ಕನಿಷ್ಠ ಪಿಂಚಣಿ ರೂ. 7,500, ಉಚಿತ ವೈದ್ಯಕೀಯ ಆರೈಕೆಗೆ ಬೇಡಿಕೆ
ಬಳ್ಳಾರಿ, 16 ಜುಲೈ (ಹಿ.ಸ.) ಆ್ಯಂಕರ್ : ಇಪಿಎಸ್-95 ಪಿಂಚಣಿದಾರರ ಕನಿಷ್ಠ ಮಾಸಿಕ ಪಿಂಚಣಿಯನ್ನು ರೂ. 7,500ಕ್ಕೆ ಹೆಚ್ಚಿಸಬೇಕು ಮತ್ತು ಅವರಿಗೆ ದಿನ ಭತ್ಯೆ (ಡಿಎ) ಮತ್ತು ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ನೀಡಲು ಆಗ್ರಹಿಸಿ ಇಪಿಎಸ್-95 ರಾಷ್ಟ್ರೀಯ ಆಂದೋಲನ ಸಮಿತಿಯ ಜಿಲ್ಲಾ ಘಟಕವು ಜಿಲ್ಲಾಧಿಕಾರಿಗಳ
ಕನಿಷ್ಠ ಪಿಂಚಣಿ ರೂ. 7,500, ಉಚಿತ ವೈದ್ಯಕೀಯ ಆರೈಕೆಗೆ ಬೇಡಿಕೆ


ಬಳ್ಳಾರಿ, 16 ಜುಲೈ (ಹಿ.ಸ.)

ಆ್ಯಂಕರ್ : ಇಪಿಎಸ್-95 ಪಿಂಚಣಿದಾರರ ಕನಿಷ್ಠ ಮಾಸಿಕ ಪಿಂಚಣಿಯನ್ನು ರೂ. 7,500ಕ್ಕೆ ಹೆಚ್ಚಿಸಬೇಕು ಮತ್ತು ಅವರಿಗೆ ದಿನ ಭತ್ಯೆ (ಡಿಎ) ಮತ್ತು ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ನೀಡಲು ಆಗ್ರಹಿಸಿ ಇಪಿಎಸ್-95 ರಾಷ್ಟ್ರೀಯ ಆಂದೋಲನ ಸಮಿತಿಯ ಜಿಲ್ಲಾ ಘಟಕವು ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಗುರುವಾರ ಪ್ರತಿಭಟನೆ ನಡೆಸಿದೆ.

ಇಪಿಎಸ್-95 ರಾಷ್ಟ್ರೀಯ ಆಂದೋಲನ ಸಮಿತಿಯ ರಾಷ್ಟ್ರೀಯ ಸಂಚಾಲಕ ಕಮಾಂಡರ್ ಅಶೋಕ್ ರಾವತ್ (ನಿವೃತ್ತ) ಅವರು, ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ, ದೇಶಾದ್ಯಂತ ಲಕ್ಷಾಂತರ ಇಪಿಎಸ್-95 ಪಿಂಚಣಿದಾರರು ಪ್ರಸ್ತುತ ತಿಂಗಳಿಗೆ ಸರಾಸರಿ ರೂ. 1,170 ಪಿಂಚಣಿ ಪಡೆಯುತ್ತಿದ್ದಾರೆ. ಹೆಚ್ಚುತ್ತಿರುವ ಬೆಲೆಗಳಿಗೆ ಪೂರಕವಾಗಿ ಪಿಂಚಣಿ ಮೊತ್ತವನ್ನು ಹೆಚ್ಚಳ ಮಾಡಬೇಕು ಎಂದು ಅವರು ಕೋರಿದ್ದಾರೆ.

ಇಪಿಎಸ್-95 ಪಿಂಚಣಿದಾರರ ಕನಿಷ್ಠ ಪಿಂಚಣಿಯನ್ನು ರೂ. 7,500 ಮತ್ತು ಡಿಎ ಜಾರಿಗೆ ತರಬೇಕು. ನಿವೃತ್ತರಿಗೆ ನಿಜವಾದ ವೇತನದ ಮೇಲೆ ಹೆಚ್ಚಿನ ಪಿಂಚಣಿ ಆಯ್ಕೆಯನ್ನು ನೀಡಬೇಕು. ಪಿಂಚಣಿದಾರರು ಮತ್ತು ಅವರ ಸಂಗಾತಿಗಳಿಗೆ ಉಚಿತ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕು ಮತ್ತು ಇಪಿಎಸ್-95 ವ್ಯಾಪ್ತಿಗೆ ಬಾರದ ನಿವೃತ್ತ ಉದ್ಯೋಗಿಗಳಿಗೆ ಮಾಸಿಕ ರೂ. 5,000 ಪಿಂಚಣಿ ನೀಡಬೇಕು ಎಂದು ಅವರು ಆಗ್ರಹಿಸಿದರು.

ಎಚ್.ಎ. ಆದಿಮೂರ್ತಿ, ಟಿ. ಚೆನ್ನಪ್ಪ, ಅವಲ್ದಾರ್, ಕೊಪ್ಪಳ ಎರ್ರಿಸ್ವಾಮಿ, ಕೊಟ್ಟೂರು ಅನಿಲ್ ಇನಾಂದಾರ್, ಚೆನ್ನಬಸಪ್ಪ ಮತ್ತು ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande