ಪೊಲೀಸ್ ದಾಖಲೆಗಳಲ್ಲಿ ತಲೆಮರೆಸಿಕೊಂಡಿದ್ದ ನೀರಾವರಿ ಹೋರಾಟಗಾರ ವಿ.ಕೆ.ರಾಜೇಶ್ ಬಂಧನ
ಪೊಲೀಸ್ ದಾಖಲೆಗಳಲ್ಲಿ ತಲೆಮರೆಸಿಕೊಂಡಿದ್ದ ನೀರಾವರಿ ಹೋರಾಟಗಾರ ವಿ.ಕೆ.ರಾಜೇಶ್ ಬಂಧನ
ನೀರಾವರಿ ಹೋರಾಟಗಾರ ವಿ.ಕೆ.ರಾಜೇಶ್ ಕೋಲಾರದಲ್ಲಿ ನಡೆದ ಹಿರಿಯ ಐಪಿಎಸ್ ಅಧಿಕಾರಿ ಡಿ.ದೇವರಾಜ್ ಹುಟ್ಟು ಹಬ್ಬ ಆಚರಣೆಯಲ್ಲಿ ಪಾಲ್ಗೊಂಡಿರುವುದು.


ಕೋಲಾರ, ೧೪ ಜುಲೈ (ಹಿ.ಸ):

ಆ್ಯಂಕರ್ : ಕೋಲಾರ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಡಿ.ಕೆ ರವಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ವಿರುದ್ಧ ನಡೆದ ಪ್ರತಿಭಟನೆಯ ಸಮಯದಲ್ಲಿ ಅಂದಿನ ಶಾಸಕ ವರ್ತೂರ್ ಪ್ರಕಾಶ್ ಮನೆಯ ಮೇಲೆ ಕಲ್ಲುತೂರಾಟ ನಡೆಸಿ ಅವರ ಫ್ಲೆಕ್ಸಿಗೆ ಬೆಂಕಿ ಹಚ್ಚಿದ ಆರೋಪ ಎದುರಿಸುತ್ತಿರುವ ನೀರಾವರಿ ಹೋರಾಟಗಾರ ವಿ.ಕೆ. ರಾಜೇಶ್ ಅವರನ್ನು ಕೋಲಾರ ಟೌನ್ ಪೋಲಿಸರು ಮಂಗಳವಾರ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.

ವಿಕೆ ರಾಜೇಶ್ ಕಳೆದ ೧೧ ವರ್ಷಗಳಿಂದ ಪೊಲೀಸ್ ದಾಖಲೆಗಳ ಪ್ರಕಾರ ತಲೆಮರೆಸಿಕೊಂಡಿದ್ದರು. ಅವರ ಬಂಧನಕ್ಕೆ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು. ಆದರೆ ರಾಜೇಶ್ ಕೋಲಾರದಲ್ಲಿ ಲಭ್ಯವಿಲ್ಲ ಎಂದು ನ್ಯಾಯಕ್ಕೆ ಕೋಲಾರ ಟೌನ್ ಪೊಲೀಸರು ವರದಿ ಮಾಡಿದ್ದರು. ನ್ಯಾಯಾಲಯದ ಬಂಧನದ ವಾರೆಂಟ್ ಹೊರಡಿಸಿದ ನಂತರ ಸಹ ಪತ್ತೆಯಾಗದೆ ತಲೆಮರಿಸಿಕೊಂಡಿದ್ದ ಆರೋಪಿಗಳ ಪತ್ತೆಗೆ ಕೋಲಾರ ಎಸ್ಪಿ ವಿಶೇಷ ಸೂಚನೆ ನೀಡಿದ್ದರು. ಕೋಲಾರ ಜಿಲ್ಲಾಧಿಕಾರಿಯಾಗಿದ್ದ ಡಿ.ಕೆ. ರವಿ ಅವರು ವರ್ಗಾವಣೆಯ ನಂತರ ಕಳೆದ ೧೫ ಮೂರು ೨೦೧೫ರಲ್ಲಿ ಬೆಂಗಳೂರಿನ ಕೋರಮಂಗಲದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಡಿ.ಕೆ. ರವಿಯವರ ಆತ್ಮಹತ್ಯೆ ನಂತರ ಕೋಲಾರದಲ್ಲಿ ಮರುದಿನ ಬಂದ್ ಆಚರಿಸಲಾಯಿತು. ಪ್ರತಿಭಟನಾಕಾರರು ಕೋಲಾರದ ಬೆಮೆಲ್ ಲೇಔಟ್ ನಲ್ಲಿರುವ ಅಂದಿನ ಶಾಸಕ ವರ್ತೂರ್ ಪ್ರಕಾಶ್ ಮನೆಗೆ ತೆರಳಿ ಅವರ ಮನೆ ಮೇಲೆ ಕಲ್ಲುತೂರಾಟ ನಡೆಸಿ ಫ್ಲಕ್ಸ್ಗೆ ಬೆಂಕಿ ಹಚ್ಚಿದರು.

ಕೋಲಾರ ಟೌನ್ ಪೋಲಿಸರು ಆರೋಪಿಗಳಾದ ರಾಜೇಂದ್ರ, ಎ.ಇ.ಕೃಷ್ಣೆಗೌಡ, ಎಸ್ ಮಂಜುನಾಥ, ರೈತ ಸಂಘದ ಕೆ.ಶ್ರೀನಿವಾಸಗೌಡ, ಕಪಾಲಿ ಅಲಿಯಾಸ್ ಸಾಗರ್, ವಿ.ಕೆ. ರಾಜೇಶ್ ಹಾಗೂ ಕೆ. ನಾರಾಯಣಗೌಡರ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದರು.

ಕೋಲಾರ ಟೌನ್ ಪೋಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ ೧೪೩, ೧೪೭, ೧೪೮, ೪೨೭ ಮತ್ತು ೪೩೫ ರ ಪ್ರಕಾರ ದೋಷಾರೋಪ ಪಟ್ಟಿ ಸಲ್ಲಿಸಿದರು. ಆರೋಪಿಗಳು ಅಕ್ರಮ ಕೂಟ ಕಟ್ಟಿ ಶಾಸಕರ ಮನೆ ಮೇಲೆ ಕಲ್ಲುತೋರಾಟ ನಡೆಸಿ ಬೆಂಕಿ ಹಚ್ಚಿ ದಾಂದಲೆ ನಡೆಸಿರುವುದಾಗಿ ಆರೋಪಿಸಲಾಗಿತ್ತು. ಶಾಸಕ ವರ್ತೂರ್ ಪ್ರಕಾಶ್ ಭೂಗಳ್ಳ ಡಿ.ಕೆ.ರವಿಯವರ ಆತ್ಮಹತ್ಯೆಗೆ ಕಾರಣ ಎಂದು ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದರು ಎಂದು ನ್ಯಾಯಾಲಯಕ್ಕೆ ಸಲ್ಲಿಸಲಾದ ದೋಷಾರೋಪ ಪಟ್ಟಿಯಲ್ಲಿ ಆರೋಪಿಸಲಾಗಿತ್ತು.

ಪ್ರಕರಣದಲ್ಲಿ ವಿಕೆ ರಾಜೇಶ್ ಹೊರತುಪಡಿಸಿ ಎಲ್ಲಾ ಆರೋಪಿಗಳು ನ್ಯಾಯಾಲಯದಿಂದ ಜಾಮೀನು ಪಡೆದಿದ್ದರು ಪ್ರಕರಣದ ವಿಚಾರಣೆ ನಡೆಸಿದ ಕೋಲಾರದ ಪ್ರಧಾನ ಮುಖ್ಯ ನ್ಯಾಯಕಾ ದಂಡಾಧಿಕಾರಿ ಬಾಲಚಂದ್ರ ಎನ್ ಭಟ್ ನಾಲ್ಕು ವರ್ಷಗಳ ಹಿಂದೆ ತೀರ್ಪು ಪ್ರಕಟಿಸಿ ಎಲ್ಲಾ ಆರು ಮಂದಿ ಆರೋಪಿಗಳು ದೋಷಗಳಾಗಿದ್ದಾರೆ ಎಂದು ಘೋಷಿಸಿದರು. ಮನೆ ಮೇಲೆ ಕಲ್ಲುತೂರಾಟ ನಡೆಸಿ ಜಖಂಗೊಳಿಸಿದ ಕಾರಣ ಮನೆಯ ಮಾಲೀಕರಿಗೆ ಆರೋಪಿಗಳು ತಲಾ ೫೦೦ ಪರಿಹಾರ ನೀಡುವಂತೆ ನ್ಯಾಯಾಧೀಶರು ಆದೇಶ ಮಾಡಿದ್ದರು. ತೀರ್ಪು ಪ್ರಕಟವಾದ ನಂತರ ದೋಷಿತ ಆರೋಪಿಗಳು ನ್ಯಾಯಾಲಯದಿಂದ ಜಾಮೀನು ಪಡೆದಿದ್ದರು ಆದರೆ ಆರನೇ ಆರೋಪಿ ವಿಕೆ ರಾಜೇಶ್ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿದ ನಂತರ ಸಹ ನ್ಯಾಯಾಲಯದ ಮುಂದೆ ಹಾಜರಾಗಲಿಲ್ಲ ಇದರಿಂದಾಗಿ ಅವರನ್ನು ಘೋಷಿತ ಅಪರಾಧಿ ಎಂದು ನ್ಯಾಯಾಲಯ ಆದೇಶ ಹೊರಡಿಸಿತ್ತು.

ಮಂಗಳವಾರ ವಿ.ಕೆ.ರಾಜೇಶ್ ರವರವನ್ನು ಕೋಲಾರದಲ್ಲಿ ಬಂಧಿಸಿ ಕೋಲಾರದ ಪ್ರಧಾನ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಿ.ಕೆ. ರಾಜೇಶ್ ಹಲವಾರು ಕಾರ್ಯಕ್ರಮಗಳಲ್ಲಿ ಕೋಲಾರದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಂದಿಗೆ ವೇದಿಕೆ ಹಂಚಿಕೊ0ಡಿದ್ದರು. ಆದರೂ ರಾಜೇಶ್ ಪತ್ತೆಯಾಗುತ್ತಿಲ್ಲ ಎಂದು ಟೌನ್ ಪೊಲೀಸರು ನ್ಯಾಯಾಲಯಕ್ಕೆ ವರದಿ ಮಾಡಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande