
ಬಳ್ಳಾರಿ, 15 ಜುಲೈ (ಹಿ.ಸ.)
ಆ್ಯಂಕರ್: ಶಿಕ್ಷಕರ ದಿನಾಚರಣೆಯ ಅಂಗವಾಗಿ ಬೆಂಗಳೂರು ಗ್ಲೋಬಲ್ ಯೋಗ ಟ್ರಸ್ಟ್ ಯೋಗ ಶಿಕ್ಷಕರ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
ಅರ್ಜಿ ಸಲ್ಲಿಸುವವರು, ಅಧಿಕೃತ ಯೋಗ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಡಿಪ್ಲೋಮೋ ಅಥವಾ ಪದವಿ ಪಡೆದಿರಬೇಕು. ವಿವಿಧ ಸಂಘ-ಸಂಸ್ಥೆಗಳಿಂದ ಪ್ರಶಸ್ತಿಗಳನ್ನು ಪಡೆದಿರಬೇಕು. ಯೋಗ ಶಿಕ್ಷಕ ತರಬೇತಿ ಕೇಂದ್ರಗಳನ್ನು ನಿರ್ವಹಿಸುತ್ತಿರುವ ಕುರಿತು ಸಮಗ್ರ ಮಾಹಿತಿ, ವಿಳಾಸ, ಯೋಗಾಸನ ಸ್ಪರ್ಧೆಗಳಲ್ಲಿ ಪಾಲ್ಗೊಂಡ ಮತ್ತು ಪಡೆದಿರುವ ಪ್ರಶಸ್ತಿಗಳ ಪಟ್ಟಿಯನ್ನು ಗ್ಲೋಬಲ್ ಯೋಗ ಟ್ರಸ್ಟ್ ನಿಗಧಿ ಮಾಡಿರುವ ಅರ್ಜಿ ನಮೂನೆಯ ಜೊತೆಯಲ್ಲಿ ಲಗತ್ತಿಸಿ, ಸಲ್ಲಿಸಬೇಕು.
ಪುರುಷರಿಗೆ - ಯೋಗಶ್ರೀ, ಮಹಿಳೆಯರಿಗೆ ಯೋಗ ಜ್ಯೋತಿ, ಎಂಎಸ್ಸಿ ಯೋಗ ಪದವಿ ಮತ್ತು ಯೋಗ ಶಿಕ್ಷಕರ ತರಬೇತಿ ಕೇಂದ್ರವನ್ನು ನಡೆಸುತ್ತಿರುವವರಿಗೆ ಯೋಗ ರತ್ನ, 60 ವರ್ಷ ಮೇಲ್ಪಟ್ಟವರಿಗೆ ಯೋಗದಲ್ಲಿ ಜೀವಮಾನ ಸಾಧನೆ ಪ್ರಶಸ್ತಿಗಳನ್ನು ವಿತರಣೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ರಾಘವೇಂದ್ರ, ಬಳ್ಳಾರಿ ಜಿಲ್ಲಾ ಅಧ್ಯಕ್ಷರು, ಗ್ಲೋಬಲ್ ಯೋಗಾ ಸಮಿತಿ, ಮೊಬೈಲ್ - 9740359972 ಅಥವಾ ಚಿದಂಬರರಾವ್, ತಜ್ಞರು, ಮೊಬೈಲ್ - 9035878950 ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್