ಬ್ರಹ್ಮಿಣಿ ಸ್ಟೀಲ್ಸ್ ; ರೈತರಿಗೆ ಭೂಮಿ ಹಿಂದುರುಗಿಸಲು ಕೆಪಿಆರ್ಎಸ್ ಆಗ್ರಹ
ಬಳ್ಳಾರಿ, 14 ಜುಲೈ (ಹಿ.ಸ.) ಆ್ಯಂಕರ್ : ಬ್ರಹ್ಮಿಣಿ ಸ್ಟಿಲ್ 14,000 ಎಕರೆ ಭೂಮಿಯನ್ನು ವಶಕ್ಕೆ ಪಡೆದಿರುವ ಆಂಧ್ರಪ್ರದೇಶದ ಸರ್ಕಾರವು ಆ ಭೂಮಿಯನ್ನು ಮೂಲ ರೈತರಿಗೆ ಹಂಚಿಕೆ ಮಾಡಿ, ಕೃಷಿಯನ್ನು ಸಂರಕ್ಷಣೆ ಮಾಡಿ ದೇಶಕ್ಕೇ ಮಾದರಿ ಆಗಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘವು ಆಗ್ರಹಿಸಿದೆ. ಕರ್ನಾಟಕ
ಬ್ರಹ್ಮಿಣಿ ಸ್ಟೀಲ್ಸ್ ; ರೈತರಿಗೆ ಭೂಮಿ ಹಿಂದುರುಗಿಸಲು ಕೆಪಿಆರ್ಎಸ್ ಆಗ್ರಹ


ಬಳ್ಳಾರಿ, 14 ಜುಲೈ (ಹಿ.ಸ.)

ಆ್ಯಂಕರ್ : ಬ್ರಹ್ಮಿಣಿ ಸ್ಟಿಲ್ 14,000 ಎಕರೆ ಭೂಮಿಯನ್ನು ವಶಕ್ಕೆ ಪಡೆದಿರುವ ಆಂಧ್ರಪ್ರದೇಶದ ಸರ್ಕಾರವು ಆ ಭೂಮಿಯನ್ನು ಮೂಲ ರೈತರಿಗೆ ಹಂಚಿಕೆ ಮಾಡಿ, ಕೃಷಿಯನ್ನು ಸಂರಕ್ಷಣೆ ಮಾಡಿ ದೇಶಕ್ಕೇ ಮಾದರಿ ಆಗಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘವು ಆಗ್ರಹಿಸಿದೆ.

ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಯು.ಬಸವರಾಜ ಮತ್ತು ಪ್ರಧಾನ ಕಾರ್ಯದರ್ಶಿ ಟಿ. ಯಶವಂತ್ ಅವರು ಪತ್ರಿಕಾ ಪ್ರಕಟಣೆ ನೀಡಿ, ಆಂಧ್ರಪ್ರದೇಶ ಸರ್ಕಾರವು ಗಣಿ ಉದ್ಯಮಿ, ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರು ಕೈಗಾರಿಕೆ ಸ್ಥಾಪನೆಗಾಗಿ ಕಡಪ ಜಿಲ್ಲೆಯ ಜಮ್ಮಲಮಡುಗು ತಾಲೂಕಿನ ಅಮ್ಮಾವರಂ ಪ್ರದೇಶದಲ್ಲಿ 14,000 ಎಕರೆ ಜಮೀನನ್ನು ಸ್ವಾಧೀನಕ್ಕೆ ಪಡೆದಿದ್ದರು. ಆದರೆ, ಕೈಗಾರಿಕೆಯನ್ನು ಈವರೆಗೆ ಪ್ರಾರಂಭಿಸಿಲ್ಲ. ಸರ್ಕಾರ ಈ ಭೂಮಿಯನ್ನು ಸ್ವಾಧೀನಕ್ಕೆ ಪಡೆದಿರುವುದು ಸ್ವಾಗತಾರ್ಹ ಎಂದಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande