ಇಪಿಎಫ್ಒ ವತಿಯಿಂದ ಅಮ್ನೆಸ್ಟಿ–2026ರ ಯೋಜನೆ ಜಾರಿ
ರಾಯಚೂರು , 15 ಜುಲೈ (ಹಿ.ಸ.): ಆ್ಯಂಕರ್ : ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಅಮ್ನೆಸ್ಟಿ–2026ರ ಎಂಬ ಒಂದು ಬಾರಿ ಮಾತ್ರದ ವಿಶೇಷ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ಆದಾಯ ತೆರಿಗೆ ಕಾಯ್ದೆಯಡಿ ಮಾನ್ಯತೆ ಪಡೆದಿದ್ದರೂ, ಇಪಿಎಫ್ ಕಾಯ್ದೆ/ಸಾಮಾಜಿಕ ಭದ್ರತಾ ಸಂಹಿತೆಯಡಿ ಅಧಿಕೃತ ವಿನಾಯಿತಿ
ಇಪಿಎಫ್ಒ ವತಿಯಿಂದ ಅಮ್ನೆಸ್ಟಿ–2026ರ ಯೋಜನೆ ಜಾರಿ


ರಾಯಚೂರು , 15 ಜುಲೈ (ಹಿ.ಸ.):

ಆ್ಯಂಕರ್ : ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಅಮ್ನೆಸ್ಟಿ–2026ರ ಎಂಬ ಒಂದು ಬಾರಿ ಮಾತ್ರದ ವಿಶೇಷ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ಆದಾಯ ತೆರಿಗೆ ಕಾಯ್ದೆಯಡಿ ಮಾನ್ಯತೆ ಪಡೆದಿದ್ದರೂ, ಇಪಿಎಫ್ ಕಾಯ್ದೆ/ಸಾಮಾಜಿಕ ಭದ್ರತಾ ಸಂಹಿತೆಯಡಿ ಅಧಿಕೃತ ವಿನಾಯಿತಿ ಪಡೆಯದಿರುವ ಅರ್ಹ ಪಿಎಫ್ ಟ್ರಸ್ಟ್ಗಳಿಗೆ ತಮ್ಮ ವಿನಾಯಿತಿ ಸ್ಥಿತಿಯನ್ನು ನಿಯಮಿತಗೊಳಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಯೋಜನೆಯಡಿ ಅರ್ಹ ಸಂಸ್ಥೆಗಳು ನಿಗದಿತ ಷರತ್ತುಗಳನ್ನು ಪೂರೈಸಿ ಅರ್ಜಿ ಸಲ್ಲಿಸಿದಲ್ಲಿ, ಅಗತ್ಯ ವಿನಾಯಿತಿಗಳು ಹಾಗೂ ಹಿಂದಿನ ದಿನಾಂಕದಿಂದ ರೆಟ್ರೊಸ್ಪೆಕ್ಟಿವ್ ವಿನಾಯಿತಿ ಪಡೆಯುವ ಅವಕಾಶ ಲಭ್ಯವಿದೆ. ಈ ಯೋಜನೆಆರು ತಿಂಗಳ ಅವಧಿಗೆ ಜಾರಿಯಲ್ಲಿರುತ್ತದೆ.

ಅರ್ಹ ಸಂಸ್ಥೆಗಳು ಈ ವಿಶೇಷ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಇಪಿಎಫ್ಒ ಮನವಿ ಮಾಡಿದೆ ಎಂದು ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿಯ ಗ್ರೇಡ್ -2ರ ಆಯುಕ್ತರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande