ಬಳ್ಳಾರಿ : ಶ್ರೀರಾಘವೇಂದ್ರ ಸ್ವಾಮಿಗಳ ರಥಕ್ಕಾಗಿ ದೇಣಿಗೆ ನೀಡಲು ಮನವಿ
ಬಳ್ಳಾರಿ, 15 ಜುಲೈ (ಹಿ.ಸ.) ಆ್ಯಂಕರ್: ಬಳ್ಳಾರಿಯ ಶ್ರೀರಾಘವೇಂದ್ರ ಸ್ವಾಮಿ ಶ್ರೀಮಠದಲ್ಲಿ ಪ್ರಾಕಾರೋತ್ಸವಕ್ಕೆ ಒಂದು ಭವ್ಯ ರಥವಿದ್ದು, ಶ್ರೀ ಗುರುರಾಯರ ಆರಾಧನಾ ಮಹೋತ್ಸವದಲ್ಲಿ ರಾಜಬೀದಿಯ ಮಹಾರಥೋತ್ಸವಕ್ಕೆ ಭವ್ಯ ರಥವನ್ನು ನಿರ್ಮಾಣ ಮಾಡಲು ಗುರುಗಳಾದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಗಳ ಆದೇಶ
ಬಳ್ಳಾರಿ : ಶ್ರೀರಾಘವೇಂದ್ರ ಸ್ವಾಮಿಗಳ ರಥಕ್ಕಾಗಿ ದೇಣಿಗೆ ನೀಡಲು ಮನವಿ


ಬಳ್ಳಾರಿ, 15 ಜುಲೈ (ಹಿ.ಸ.)

ಆ್ಯಂಕರ್: ಬಳ್ಳಾರಿಯ ಶ್ರೀರಾಘವೇಂದ್ರ ಸ್ವಾಮಿ ಶ್ರೀಮಠದಲ್ಲಿ ಪ್ರಾಕಾರೋತ್ಸವಕ್ಕೆ ಒಂದು ಭವ್ಯ ರಥವಿದ್ದು, ಶ್ರೀ ಗುರುರಾಯರ ಆರಾಧನಾ ಮಹೋತ್ಸವದಲ್ಲಿ ರಾಜಬೀದಿಯ ಮಹಾರಥೋತ್ಸವಕ್ಕೆ ಭವ್ಯ ರಥವನ್ನು ನಿರ್ಮಾಣ ಮಾಡಲು ಗುರುಗಳಾದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಗಳ ಆದೇಶದಂತೆ ನಿಶ್ಚಯಿಸಲಾಗಿದೆ.

ಬಳ್ಳಾರಿಯ ಸತ್ಯನಾರಾಯಣಪೇಟೆಯ ಶ್ರೀರಾಘವೇಂದ್ರ ಸ್ವಾಮಿ ಶ್ರೀಮಠದ ಆಡಳಿತಾಧಿಕಾರಿ ಪಂ.ಪ್ರಸನ್ನಾಚಾರ ಅವರು ಈ ಮಾಹಿತಿ ನೀಡಿದ್ದು, ನೂತನ ರಥ ನಿರ್ಮಾಣಕ್ಕೆ ಸುಮಾರು 12 ಲಕ್ಷ ರೂ. ಅಂದಾಜು ವೆಚ್ಚದ ಯೋಜನೆಯನ್ನು ಸಿದ್ದಪಡಿಸಲಾಗಿದೆ.

ಈ ವೆಚ್ಚವನ್ನು ಶ್ರೀರಾಘವೇಂದ್ರಸ್ವಾಮಿಗಳ ಭಕ್ತಾಧಿಗಳು ಮತ್ತು ದಾನಿಗಳಿಂದ ಸ್ವೀಕರಿಸಲು ನಿರ್ಧರಿಸಲಾಗಿದ್ದು, ಆಸಕ್ತರು, ಶ್ರೀಮಠದ ಕಾರ್ಯಾಲಯದಲ್ಲಿ ದೇಣಿಗೆ ಸಲ್ಲಿಸಿ, ಅಧಿಕೃತ ರಶೀದಿಯನ್ನು ಪಡೆಯಬೇಕು. ಅಥವಾ ಆನ್ಲೈನ್ ಮೂಲಕ ದೇಣಿಗೆ ಸಲ್ಲಿಸಲು ಆಸಕ್ತ ಭಕ್ತಾಧಿಗಳು, ಕರ್ನಾಟಕ ಬ್ಯಾಂಕ್ ಬಳ್ಳಾರಿ ಶಾಖೆಯ IFSC KARB0000074 - ಎಸ್ಬಿ ಖಾತೆ ಸಂಖ್ಯೆ : 0742500100442401, ಖಾತೆಗೆ ಜಮಾ ಮಾಡಬಹುದಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande