಾರು ಬೆಳೆ ವಿಮೆ ನೋಂದಣಿ
ಬಳ್ಳಾರಿ, 16 ಜುಲೈ (ಹಿ.ಸ.) ಆ್ಯಂಕರ್ : ಪ್ರಸ್ತಕ ಸಾಲಿನ ಮುಂಗಾರು ಹಂಗಾಮಿನ ‘ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ'' ಯೋಜನೆಯಡಿ ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಜಿಲ್ಲೆಯ ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕರು ಕೋರಿದ್ದಾರೆ. ಬೆಳೆ ಸಾಲ
ಬಳ್ಳಾರಿ: ಮುಂಗಾರು ಬೆಳೆ ವಿಮೆ ನೋಂದಣಿ


ಬಳ್ಳಾರಿ, 16 ಜುಲೈ (ಹಿ.ಸ.)

ಆ್ಯಂಕರ್ : ಪ್ರಸ್ತಕ ಸಾಲಿನ ಮುಂಗಾರು ಹಂಗಾಮಿನ ‘ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ' ಯೋಜನೆಯಡಿ ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಜಿಲ್ಲೆಯ ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕರು ಕೋರಿದ್ದಾರೆ.

ಬೆಳೆ ಸಾಲ ಪಡೆದ ಹಾಗೂ ಪಡೆಯದ ರೈತರು ತಮ್ಮ ಬೆಳೆಗಳಿಗೆ ಬ್ಯಾಂಕುಗಳು ಅಥವಾ ಸಾರ್ವಜನಿಕ ಸೇವಾ ಕೇಂದ್ರಗಳ ಮೂಲಕ ವಿಮೆ ಮಾಡಿಸಬಹುದಾಗಿದೆ.

*ವಿಮೆಗೊಳಪಡುವ ಪ್ರಮುಖ ಬೆಳೆಗಳು:*

ಗ್ರಾಮ ಪಂಚಾಯಿತಿ ಮಟ್ಟದ ಬೆಳೆಗಳು: ಭತ್ತ (ನೀರಾವರಿ), ಮುಸುಕಿನ ಜೋಳ (ನೀರಾವರಿ/ಮಳೆಯಾಶ್ರಿತ) ಮತ್ತು ನೆಲಗಡಲೆ (ಮಳೆಯಾಶ್ರಿತ).

ಹೋಬಳಿ ಮಟ್ಟದ ಬೆಳೆಗಳು: ಜೋಳ, ರಾಗಿ, ಸಜ್ಜೆ, ಸೂರ್ಯಕಾಂತಿ, ಹತ್ತಿ, ನೆಲಗಡಲೆ, ಈರುಳ್ಳಿ (ನೀರಾವರಿ/ಮಳೆಯಾಶ್ರಿತ), ನವಣೆ, ಹೆಸರು, ಉರುಳಿ (ಮಳೆಯಾಶ್ರಿತ), ತೊಗರಿ (ನೀರಾವರಿ/ಮಳೆಯಾಶ್ರಿತ), ಟೊಮ್ಯಾಟೊ ಹಾಗೂ ಕೆಂಪು ಮೆಣಸಿನಕಾಯಿ (ನೀರಾವರಿ).

*ಬೆಳೆ ವಿಮೆ ಪಾವತಿಸಲು ಕೊನೆಯ ದಿನಾಂಕಗಳು:*

ಮುಸುಕಿನ ಜೋಳ (ನೀ/ಮ), ಜೋಳ (ನೀ/ಮ), ಸೂರ್ಯಕಾಂತಿ (ನೀ/ಮ), ತೊಗರಿ (ನೀರಾವರಿ), ಹತ್ತಿ (ನೀ/ಮ), ಈರುಳ್ಳಿ (ನೀ/ಮ): ಜುಲೈ 31.

*ಸಾಲ ಪಡೆಯದ ರೈತರಿಗೆ ಸ್ವಯಂ ದೃಢೀಕರಣ ಕಡ್ಡಾಯ:*

ಬೆಳೆ ಸಾಲ ಪಡೆಯದ ರೈತರು ತಾವು ಯಾವುದೇ ಬ್ಯಾಂಕ್ನಲ್ಲಿ ಬೆಳೆ ಸಾಲ ಪಡೆದಿಲ್ಲ ಎಂಬುದರ ಕುರಿತು ‘ಸ್ವಯಂ ದೃಢೀಕರಣ ಪತ್ರ' ನೀಡುವುದನ್ನು ಈ ವರ್ಷದಿಂದ ಕಡ್ಡಾಯಗೊಳಿಸಲಾಗಿದೆ. ವಿಮೆ ನೋಂದಣಿ ಸಂದರ್ಭದಲ್ಲಿ ರೈತರು ಈ ಪತ್ರವನ್ನು ಸಲ್ಲಿಸಬೇಕಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಸರ್ಕಾರದ ಅಧಿಕೃತ ಸಂರಕ್ಷಣೆ ಪೋರ್ಟಲ್ (https://www.samrakshane.karnataka.gov.in) ಲಿಂಕ್ ಮೂಲಕ ಮಾಹಿತಿ ಪಡೆಯಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande