ರೈಲ್ವೆ ಇಲಾಖೆಯಲ್ಲಿ ಮಹತ್ವದ ಸುಧಾರಣೆ:ಭೂಸ್ವಾಧೀನಕ್ಕೆ ‘ರೈಲ್ ಭೂಮಿ’ ಪೋರ್ಟಲ್ ಆರಂಭ
ನವದೆಹಲಿ, 14 ಜುಲೈ (ಹಿ.ಸ.): ಆ್ಯಂಕರ್: ಭಾರತೀಯ ರೈಲ್ವೆಯ ಆಧುನೀಕರಣದ ಭಾಗವಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಲವು ಮಹತ್ವದ ರಚನಾತ್ಮಕ ಸುಧಾರಣೆಗಳನ್ನು ಘೋಷಿಸಿದ್ದಾರೆ. ರೈಲ್ವೆ ಭೂಸ್ವಾಧೀನ ಪ್ರಕ್ರಿಯೆಯನ್ನು ಪಾರದರ್ಶಕ, ವೇಗದ ಮತ್ತು ಪರಿಣಾಮಕಾರಿಯಾಗಿಸಲು ‘ರೈಲ್ ಭೂಮಿ’ ಎಂಬ ವೆಬ್‌ ಆ
ಅಶ್ವಿನಿ ವೈಷ್ಣವ್


ನವದೆಹಲಿ, 14 ಜುಲೈ (ಹಿ.ಸ.):

ಆ್ಯಂಕರ್:

ಭಾರತೀಯ ರೈಲ್ವೆಯ ಆಧುನೀಕರಣದ ಭಾಗವಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಲವು ಮಹತ್ವದ ರಚನಾತ್ಮಕ ಸುಧಾರಣೆಗಳನ್ನು ಘೋಷಿಸಿದ್ದಾರೆ. ರೈಲ್ವೆ ಭೂಸ್ವಾಧೀನ ಪ್ರಕ್ರಿಯೆಯನ್ನು ಪಾರದರ್ಶಕ, ವೇಗದ ಮತ್ತು ಪರಿಣಾಮಕಾರಿಯಾಗಿಸಲು ‘ರೈಲ್ ಭೂಮಿ’ ಎಂಬ ವೆಬ್‌ ಆಧಾರಿತ ಪೋರ್ಟಲ್ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2026ರ ಅವಧಿಯಲ್ಲಿ ರೈಲ್ವೆಯಲ್ಲಿ 52 ಪ್ರಮುಖ ಸುಧಾರಣೆಗಳನ್ನು ಜಾರಿಗೆ ತರಲಾಗುತ್ತಿದ್ದು, ನಿರ್ಮಾಣ, ಸರಕು ಸಾಗಣೆ, ಕೌಶಲ್ಯಾಭಿವೃದ್ಧಿ, ವ್ಯಾಗನ್ ವಿನ್ಯಾಸ ಹಾಗೂ ಕಂಟೇನರ್ ನೀತಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬದಲಾವಣೆ ಮಾಡಲಾಗಿದೆ ಎಂದರು.

ಫ್ಲೈ ಆ್ಯಷ್, ರಸಗೊಬ್ಬರ, ಆಹಾರ ಧಾನ್ಯ, ಹಿಟ್ಟು ಹಾಗೂ ಬೇಳೆಗಳನ್ನು ಇನ್ನು ಮುಂದೆ ಕಂಟೇನರ್‌ಗಳ ಮೂಲಕ ಸಾಗಿಸಲು ಅವಕಾಶ ಕಲ್ಪಿಸಲಾಗಿದ್ದು, ಇದರಿಂದ ಪರಿಸರ ಮಾಲಿನ್ಯ ಕಡಿಮೆಯಾಗುವುದರ ಜೊತೆಗೆ ಸುರಕ್ಷಿತ ಸಾಗಣೆ ಮತ್ತು ಸಂಗ್ರಹಣೆ ಸಾಧ್ಯವಾಗಲಿದೆ ಎಂದು ತಿಳಿಸಿದರು.

ಕಂಟೇನರ್ ರೈಲು ನಿರ್ವಾಹಕರ ನೀತಿಯಲ್ಲೂ ಬದಲಾವಣೆ ಮಾಡಲಾಗಿದ್ದು, ದೇಶದಾದ್ಯಂತ ಒಂದೇ ಪರವಾನಗಿ ವ್ಯವಸ್ಥೆ ಜಾರಿಯಾಗಲಿದೆ. ಎಲ್ಲಾ ಮಾರ್ಗಗಳಿಗೆ ಸಮಾನ ನೋಂದಣಿ ಶುಲ್ಕ ನಿಗದಿಪಡಿಸಲಾಗಿದ್ದು, 20 ವರ್ಷಗಳ ಯಶಸ್ವಿ ಕಾರ್ಯಾಚರಣೆಯ ಬಳಿಕ ಪರವಾನಗಿ ನವೀಕರಣಕ್ಕೆ ಹೆಚ್ಚುವರಿ ಶುಲ್ಕ ಇರುವುದಿಲ್ಲ ಎಂದರು.

ರೈಲ್ವೆ ಕಾಮಗಾರಿಗಳಲ್ಲಿ ಗುತ್ತಿಗೆದಾರರಿಗೆ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಕಾರ್ಯಾರಂಭಕ್ಕೂ ಮುನ್ನ ಕಾರ್ಯಕ್ಷಮತಾ ಭದ್ರತಾ ಠೇವಣಿ ಕಡ್ಡಾಯಗೊಳಿಸಲಾಗಿದೆ. ಗಂಭೀರ ನ್ಯಾಯಾಂಗ ವ್ಯಾಜ್ಯ ಹೊಂದಿರುವ ಗುತ್ತಿಗೆದಾರರಿಗೆ ಟೆಂಡರ್‌ನಲ್ಲಿ ಭಾಗವಹಿಸಲು ನಿರ್ಬಂಧ ವಿಧಿಸಲಾಗಿದೆ. ಜೊತೆಗೆ ವಿಮೆ ಕಡ್ಡಾಯಗೊಳಿಸಿ, ಕಾಮಗಾರಿಗಳ ಗುಣಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.

ತಾಂತ್ರಿಕ ಸಿಬ್ಬಂದಿಗೆ ಕೌಶಲ್ಯ ಪ್ರಮಾಣೀಕರಣ ವ್ಯವಸ್ಥೆ ಜಾರಿಗೆ ಬರಲಿದ್ದು, ಕ್ಯೂಆರ್‌ ಕೋಡ್‌ ಆಧಾರಿತ ಕೌಶಲ್ಯ ಕಾರ್ಡ್‌ಗಳನ್ನು ನೀಡಲಾಗುತ್ತದೆ. ವ್ಯಾಗನ್ ವಿನ್ಯಾಸ ಕ್ಷೇತ್ರದಲ್ಲೂ ಖಾಸಗಿ ವಲಯಕ್ಕೆ ಅವಕಾಶ ನೀಡಲಾಗಿದ್ದು, ಹೊಸ ವಿನ್ಯಾಸಗಳಿಗೆ ಅನುಮೋದನೆ ನೀಡಿ ರೈಲ್ವೆ ಜಾಲದಲ್ಲಿ ಬಳಸಲು ಅವಕಾಶ ಕಲ್ಪಿಸಲಾಗುವುದು ಎಂದು ಸಚಿವರು ಹೇಳಿದರು.

ಭಾರತೀಯ ರೈಲ್ವೆಯನ್ನು ಆಧುನಿಕ ತಂತ್ರಜ್ಞಾನ, ಪಾರದರ್ಶಕತೆ ಮತ್ತು ಕಾರ್ಯಕ್ಷಮತೆಯೊಂದಿಗೆ ಭವಿಷ್ಯದ ಅಗತ್ಯಗಳಿಗೆ ಹೊಂದುವಂತೆ ರೂಪಿಸುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande