
ಪುಂಚ್, 15 ಜುಲೈ (ಹಿ.ಸ.):
ಆ್ಯಂಕರ್:
ಜಮ್ಮು-ಕಾಶ್ಮೀರದ ಪುಂಚ್ ಜಿಲ್ಲೆಯ ಮಂಡಿ ತಹಸೀಲಿನ ಸಾವಜಿಯನ್ ಸೆಕ್ಟರ್‌ನ ಗಢಾಹ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಜಂಟಿ ಶೋಧ ಕಾರ್ಯಾಚರಣೆಯಲ್ಲಿ ಉಗ್ರರ ಅಡಗುತಾಣವನ್ನು ಪತ್ತೆಹಚ್ಚಿ, ಹೆಚ್ಚಿನ ಪ್ರಮಾಣದ ಗುಂಡು-ಸಿಡಿಮದ್ದನ್ನು ವಶಪಡಿಸಿಕೊಂಡಿವೆ.
ಗುಪ್ತಚರ ಮಾಹಿತಿಯ ಆಧಾರದ ಮೇಲೆ ನಡೆದ ಕಾರ್ಯಾಚರಣೆಯಲ್ಲಿ ಅಡಗಿಸಿಟ್ಟಿದ್ದ ಪಿಕಾ ರೈಫಲ್‌ನ 246 ಸುತ್ತು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಳಿಕ ಉಗ್ರರ ಅಡಗುತಾಣವನ್ನು ಧ್ವಂಸಗೊಳಿಸಿ, ಸಿಕ್ಕಿದ್ದ ಶಸ್ತ್ರಾಸ್ತ್ರ ಮತ್ತು ಗುಂಡು-ಸಿಡಿಮದ್ದನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿವೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.