

ಬಳ್ಳಾರಿ, 14 ಜುಲೈ (ಹಿ.ಸ.)
ಆ್ಯಂಕರ್ : ಬಳ್ಳಾರಿ ಜಿಲ್ಲಾಡಳಿತವು ವಶಕ್ಕೆ ಪಡೆದಿರುವ 4.44 ಎಕರೆ ವಿಸ್ತೀರ್ಣದ ಮೊಸಾನಿಕ್ ಹಾಲ್ನಲ್ಲಿ ಮಹಿಳಾ ಒಳಕ್ರೀಡಾಂಗಣವನ್ನು ಪ್ರಾರಂಭಿಸಲು ಕೋರಿ ಆಲ್ ಇಂಡಿಯಾ ಮಹಿಳಾ ಸಾಂಸ್ಕøತಿಕ ಸಂಘಟನೆಯ ಬಳ್ಳಾರಿ ಜಿಲ್ಲಾ ಘಟಕವು ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ.
ಆಲ್ ಇಂಡಿಯಾ ಮಹಿಳಾ ಸಾಂಸ್ಕøತಿಕ ಸಂಘಟನೆಯ ಬಳ್ಳಾರಿ ಜಿಲ್ಲಾ ಘಟಕವು ಜಿಲ್ಲಾಡಳಿತಕ್ಕೆ ಮಂಗಳವಾರ ಮನವಿ ಸಲ್ಲಿಸಿ, ಜಿಲ್ಲಾಡಳಿತವು ಸರ್ಕಾರಿ ಭೂಮಿಗಳ ಅತಿಕ್ರಮಣವನ್ನು ತೆರವುಗೊಳಿಸುವ ಅಭಿಯಾನವನ್ನು ನಡೆಸುತ್ತಿರುವುದು ಸ್ವಾಗತಾರ್ಹ. ಅದೇ ರೀತಿಯಲ್ಲಿ, ಸ್ವಾಧೀನಕ್ಕೆ ಪಡೆದಿರುವ ಸರ್ಕಾರಿ ನಿವೇಶನಗಳ ಪೈಕಿ, ಮೊಸಾನಿಕ್ ಹಾಲ್ ಪ್ರದೇಶದಲ್ಲಿ ಮಹಿಳಾ ಒಳಾಂಗಣ ಕ್ರೀಡಾಂಗಣವನ್ನು ಪ್ರಾರಂಭಿಸಬೇಕು ಎಂದು ಕೋರಿದರು.
ಈ ಪ್ರದೇಶದಲ್ಲಿ ಮಹಿಳೆಯರಿಗಾಗಿ ಈಜುಕೊಳ, ಗ್ರಂಥಾಲಯ, ಜಿಮ್, ಇನ್ನಿತರೆಗಳನ್ನು ಪ್ರಾರಂಭಿಸಬೇಕು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್