


ಬಳ್ಳಾರಿ, 15 ಜುಲೈ (ಹಿ.ಸ.)
ಆ್ಯಂಕರ್ : ಕರ್ನಾಟಕ ಮೈನಿಂಗ್ ಎನ್ವಿರಾನ್ಮೆಂಟ್ ರೆಸ್ಟೊರೇಷನ್ ಕಾಪೆರ್Çರೇಶನ್ (ಕೆಎಂಇಆರ್ಸಿ) ನಿಧಿಯಿಂದ ಕುರೇಕುಪ್ಪದಲ್ಲಿ 275 ಕೋಟಿ ರೂಪಾಯಿ ವೆಚ್ಚದಲ್ಲಿ `ಸ್ಟೀಲ್ ಪಾರ್ಕ್' ಪ್ರಾರಂಭಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್ ಅವರು ತಿಳಿಸಿದ್ದಾರೆ.
ಹಾನಗಲ್ಲು ಶ್ರೀಕುಮಾರೇಶ್ವರ ಪಾಲಿಟೆಕ್ನಿಕ್ ಮತ್ತು ಬಳ್ಳಾರಿ ಉದ್ಯಮ ಫೌಂಡೇಶನ್ ಜಂಟಿಯಾಗಿ ಆರ್ವೈಎಂಸಿ ಕಾಲೇಜಿನ ಸಭಾಂಗಣದಲ್ಲಿ
ಏರ್ಪಡಿಸಿದ್ದ `ವಿಶ್ವ ಯುವ ಕೌಶಲ್ಯ ದಿನಾಚರಣೆ'ಯನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ದೇಶದಲ್ಲಿ ತಾಂತ್ರಿಕ ಶಿಕ್ಷಣ ಉತ್ತಮವಾಗಿದೆ. ತಾಂತ್ರಿಕ ಶಿಕ್ಷಣವನ್ನು ಯಾರುಬೇಕಾದರೂ ಕಲಿಸಲು ಸೂಕ್ತವಾದ ವಾತಾವರಣವಿದೆ.
ಆಧುನೀಕತೆಗೆ ಪೂಕರವಾಗಿ ಶಿಕ್ಷಣ ವ್ಯವಸ್ಥೆ, ಶಿಕ್ಷಣದ ಪಠ್ಯಕ್ರಮ ಮತ್ತು ಬೋಧನೆಯಲ್ಲೂ ಸಾಕಷ್ಟು ಬದಲಾವಣೆ ಆಗುತ್ತಿವೆ. ಪ್ರತಿ ಕ್ಷೇತ್ರದಲ್ಲೂ ಕೌಶಲ್ಯಕ್ಕೆ ಆದ್ಯತೆ ನೀಡಲಾಘುತ್ತಿದೆ. ಯುವಶಕ್ತಿಯು ಬದಲಾವಣೆಗಳನ್ನು ಸ್ವೀಕರಿಸಿ, ಕೌಶಲ್ಯಗಳನ್ನು ಕಲಿಯಬೇಕು ಎಂದರು.
ದೇಶದಲ್ಲಿ ಕೌಶಲ್ಯಾಭಿವೃದ್ಧಿಗಾಗಿ ಕೇಂದ್ರ ಸರ್ಕಾರ, ಕರ್ನಾಟಕ ರಾಜ್ಯದಲ್ಲಿ ಕೌಶಲ್ಯಾಭಿವೃದ್ಧಿಗಾಗಿ ರಾಜ್ಯ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಈ ಯೋಜನೆಗಳಲ್ಲಿ ಯುವಶಕ್ತಿಯು ಪಾಲ್ಗೊಂಡು, ಉದ್ಯೋಗ ಸೃಷ್ಟಿ ಮಾಡುವಲ್ಲಿ ಪ್ರಯತ್ನಿಸಬೇಕು. ಅಲ್ಲದೇ, ದೇಶಕ್ಕಾಗಿ ಕೊಡುಗೆ ನೀಡಬೇಕು ಎಂದರು.
ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆಯು ಶಕ್ತಿಯೂ ಹೌದು, ದೌರ್ಬಲ್ಯವೂ ಹೌದು. ಇಲ್ಲಿ ಬೃಹತ್ ಕೈಗಾರಿಕೆಗಳಿವೆ, ಪ್ರಕೃತಿ ಸೌಂದರ್ಯವಿದೆ.
ಬ್ರಿಟೀಷರು ಆಳಿರುವ ಸ್ಥಳವಾದರೂ ಇಲ್ಲಿ ಶೈಕ್ಷಣಿಕ ಪ್ರಗತಿ ಸಾಧನೆ ಆಗಿಲ್ಲ. ಈ ಭಾಗದಲ್ಲಿ ಅನೇಕ ರೀತಿಯ ಅಸಂಬದ್ಧ ಆಚರಣೆಗಳು ಜಾರಿಯಲ್ಲಿವೆ. ಯುವ ಸಮೂಹವು ಉತ್ತಮ ಶಿಕ್ಷಣ ಪಡೆದು, ಕೌಶಲ್ಯವನ್ನು ಕಲಿತು ಅಭಿವೃದ್ಧಿಗೆ ಗಮನ ನೀಡಬೇಕು ಎಂದರು.
ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ `ಬಯೋ ಇನ್ನೋವೇಷನ್' ಸೆಂಟರ್ ಪ್ರಾರಂಭವಾಗಲಿದೆ. ಈ ಸೆಂಟರ್ನಲ್ಲಿ ಜೈವಿಕ ವಿಜ್ಞಾನ , ಆರೋಗ್ಯ, ಕೃಷಿ, ಔಷಧ ಮತ್ತು ಪರಿಸರ ಕ್ಷೇತ್ರಗಳಲ್ಲಿಯ ಆವಿಷ್ಕಾರಗಳು ಹಾಗೂ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು, ಸಂಶೋಧನೆಗೆ ಉತ್ತೇಜನ ನೀಡಲು ಮತ್ತು ಹೊಸ ಉದ್ಯಮಗಳನ್ನು ಬೆಳೆಸಲು ತರಬೇತಿ ನೀಡಲಾಗುತ್ತದೆ ಎಂಧರು.
ಬಳ್ಳಾರಿ ಉದ್ಯಮ ಫೌಂಡೇಶನ್ನ ಅಧ್ಯಕ್ಷರು, ಹಿರಿಯ ಲೆಕ್ಕಪರಿಶೋಧಕ ಸಿರಿಗೇರಿ ಪನ್ನರಾಜ್ ಅವರು, ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಪದವಿ ಶಿಕ್ಷಣದ ಜೊತೆಯಲ್ಲಿ ಕೌಶಲ್ಯ ಇದ್ದಲ್ಲಿ ಯಶಸ್ವು ಸುಲಭಸಾಧ್ಯ. `ಬಳ್ಳಾರಿ ಉದ್ಯಮ ಫೌಂಡೇಶನ್' ಆಸಕ್ತರಿಗೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಪ್ರಾರಂಭಿಸಲು ಅಗತ್ಯ ನೆರವು ನೀಡಲಿದೆ ಎಂದರು.
ಜಿಲ್ಲಾ ಕೌಶಲ್ಯಾಧಿಕಾರಿ ಹಟ್ಟಪ್ಪ ಅವರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ದೇವೇಂದ್ರ ಅವರು ಕಾರ್ಯಕ್ರಮ ನಿರೂಪಿಸಿದರು.
ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಅರವಿಂದ ಪಾಟೀಲ್, ಉಪಾಧ್ಯಕ್ಷರು ಹಾಗು ಆರ್ವೈಎಂಇಸಿಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿರುವ ಜಾನೆಕುಂಟೆ ಬಸವರಾಜ್, ಪ್ರಾಂಶುಪಾಲರಾದ ಮಹಾಬಲೇಶ್ವರಗೌಡ ಹಾಗೂ ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ ತಾಂತ್ರಿಕ ವಿದ್ಯಾಲಯದ ಪ್ರಾಂಶುಪಾಲರಾದ ಬಿ. ಶ್ರೀಶೈಲಗೌಡ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್