ಕತಾರ್ನ ಮಾಜಿ ಅಮೀರ್ ನಿಧನಕ್ಕೆ ಸಂತಾಪ; ದೋಹಾಗೆ ತೆರಳಿದ ಕಿರಣ್ ರಿಜಿಜು
ನವದೆಹಲಿ, 14 ಜುಲೈ (ಹಿ.ಸ.): ಆ್ಯಂಕರ್: ಕತಾರ್‌ನ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ ಅವರ ನಿಧನಕ್ಕೆ ಭಾರತ ಸರ್ಕಾರ ಹಾಗೂ ಭಾರತೀಯರ ಪರವಾಗಿ ಸಂತಾಪ ಸೂಚಿಸಲು ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಂಗಳವಾರ ದೋಹಾಗೆ ತೆರಳಿದರು. ವಿದೇಶ
ಕಿರಣ ರಿಜಿಜು


ನವದೆಹಲಿ, 14 ಜುಲೈ (ಹಿ.ಸ.):

ಆ್ಯಂಕರ್:

ಕತಾರ್‌ನ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ ಅವರ ನಿಧನಕ್ಕೆ ಭಾರತ ಸರ್ಕಾರ ಹಾಗೂ ಭಾರತೀಯರ ಪರವಾಗಿ ಸಂತಾಪ ಸೂಚಿಸಲು ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಂಗಳವಾರ ದೋಹಾಗೆ ತೆರಳಿದರು.

ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಈ ಕುರಿತು ಮಾಹಿತಿ ನೀಡಿದ್ದು, ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ ಅವರು ಆಧುನಿಕ ಕತಾರ್ ನಿರ್ಮಾಣದಲ್ಲಿ ಮಹತ್ವದ ಪಾತ್ರವಹಿಸಿದ್ದ ನಾಯಕರು ಹಾಗೂ ಭಾರತದ ಆಪ್ತ ಸ್ನೇಹಿತರಾಗಿದ್ದರು ಎಂದು ಸ್ಮರಿಸಿದರು.

ಇಂಧನ, ವ್ಯಾಪಾರ, ಹೂಡಿಕೆ ಮತ್ತು ಜನರ ನಡುವಿನ ಸಂಪರ್ಕವನ್ನು ವಿಸ್ತರಿಸುವ ಮೂಲಕ ಭಾರತ–ಕತಾರ್ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವಲ್ಲಿ ಅವರ ಕೊಡುಗೆ ಮಹತ್ವದ್ದಾಗಿದ್ದು, ಅದನ್ನು ಭಾರತ ಸದಾ ಸ್ಮರಿಸಲಿದೆ ಎಂದು ಅವರು ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande