
ಜಮ್ಮು, 15 ಜುಲೈ (ಹಿ.ಸ.):
ಆ್ಯಂಕರ್:
ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಯ ನಡುವೆ ಜಮ್ಮುವಿನ ಭಗವತಿ ನಗರ ಯಾತ್ರಿಕರ ನಿವಾಸದಿಂದ ಅಮರನಾಥ ಯಾತ್ರೆಗೆ ಬುಧವಾರ ಮುಂಜಾನೆ 6,251 ಭಕ್ತರ ಹೊಸ ತಂಡವನ್ನು ರವಾನಿಸಲಾಯಿತು. ಈ ತಂಡದಲ್ಲಿ 50 ವಿದೇಶಿ ಭಕ್ತರೂ ಸೇರಿದ್ದರು.
ಅಧಿಕಾರಿಗಳ ಮಾಹಿತಿ ಪ್ರಕಾರ, 2,985 ಯಾತ್ರಿಕರು ಬಾಲಟಾಲ್ ಮಾರ್ಗವನ್ನು ಆಯ್ಕೆ ಮಾಡಿಕೊಂಡರೆ, 3,266 ಮಂದಿ ಪಹಲ್ಗಾಮ್‌ನ ನುನ್‌ವಾನ್ ಮೂಲ ಶಿಬಿರದ ಮೂಲಕ ಪ್ರಯಾಣ ಬೆಳೆಸಿದರು. ಯಾತ್ರಿಕರ ಸಾಗಣೆಗೆ 137 ಬಸ್‌ಗಳು, 34 ಮಧ್ಯಮ ಗಾತ್ರದ ವಾಹನಗಳು ಹಾಗೂ 59 ಲಘು ವಾಹನಗಳನ್ನು ಒಳಗೊಂಡ ಒಟ್ಟು 230 ವಾಹನಗಳನ್ನು ಬಳಸಲಾಯಿತು.
ಈ ತಂಡದಲ್ಲಿ 4,439 ಪುರುಷರು, 1,614 ಮಹಿಳೆಯರು, 13 ಮಕ್ಕಳು, 78 ಸಾಧುಗಳು, 53 ಸಾಧ್ವಿಯರು, ಒಬ್ಬ ಬಾಲ ಸಾಧು, ಮೂವರು ತೃತೀಯಲಿಂಗಿ ಯಾತ್ರಿಕರು ಹಾಗೂ 50 ವಿದೇಶಿ ಪುರುಷ ಭಕ್ತರು ಭಾಗವಹಿಸಿದ್ದರು.
ಬಾಲಟಾಲ್ ಮಾರ್ಗದ ವಾಹನಗಳ ತಂಡವು ಮುಂಜಾನೆ 2.42ಕ್ಕೆ ಹಾಗೂ ಪಹಲ್ಗಾಮ್ ಮಾರ್ಗದ ತಂಡವು ಬೆಳಿಗ್ಗೆ 3.27ಕ್ಕೆ ಭದ್ರತಾ ಪಡೆಗಳ ಕಟ್ಟುನಿಟ್ಟಿನ ನಿಗಾದಲ್ಲಿ ಹೊರಟಿತು.
ಜುಲೈ 2ರಂದು ಯಾತ್ರೆ ಆರಂಭವಾದ ಬಳಿಕ ಜಮ್ಮುವಿನ ಭಗವತಿ ನಗರ ಮೂಲ ಶಿಬಿರದಿಂದ ಅಮರನಾಥ ಪವಿತ್ರ ಗುಹಾ ದೇವಾಲಯದತ್ತ ಪ್ರಯಾಣ ಬೆಳೆಸಿದ ಯಾತ್ರಿಕರ ಒಟ್ಟು ಸಂಖ್ಯೆ 99,287ಕ್ಕೆ ಏರಿಕೆಯಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.