ಎಸ್ಐಆರ್ : 20 ವರ್ಷಗಳ ರಾಜಕೀಯ ಭವಿಷ್ಯ : ಬಿ.ವೈ. ವಿಜಯೇಂದ್ರ
ಬಳ್ಳಾರಿ, 15 ಜುಲೈ (ಹಿ.ಸ.) ಆ್ಯಂಕರ್ : ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ಎಸ್ಐಆರ್ ವ್ಯವಸ್ಥೆಯಲ್ಲಿ ದೇಶದ 20 ವರ್ಷದ ಭವಿಷ್ಯವು ಅಡಗಿದೆ ಎಂದು ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜೊತ
ಎಸ್ಐಆರ್ : 20 ವರ್ಷಗಳ ರಾಜಕೀಯ ಭವಿಷ್ಯ : ಬಿ.ವೈ. ವಿಜಯೇಂದ್ರ


ಎಸ್ಐಆರ್ : 20 ವರ್ಷಗಳ ರಾಜಕೀಯ ಭವಿಷ್ಯ : ಬಿ.ವೈ. ವಿಜಯೇಂದ್ರ


ಎಸ್ಐಆರ್ : 20 ವರ್ಷಗಳ ರಾಜಕೀಯ ಭವಿಷ್ಯ : ಬಿ.ವೈ. ವಿಜಯೇಂದ್ರ


ಎಸ್ಐಆರ್ : 20 ವರ್ಷಗಳ ರಾಜಕೀಯ ಭವಿಷ್ಯ : ಬಿ.ವೈ. ವಿಜಯೇಂದ್ರ


ಬಳ್ಳಾರಿ, 15 ಜುಲೈ (ಹಿ.ಸ.)

ಆ್ಯಂಕರ್ : ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ಎಸ್ಐಆರ್ ವ್ಯವಸ್ಥೆಯಲ್ಲಿ ದೇಶದ 20 ವರ್ಷದ ಭವಿಷ್ಯವು ಅಡಗಿದೆ ಎಂದು ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜೊತೆಯಲ್ಲಿ ಬುಧವಾರ ಮಾತನಾಡಿದ ಅವರು, ಚುನಾವಣಾ ಆಯೋಗವು ನಡೆಸುತ್ತಿರುವ ಎಸ್ಐಆರ್ ಅನ್ನು ನಾವುಗಳು ನಿರ್ಲಕ್ಷಿಸಬಾರದು. ಮತದಾರರಿಂದ ಎಮ್ಯುನರೇಶನ್ ಫಾರಂ ಅನ್ನು ಪಡೆದು, ಬಿಎಲ್ಓಗಳಿಗೆ ತಪ್ಪದೇ ನೀಡಬೇಕು. ಈ ಪ್ರಕ್ರಿಯೆಯನ್ನು ನಾವುಗಳು ಮರೆತಲ್ಲಿ ನಮಗೇ ನಷ್ಟ ಎಂದು ಅವರು ಹೇಳಿದರು.

ಆಗಸ್ಟ್ 6 ರಿಂದ ಪ್ರಾರಂಭವಾಗುವ ಕರ್ನಾಟಕದ ಮುಂಗಾರು ಅಧಿವೇಶನದ ನಂತರ, ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಳ್ಳುವ ಯೋಜನೆ ಸಿದ್ದವಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷವನ್ನು ಸಂಘಟಿಸಿ, ರೈತರ ಸಂಕಷ್ಟಗಳನ್ನು ಅಲಿಸಲಾಗುತ್ತದೆ ಎಂದು ಹೇಳಿದರು.

ತುಂಗಭದ್ರ ಜಲಾಶಯದ ಕ್ರಸ್ಟ್ಗೇಟ್ ಪುನರ್ ನಿರ್ಮಾಣಕ್ಕೆ ಸಾಕಷ್ಟು ಸಮಯವನ್ನು ತೆಗೆದುಕೊಂಡರು. ಮುಖ್ಯಮಂತ್ರಿಗಳಿಗೆ ರಿಯಲ್ ಎಸ್ಟೇಟ್ ವ್ಯವಹಾರದ ಮೇಲೆ ಸಾಕಷ್ಟು ಆಸಕ್ತಿ ಇರುವ ಕಾರಣ ಅವರು ಬಿಡದಿ ಟೌನ್ಶಿಫ್ ಯೋಜನೆಯನ್ನು ಜಾರಿ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದೆ. ಬರ ಪರಿಹಾರ ಕಾಮಗಾರಿಗಳನ್ನು ನಡೆಸಲು ರಾಜ್ಯದಲ್ಲಿ ಕೃಷಿ ಸಚಿವರೇ ಇಲ್ಲವಾಗಿದೆ. ಕಾರಣ ಮುಖ್ಯಮಂತ್ರಿಗಳು ಕೃಷಿ ಸಚಿವರನ್ನು ತಕ್ಷಣವೇ ನೇಮಕ ಮಾಡಬೇಕು ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯರಾದ ವೈ.ಎಂ. ಸತೀಶ್, ಶಶಿಲ್ ಜಿ. ನಮೋಶಿ, ಶಾಸಕರಾದ ಜಿ. ಜನಾರ್ದನರೆಡ್ಡಿ, ಮುಖಂಡರಾದ ಬಿ. ಶ್ರೀರಾಮುಲು, ಸಣ್ಣ ಫಕ್ಕೀರಪ್ಪ, ಜಿ. ಸೋಮಶೇಖರರೆಡ್ಡಿ, ಎಂ.ಎಸ್. ಸೋಮಲಿಂಗಪ್ಪ, ಅನಿಲ್ ನಾಯ್ಡು ಮೋಕ, ಅರುಣಾ ಲಕ್ಷ್ಮಿ, ಡಾ. ಎಸ್.ಜೆ.ವಿ. ಮಹಿಪಾಲ್, ಇನ್ನಿತರರು ಈ ಸಂದರ್ಭದಲ್ಲಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande