
ನವದೆಹಲಿ, 16 ಜುಲೈ (ಹಿ.ಸ.):
ಆ್ಯಂಕರ್:
ಭಾರತೀಯ ಮಜ್ದೂರ್ ಸಂಘ (ಬಿಎಂಎಸ್)ಕ್ಕೆ ಸಂಬಂಧಿಸಿದ ಆರ್ಮ್ಡ್ ಫೋರ್ಸಸ್ ಹೆಡ್‌ಕ್ವಾರ್ಟರ್ಸ್ (ಎಎಫ್‌ಎಚ್‌ಕ್ಯೂ) ಕ್ಯಾಡರ್‌ನ 'ಬಿ' ಮತ್ತು 'ಸಿ' ಗುಂಪಿನ ಮಾನ್ಯತೆ ಪಡೆದ ಸಿಬ್ಬಂದಿ ಸಂಘಗಳು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜುಲೈ 29ರಂದು ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ಘೋಷಿಸಿವೆ.
ಬಿಎಂಎಸ್ ಪ್ರಕಟಣೆ ಪ್ರಕಾರ, ಅಂದು ಮಧ್ಯಾಹ್ನ 1 ಗಂಟೆಗೆ ದೆಹಲಿಯ ಆಫ್ರಿಕಾ ಅವೆನ್ಯೂದಲ್ಲಿರುವ ಡಿಫೆನ್ಸ್ ಆಫೀಸ್ ಕಾಂಪ್ಲೆಕ್ಸ್ ಎದುರು ಜಂಟಿಯಾಗಿ ಪ್ರತಿಭಟನೆ ನಡೆಯಲಿದೆ. ರಕ್ಷಣಾ ಸಚಿವಾಲಯದಲ್ಲಿ ನಡೆಯುತ್ತಿರುವ ಕ್ಯಾಡರ್ ಮರುಪರಿಶೀಲನೆಯಲ್ಲಿ ಕೆಳಹಂತದ ಸಿಬ್ಬಂದಿಯ ಸಮಸ್ಯೆಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಸಂಘಗಳು ಆರೋಪಿಸಿವೆ.
ಸಂಘಗಳ ಪ್ರಮುಖ ಬೇಡಿಕೆಗಳಲ್ಲಿ ಸೆಕ್ಷನ್ ಆಫೀಸರ್ ಹುದ್ದೆಯ ನೇರ ನೇಮಕಾತಿ ಕೋಟಾವನ್ನು ಶೇ.50ರಿಂದ ಶೇ.10ಕ್ಕೆ ಇಳಿಸುವುದು, ಎಎಸ್‌ಒಯಿಂದ ಎಸ್‌ಒ ಹುದ್ದೆಗೆ ಬಡ್ತಿ ಪಡೆಯಲು ಬೇಕಾಗುತ್ತಿರುವ 17–18 ವರ್ಷಗಳ ವಿಳಂಬವನ್ನು ಕಡಿಮೆ ಮಾಡುವುದು ಹಾಗೂ ಕಳೆದ 15 ವರ್ಷಗಳಿಂದ ಬಾಕಿ ಇರುವ ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) ಸಿಬ್ಬಂದಿಯ ಮೊದಲ ಬಡ್ತಿಯನ್ನು ತಕ್ಷಣ ಜಾರಿಗೆ ತರುವುದು ಸೇರಿವೆ.
ಬಿಎಂಎಸ್ ರಾಷ್ಟ್ರೀಯ ಮಹಾಮಂತ್ರಿ ಡಾ. ದೀಪೇಂದ್ರ ಚಾಹರ್, ಹಲವು ಬಾರಿ ಮನವಿ ಸಲ್ಲಿಸಿದ್ದರೂ ಕೆಳಹಂತದ ಸಿಬ್ಬಂದಿಯ ಸಮಸ್ಯೆಗಳು ಪರಿಷ್ಕಾರವಾಗಿಲ್ಲ. ಪ್ರತಿಭಟನೆ ಸಂಪೂರ್ಣ ಶಾಂತಿಯುತವಾಗಿದ್ದು, ಸಿಬ್ಬಂದಿಗೆ ನ್ಯಾಯ ದೊರಕಿಸುವ ಉದ್ದೇಶದಿಂದಲೇ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಸರ್ಕಾರಿ ಕೆಲಸಗಳಿಗೆ ಯಾವುದೇ ಅಡಚಣೆ ಉಂಟಾಗದಂತೆ ಪ್ರತಿಭಟನೆ ನಡೆಸುವುದಾಗಿ ಸಿಬ್ಬಂದಿ ಸಂಘಗಳು ಆಡಳಿತಕ್ಕೆ ಭರವಸೆ ನೀಡಿವೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.