
ಕೊಪ್ಪಳ, 16 ಜುಲೈ (ಹಿ.ಸ.)
ಆ್ಯಂಕರ್:
ಕೊಪ್ಪಳ ತಾಲೂಕಿನ ದದೇಗಲ್ನಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಡಿ.ಟಿ.ಡಿ.ಎಮ್, ಡಿ.ಎಮ್.ಸಿ.ಹೆಚ್ & ಇ&ಸಿ ವಿಭಾಗದಲ್ಲಿ ಖಾಲಿ ಇರುವ ತಾತ್ಕಾಲಿಕ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಜಿಟಿಟಿಸಿ.ಯಲ್ಲಿ ಬಿ.ಇ ಎಲೇಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ಅಥವಾ ಎಂ.ಟೆಕ್ ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಎರಡು ಹುದ್ದೆಗಳು ಹಾಗೂ ಬಿ.ಇ ಮೆಕಾನಿಕಲ್ ಇಂಜಿನಿಯರಿಂಗ್ ಅಥವಾ ಎಂ.ಟೆಕ್ ಮತ್ತು ಬಿ.ಇ ಎಲೇಕ್ಟ್ರಿಕಲ್ & ಎಲೇಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿದ್ಯಾರ್ಹತೆಗೆ ಸಂಬಂಧಿಸಿದಂತೆ ತಲಾ ಒಂದು ಸೇರಿ ಒಟ್ಟು ಮೂರು ತಾತ್ಕಾಲಿಕ ಅತಿಥಿ ಉಪನ್ಯಾಸಕರ ಹುದ್ದೆ ಖಾಲಿ ಇದ್ದು, ಅರ್ಹ ವಿದ್ಯಾರ್ಹತೆ ಹೊಂದಿದ ಆಸಕ್ತ ಆಕಾಂಕ್ಷಿಗಳು ಜುಲೈ 24ರ ಒಳಗಾಗಿ ಜಿಟಿಟಿಸಿ ಕೊಪ್ಪಳ ಕಛೇರಿಗೆ ಅರ್ಜಿ ಸಲ್ಲಿಸಬಹುದು ಅಥವಾ ಇ-ಮೇಲ್ ಐಡಿ gttckoppal@gmail.com ಗೆ ನಿಮ್ಮ ಸ್ವ-ವಿವರವುಳ್ಳ ಬಯೋಡಟಾವನ್ನು ಕಳುಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಗದಗ ರೋಡ್-ದದೇಗಲ್, ಕೊಪ್ಪಳ, ಈ ಕಾರ್ಯಾಲಯಕ್ಕೆ ಅಥವಾ ಜಿಟಿಟಿಸಿ ಪ್ರಾಂಶುಪಾಲರಾದ ಮೌನೇಶ್ ಮೊ.ಸಂ: 7507094445 ಗೆ ಸಂಪರ್ಕಿಸಬಹುದು ಎಂದು ಕೊಪ್ಪಳ ಜಿಟಿಟಿಸಿ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್