ಕುಕನೂರು ಹೋಬಳಿಯಲ್ಲಿ ಕೃಷಿ ಕ್ಷೇತ್ರ ಪರಿವೀಕ್ಷಣೆ
ಕುಕನೂರು, 16 ಜುಲೈ (ಹಿ.ಸ.): ಆ್ಯಂಕರ್: ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಹಾಗೂ ಕೃಷಿ ಇಲಾಖೆಯಿಂದ ಕುಕನೂರು ಹೋಬಳಿಯಲ್ಲಿ ಬೆಳೆ ಪರಿವೀಕ್ಷಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಳೆ ಇಲ್ಲದ ಇಂತಹ ಕಠಿಣ ಸಂದರ್ಭದಲ್ಲಿ ಬೆಳೆಗಳನ್ನು ಉಳಿಸಿಕೊಳ್ಳಲು ಅಳವಡಿಸಬೇಕಾದ ತಾಂತ್ರಿಕತೆಗಳು ಮ
ಕುಕನೂರು ಹೋಬಳಿಯಲ್ಲಿ ಕೃಷಿ ಕ್ಷೇತ್ರ ಪರಿವೀಕ್ಷಣೆ


ಕುಕನೂರು ಹೋಬಳಿಯಲ್ಲಿ ಕೃಷಿ ಕ್ಷೇತ್ರ ಪರಿವೀಕ್ಷಣೆ


ಕುಕನೂರು, 16 ಜುಲೈ (ಹಿ.ಸ.):

ಆ್ಯಂಕರ್: ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಹಾಗೂ ಕೃಷಿ ಇಲಾಖೆಯಿಂದ ಕುಕನೂರು ಹೋಬಳಿಯಲ್ಲಿ ಬೆಳೆ ಪರಿವೀಕ್ಷಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮಳೆ ಇಲ್ಲದ ಇಂತಹ ಕಠಿಣ ಸಂದರ್ಭದಲ್ಲಿ ಬೆಳೆಗಳನ್ನು ಉಳಿಸಿಕೊಳ್ಳಲು ಅಳವಡಿಸಬೇಕಾದ ತಾಂತ್ರಿಕತೆಗಳು ಮತ್ತು ಪರಿಸ್ಥಿತಿಗೆ ಸೂಕ್ತವಾದ ಪರ್ಯಾಯ ಬೆಳೆಗಳನ್ನು ಬೆಳೆಯುವ ಕುರಿತು ರೈತರಿಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಲಾಯಿತು.

ಇದೇ ಸಂದರ್ಭದಲ್ಲಿ ಉಪಕೃಷಿ ನಿರ್ದೇಶಕರಾದ ಸಿದ್ದೇಶ್ವರ ಅವರು, ರೈತರಿಗೆ ಬೆಳೆ ವಿಮೆಯ ಮಹತ್ವ ಹಾಗೂ ಅದರ ಸೌಲಭ್ಯಗಳನ್ನು ಪಡೆದುಕೊಳ್ಳುವ ಕುರಿತು ಜಾಗೃತಿ ಮೂಡಿಸಿದರು. ಅಲ್ಲದೆ, ಎರೆ ಭೂಮಿಯಲ್ಲಿ (ಕಪ್ಪು ಮಣ್ಣು) ಉಸುಕು (ಮರಳು) ಬಳಕೆಯ ಪ್ರಯೋಜನಗಳು ಮತ್ತು ಅದರಿಂದಾಗುವ ಅಪಾಯಗಳ ಕುರಿತು ರೈತರೊಂದಿಗೆ ಸುದೀರ್ಘವಾಗಿ ಚರ್ಚಿಸಿದರು.

ಕಾರ್ಯಕ್ರಮದಲ್ಲಿ ರೈತರಾದ ಶರಣಪ್ಪ ಮೇಟಿ, ಶೇಖಪ್ಪ ಅಸೂತಿ, ಆತ್ಮಾ ಯೋಜನೆಯ ಜಿ.ಡಿ. ಕೊಳಜಿ ಹಾಗೂ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥರಾದ ಡಾ. ಬದರಿ ಪ್ರಸಾದ್ ಅವರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande