ರೋಹಿಂಗ್ಯಾ-ಬಾಂಗ್ಲಾದೇಶಿ ಅಕ್ರಮ ನುಸುಳುವಿಕೆ ಜಾಲದ ಮೇಲೆ ಇಡಿ ದಾಳಿ
ನವದೆಹಲಿ, 16 ಜುಲೈ (ಹಿ.ಸ.): ಆ್ಯಂಕರ್: ರೋಹಿಂಗ್ಯಾ ಹಾಗೂ ಬಾಂಗ್ಲಾದೇಶಿ ನಾಗರಿಕರ ಅಕ್ರಮ ನುಸುಳುವಿಕೆ ಜಾಲ ಮತ್ತು ವಿದೇಶಿ ನಿಧಿ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ದೆಹಲಿ, ಉತ್ತರ ಪ್ರದೇಶ, ಹರಿಯಾಣ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ
ಇಡಿ ಹಂಚಿಕೊಂಡಿರುವ ಚಿತ್ರ


ನವದೆಹಲಿ, 16 ಜುಲೈ (ಹಿ.ಸ.):

ಆ್ಯಂಕರ್:

ರೋಹಿಂಗ್ಯಾ ಹಾಗೂ ಬಾಂಗ್ಲಾದೇಶಿ ನಾಗರಿಕರ ಅಕ್ರಮ ನುಸುಳುವಿಕೆ ಜಾಲ ಮತ್ತು ವಿದೇಶಿ ನಿಧಿ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ದೆಹಲಿ, ಉತ್ತರ ಪ್ರದೇಶ, ಹರಿಯಾಣ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ದಾಳಿ ನಡೆಸಿದೆ.

ಪಶ್ಚಿಮ ಬಂಗಾಳದ ಹರೋರಾ ಅಲ್-ಜಮಿಯತುಲ್ ಇಸ್ಲಾಮಿಯಾ ದಾರುಲ್ ಉಲೂಂನಲ್ಲಿ ₹40 ಲಕ್ಷ ನಗದು ಹಾಗೂ 180 ಗ್ರಾಂ ತೂಕದ ಚಿನ್ನದ ನಾಣ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಣ ಮತ್ತು ಚಿನ್ನದ ಮೂಲದ ಬಗ್ಗೆ ಸಮರ್ಪಕ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಅವುಗಳನ್ನು ವಶಕ್ಕೆ ಪಡೆಯಲಾಗಿದೆ.

ದಾಳಿಯ ವೇಳೆ ಡಿಜಿಟಲ್ ಸಾಧನಗಳು, ದಾಖಲೆಗಳು ಹಾಗೂ ಇತರೆ ಮಹತ್ವದ ಸಾಕ್ಷ್ಯಗಳನ್ನು ಜಪ್ತಿ ಮಾಡಲಾಗಿದ್ದು, ತನಿಖೆ ಮುಂದುವರಿದಿದೆ. ಈ ಜಾಲವು ಅಕ್ರಮವಾಗಿ ಗಡಿ ದಾಟಿಸಿ ನುಸುಳಿಕೆ ನಡೆಸುವುದು, ನಕಲಿ ಆಧಾರ್, ಪ್ಯಾನ್ ಕಾರ್ಡ್ ಮತ್ತು ಪಾಸ್‌ಪೋರ್ಟ್‌ಗಳನ್ನು ಸೃಷ್ಟಿಸುವುದು ಹಾಗೂ ವಿದೇಶಿ ನಿಧಿಯ ನೆರವಿನಿಂದ ಅಕ್ರಮ ವಲಸಿಗರನ್ನು ಭಾರತದಲ್ಲಿ ನೆಲೆಸಿಸಲು ನೆರವಾಗುತ್ತಿತ್ತು ಎಂದು ಇಡಿ ತಿಳಿಸಿದೆ.

ಪ್ರಾಥಮಿಕ ತನಿಖೆಯಲ್ಲಿ ಕೆಲವು ನೋಂದಾಯಿತ ಸಾರ್ವಜನಿಕ ಧಾರ್ಮಿಕ ಟ್ರಸ್ಟ್‌ಗಳಿಗೆ ವಿದೇಶಗಳಿಂದ ಬಂದ ಹಣವನ್ನು ಸಣ್ಣ ಕಂತುಗಳಲ್ಲಿ ಶಂಕಿತರಿಗೆ ವರ್ಗಾಯಿಸಿ, ಉದ್ಯೋಗ, ಇ-ರಿಕ್ಷಾ ಖರೀದಿ ಮತ್ತು ಇತರೆ ನೆರವಿಗಾಗಿ ಬಳಸಲಾಗುತ್ತಿತ್ತು ಎಂಬುದು ಬೆಳಕಿಗೆ ಬಂದಿದೆ.

ಉತ್ತರ 24 ಪರಗಣ, ದಕ್ಷಿಣ ದೆಹಲಿಯ ಬಟ್ಲಾ ಹೌಸ್, ಫರಿದಾಬಾದ್, ದೇವಬಂದ್ ಸೇರಿದಂತೆ ಹಲವು ಪ್ರದೇಶಗಳಲ್ಲಿನ ಸಂಸ್ಥೆಗಳು ಮತ್ತು ವ್ಯಕ್ತಿಗಳ ನಿವಾಸಗಳಲ್ಲಿ ಶೋಧ ಕಾರ್ಯ ನಡೆಸಲಾಗಿದ್ದು, ವಶಪಡಿಸಿಕೊಂಡ ದಾಖಲೆಗಳು ಮತ್ತು ಡಿಜಿಟಲ್ ಸಾಕ್ಷ್ಯಗಳ ಪರಿಶೀಲನೆ ಮುಂದುವರಿದಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande