
ನವದೆಹಲಿ, 14 ಜುಲೈ (ಹಿ.ಸ.):
ಆ್ಯಂಕರ್:
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ನಾಲ್ಕನೇ ಸರಸಂಘಚಾಲಕರಾದ ಪ್ರೊ. ರಾಜೇಂದ್ರ ಸಿಂಗ್ 'ರಜ್ಜು ಭಯ್ಯಾ' ಅವರ ಪುಣ್ಯತಿಥಿಯ ಅಂಗವಾಗಿ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ರಾಜನಾಥ್ ಸಿಂಗ್, ಶಿವರಾಜ್ ಸಿಂಗ್ ಚೌಹಾಣ್, ಗಜೇಂದ್ರ ಸಿಂಗ್ ಶೇಖಾವತ್ ಹಾಗೂ ಅರ್ಜುನ್ ರಾಮ್ ಮೇಘವಾಲ್ ಸೇರಿದಂತೆ ಹಲವು ಗಣ್ಯರು ಭಾವಪೂರ್ಣ ನಮನ ಸಲ್ಲಿಸಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಜ್ಜು ಭಯ್ಯಾ ಅವರು ಭೌತಶಾಸ್ತ್ರದ ಪಂಡಿತ, ಶ್ರೇಷ್ಠ ಶಿಕ್ಷಣತಜ್ಞ ಹಾಗೂ ಅಪರೂಪದ ಸಂಘಟಕರಾಗಿದ್ದು, ಅವರ ಜೀವನ ರಾಷ್ಟ್ರ, ಸಮಾಜ ಮತ್ತು ಸಂಘಟನೆಗೆ ಸಮರ್ಪಿತವಾಗಿತ್ತು ಎಂದು ಸ್ಮರಿಸಿದರು. ಸ್ವದೇಶಿ, ಗ್ರಾಮೋದಯ ಹಾಗೂ ಆತ್ಮನಿರ್ಭರ ಭಾರತದ ಪರವಾಗಿ ಅವರು ನೀಡಿದ ಕೊಡುಗೆ ಮುಂದಿನ ಪೀಳಿಗೆಗೂ ಪ್ರೇರಣೆಯಾಗಲಿದೆ ಎಂದು ಹೇಳಿದರು.
ಕೇಂದ್ರ ಸಚಿವ ನಿತಿನ್ ಗಡ್ಕರಿ, ಶಿವರಾಜ್ ಸಿಂಗ್ ಚೌಹಾಣ್, ಗಜೇಂದ್ರ ಸಿಂಗ್ ಶೇಖಾವತ್ ಹಾಗೂ ಅರ್ಜುನ್ ರಾಮ್ ಮೇಘವಾಲ್ ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ರಜ್ಜು ಭಯ್ಯಾ ಅವರ ಸೇವೆ, ಸರಳತೆ, ರಾಷ್ಟ್ರಭಕ್ತಿ ಹಾಗೂ ಸಂಘಟನೆಗೆ ನೀಡಿದ ಅಮೂಲ್ಯ ಕೊಡುಗೆಯನ್ನು ಸ್ಮರಿಸಿ ಗೌರವ ನಮನ ಸಲ್ಲಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.