ಕೆಸಿಸಿ ಯೋಜನೆಯಡಿ ಸಾಲ ಸೌಲಭ್ಯ: ಸದುಪಯೋಗಕ್ಕೆ ರೈತರಲ್ಲಿ ಮನವಿ
ರಾಯಚೂರು, 15 ಜುಲೈ (ಹಿ.ಸ.): ಆ್ಯಂಕರ್ : ರೈತರ ಆದಾಯ ವೃದ್ಧಿ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಬ್ಯಾಂಕುಗಳ ಮೂಲಕ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆ.ಸಿ.ಸಿ) ಯೋಜನೆಯಡಿ ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಚಟುವಟಿಕೆಗಳಿಗೆ ಸಾಲ ಸೌಲಭ್ಯವನ್ನು ಒದಗಿಸಲಾಗ
ಕೆಸಿಸಿ ಯೋಜನೆಯಡಿ ಸಾಲ ಸೌಲಭ್ಯ: ಸದುಪಯೋಗಕ್ಕೆ ರೈತರಲ್ಲಿ ಮನವಿ


ರಾಯಚೂರು, 15 ಜುಲೈ (ಹಿ.ಸ.):

ಆ್ಯಂಕರ್ : ರೈತರ ಆದಾಯ ವೃದ್ಧಿ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಬ್ಯಾಂಕುಗಳ ಮೂಲಕ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆ.ಸಿ.ಸಿ) ಯೋಜನೆಯಡಿ ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಚಟುವಟಿಕೆಗಳಿಗೆ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತಿದ್ದು, ಈ ಸಾಲ ಸೌಲಭ್ಯವನ್ನು ಜಿಲ್ಲೆಯ ಅರ್ಹ ರೈತರು ಸದುಪಯೋಗಪಡೆಯಬೇಕೆಂದು ಎಂದು ಜಿಲ್ಲಾ ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕರಾದ ಸುಧೀಂದ್ರ ಪಿ.ಆರ್., ಅವರು ತಿಳಿಸಿದ್ದಾರೆ.

ರೈತರು ವಿವಿಧ ಚಟುವಟಿಕೆಗಳಾದ ಹಾಲು ಉತ್ಪಾದನೆಗಾಗಿ ಹಸು, ಎಮ್ಮೆ ಸಾಕಾಣಿಕೆ, ಕುರಿ, ಮೇಕೆ, ಕೋಳಿ ಸಾಕಾಣಿಕೆ, ಪಶು ಆಹಾರ, ಔಷಧಿ, ನಿರ್ವಹಣಾ ವೆಚ್ಚಗಳು, ಮೀನುಗಾರಿಕೆ ಸಂಬಂಧಿತ ಚಟುವಟಿಕೆಗಳು ಹಾಗೂ ನಿರ್ವಹಣೆ, ಇತರೆ ಪಶು ಸಂಗೋಪನೆ ಆಧಾರಿತ ಜೀವನೋಪಾಯ ಚಟುವಟಿಕೆಗಳಿಗೆ ಅಗತ್ಯವಾದ ಹಣಕಾಸು ನೆರವನ್ನು ಕೆಸಿಸಿ ಯೋಜನೆಯಡಿ ನೀಡಲಾಗುವುದು.

ಕೆಸಿಸಿ ಪಶು ಪಾಲನೆ ಸಾಲದ ಪ್ರಮುಖ ಲಾಭಗಳು: ಸರಳ ಪ್ರಕ್ರಿಯೆಯ ಮೂಲಕ ಸಾಲ ಸೌಲಭ್ಯ, ಕಡಿಮೆ ಬಡ್ಡಿದರ ದಲ್ಲಿ ಸಾಲ (ಅರ್ಹತೆ ಹಾಗೂ ಸರ್ಕಾರದ ನಿಯಮಗಳ ಪ್ರಕಾರ ಬಡ್ಡಿ ಸಹಾಯ ಲಭ್ಯ), ಕಾರ್ಯನಿರ್ವಹಣಾ ಬಂಡವಾಳದ ಅವಶ್ಯಕತೆ ಪೂರೈಸಲು ನೆರವು, ರೈತರ ಆದಾಯ ಹೆಚ್ಚಳಕ್ಕೆ ಸಹಕಾರ, ಕೃಷಿಯೊಂದಿಗೆ ಪೂರಕ ಆದಾಯ ಮೂಲಗಳ ಅಭಿವೃದ್ಧಿಗೆ ಉತ್ತೇಜನ ನೀಡಲಾಗುತ್ತಿದ್ದು, ಜಿಲ್ಲೆಯ ಎಲ್ಲಾ ರೈತರು, ಪಶುಪಾಲಕರು, ಹೈನುಗಾರರು ಹಾಗೂ ಮೀನುಗಾರರು ಈ ಸೌಲಭ್ಯವನ್ನು ಪಡೆದುಕೊಳ್ಳಲು ತಮ್ಮ ಸಮೀಪದ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಿ ಕೆಸಿಸಿ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ತಮ್ಮ ಸಮೀಪದ ಬ್ಯಾಂಕ್ ಶಾಖೆ, ಜಿಲ್ಲಾ ಲೀಡ್ ಬ್ಯಾಂಕ್, ಕೃಷಿ ಇಲಾಖೆ, ಪಶು ಸಂಗೋಪನೆ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ .

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande